HomeFans Celebrationಯಶಸ್ವಿಯಾಗಿ ಸಮಾಪ್ತಿ ಕಂಡಿತು 'ಫ್ಯಾನ್ಸ್ ಕ್ರಿಕೆಟ್ ಲೀಗ್'! 'ದೇವರಾಜ್ ಫ್ಯಾನ್ಸ್' ತಂಡಕ್ಕೆ ಜಯ

ಯಶಸ್ವಿಯಾಗಿ ಸಮಾಪ್ತಿ ಕಂಡಿತು ‘ಫ್ಯಾನ್ಸ್ ಕ್ರಿಕೆಟ್ ಲೀಗ್’! ‘ದೇವರಾಜ್ ಫ್ಯಾನ್ಸ್’ ತಂಡಕ್ಕೆ ಜಯ

ಸಿನಿಮಾ ಹಾಗು ಕ್ರಿಕೆಟ್ ಪ್ರೇಮಿಗಳ ಅಪೂರ್ವ ಸಮಾಗಮ, ಸಿನಿಮಾ ಸ್ಟಾರ್ ಗಳ ಅಭಿಮಾನಿಗಳು ಜೊತೆಯಾಗಿ ಆಡುವ ಏಕೈಕ ಕ್ರಿಕೆಟ್ ಪಂದ್ಯಾಟ, ‘ನಮ್ ಟಾಕೀಸ್’ ಅವರು ನಡೆಸುವ ‘ಫ್ಯಾನ್ಸ್ ಕ್ರಿಕೆಟ್ ಲೀಗ್’. ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿಯೇ ಆರಂಭ ಕಂಡ ಈ ರೋಚಕ ಕ್ರಿಕೆಟ್ ಪಂದ್ಯಾಟ, ಗಣ್ಯರ ನಡುವಲ್ಲೇ ಯಶಸ್ವಿಯಾಗಿ ಸಮಾಪ್ತಿ ಕಂಡಿತು. ಒಟ್ಟು ಕಣಕ್ಕಿಳಿದ ಹನ್ನೆರಡು ಘಟನುಘಟಿ ತಂಡಗಳಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಅಭಿಮಾನಿಗಳ ತಂಡವಾದ ‘ದೇವರಾಜ್ ಫ್ಯಾನ್ಸ್’ ತಂಡ ಉಳಿದ ತಂಡಗಳನ್ನ ಮಣಿಸಿ ಕಪ್ ಗೆದ್ದಿತು. ಎರಡು ದಿನಗಳು ನಡೆದಂತಹ ಈ ರೋಚಕ ಪಂದ್ಯಾಟ ಚಂದನವನದ ಹಲವು ತಾರೆಗಳಿಂದ ಸಿಂಗರಿಸಲ್ಪಟ್ಟಿತ್ತು.

