ಸೆಲೆಬ್ರಿಟಿಗಳ ಅಭಿಮಾನಿಗಳನ್ನು ಒಟ್ಟುಗೂಡಿಸಿ ಕ್ರಿಕೆಟನ್ನು ಆಡಿಸುವ ನಮ್ ಟಾಕೀಸ್ ನೇತೃತ್ವದ ಫ್ಯಾನ್ಸ್ ಕ್ರಿಕೆಟ್ ಲೀಗ್ ಈ ಬಾರಿ 9ನೇ ಸೀಸನ್ ಗೆ ಕಾಲಿಟ್ಟಿದೆ.
9 ತಂಡಗಳು ಟ್ರೋಫಿಗಾಗಿ ಹಣಾಹಣೆ ನಡೆಸಲಿವೆ. ಈಗಾಗಲೇ ಪಂದ್ಯಗಳ ಶೆಡ್ಯೂಲ್ ಕೂಡ ಹೊರ ಬಿದ್ದಿದೆ.
ನ.30 ರಂದು ( ಬುಧವಾರ) ಬೆಂಗಳೂರಿನಲ್ಲಿ ಫ್ಯಾನ್ಸ್ ಕ್ರಿಕೆಟ್ ಲೀಗ್ -9 ನ ಆಕರ್ಷಕ ಟ್ರೋಫಿಯನ್ನು ಗಣ್ಯರು ಬಿಡುಗಡೆ ಮಾಡಿದರು.
ಕರ್ನಾಟಕ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಭಾ.ಮ.ಹರೀಶ್, ನಟ ಲವ್ಲಿ ಸ್ಟಾರ್ ಪ್ರೇಮ್, ನಟ ರವಿಗೌಡ, ಎಂ,ಎಂ,ಬಿ ಲೆಗೆಸ್ಸಿಯ ಮಾಲೀಕರಾದ ನವರಸನ್ , ಸಿನಿಮಾ ಪ್ರಚಾರಕಾರರಾದ ಪಿಆರ್ ಓ ವೆಂಕಟೇಶ್ ಹಾಗೂ ಹಲವು ಗಣ್ಯರು ಭಾಗಿಯಾಗಿ ಪಂದ್ಯ ಕೂಟಕ್ಕೆ ಶುಭಕೋರಿದ್ದಾರೆ.


ಈ ವೇಳೆ ಒಂಬತ್ತು ತಂಡಗಳ ಕ್ಯಾಪ್ಟನ್ ಗಳು ಜೊತೆಯಾಗಿದ್ದರು.




ಇದೇ ಶನಿವಾರ ಹಾಗೂ ಭಾನುವಾರ ಅಂಬರೀಶ್ ಅವರ ಆಶೀರ್ವಾದಿಂದ ನಡೆಯಲಿದೆ.