‘ನಮ್ ಟಾಕೀಸ್’ ಅವರ ಮುಂದಾಳತ್ವದಲ್ಲಿ, ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಆಶೀರ್ವಾದದ ಜೊತೆಗೆ ನಡೆದಂತಹ ‘ಫ್ಯಾನ್ಸ್ ಕ್ರಿಕೆಟ್ ಲೀಗ್’ ನ ಹತ್ತನೇ ಆವೃತ್ತಿ ‘FCL – 10’ ಇದೆ ಮೇ 27 ಹಾಗು 28ರಂದು ಬೆಂಗಳೂರಿನ ಯಲಹಂಕದ ಹೊಯ್ಸಳ ಕ್ರೀಡಾಂಗಣದಲ್ಲಿ ನಡೆಯಿತು. ಒಟ್ಟು ಆಟಕ್ಕಿಳಿದಿದ್ದ ಹನ್ನೆರಡು ತಂಡಗಳು ಆರು ಓವರ್ ಗಳ ಪಂದ್ಯವನ್ನ ಆಡಿ, ಕೊನೆಯದಾಗಿ ಸೆಮಿಫೈನಲ್ ಗೆ ನಾಲ್ಕು ತಂಡಗಳು ತಲುಪಿದವು. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರ ಅಭಿಮಾನಿಗಳ ‘ಶಿವಸೈನ್ಯ’ ಹಾಗು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಅಭಿಮಾನಿಗಳ ‘ಆಲ್ ಇಂಡಿಯಾ ಪ್ರಜ್ವಲ್ ದೇವರಾಜ್ ಫ್ಯಾನ್ಸ್’ ತಂಡ ಮೊದಲ ಸೆಮಿ ಆಡಿದರೆ, ಡೈನಮಿಕ್ ಸ್ಟಾರ್ ದೇವರಾಜ್ ಅವರ ಅಭಿಮಾನಿಗಳ ‘ದೇವರಾಜ್ ಫ್ಯಾನ್ಸ್’ ತಂಡ ಹಾಗು ರಘು ಮುಖರ್ಜಿ ಹಾಗು ಅನು ಪ್ರಭಾಕರ್ ಅವರ ‘ರಘು ಅನು ಫ್ಯಾನ್ಸ್’ ತಂಡ ಎರಡನೇ ಸೆಮಿ ಆಡಿದರು. ಎರಡು ಕೂಡ ಉತ್ತಮ ಹೋರಾಟ ಕಂಡುಬಂದಂತಹ ಈ ಎರಡು ಸೆಮಿಫೈನಲ್ ಗಳನ್ನು ಮುಗಿಸಿ ‘ದೇವರಾಜ್ ಫ್ಯಾನ್ಸ್’ ಹಾಗು ‘ಶಿವಸೈನ್ಯ’ ತಂಡ ಫೈನಲ್ ತಲುಪಿದರು. ಅಂತಿಮವಾಗಿ ತಮ್ಮ ಅದ್ಭುತ ಪ್ರದರ್ಶನದ ಕಾರಣದಿಂದಾಗಿ ‘ದೇವರಾಜ್ ಫ್ಯಾನ್ಸ್’ ತಂಡ ‘ಶಿವಸೈನ್ಯ’ ತಂಡವನ್ನು ಮಣಿಸಿ ‘FCL – 10’ ರ ಕಿರೀಟವನ್ನ ತನ್ನದಾಗಿಸಿಕೊಂಡರು.

ಈ ವಿಶೇಷ ಶುಭಗಳಿಗೆಯ ಅತಿಥಿಗಳಾಗಿ ಹಲವು ಗಣ್ಯರುಗಳು ಆಗಮಿಸಿದ್ದರು. ಯಲಹಂಕ ಕ್ಷೇತ್ರದ MLA ಗಳಾದ ಎಸ್ ಆರ್ ವಿಶ್ವನಾಥ್ ಅವರು, ಕನ್ನಡದ ಖ್ಯಾತ ಸಿನಿ ದಂಪತಿ ರಘು ಮುಖರ್ಜಿ ಹಾಗು ಅನು ಪ್ರಭಾಕರ್, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದಂತಹ ಭಾ ಮ ಹರೀಶ್ ಅವರು, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷರು ಆದಂತಹ ಜಗದೀಶ್ ಗೌಡ್ರು, ಜೊತೆಗೆ ಬಿಜೆಪಿ ಕಾರ್ಯಕರ್ತರಾದಂತಹ ಮಧು ಕೆ ಈ ಬಿ, ಮಂಜು, ವಿಕ್ಕಿ, ಅರುಣ್ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.

ಹಲವು ದಿನಗಳ ಸಿದ್ಧತೆ ಓಡಾಟದ ನಂತರ ಕೊನೆಯದಾಗಿ ಎರಡು ದಿನಗಳ ಈ ಕ್ರಿಕೆಟ್ ಪಂದ್ಯಾಟ ಕಂಡಂತಹ ಯಶಸ್ಸು ನಮ್ಮ ‘ನಮ್ ಟಾಕೀಸ್’ ತಂಡಕ್ಕೆ ಸಂತಸ ನೀಡಿದೆ. ಮೊದಲಿನಿಂದ ಜೊತೆಯಲಿದ್ದು, ಸಹಕರಿಸಿದವರಿಗೆ, ಬಿಡುವು ಮಾಡಿಕೊಂಡು ಈ ಶುಭಗಳಿಗೆಯಲ್ಲಿ ನಮ್ಮೊಡನಿದ್ದ ಗೆಳೆಯರು ಹಾಗು ಇತರ ಹಿರಿಯರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳನ್ನ ತಿಳಿಸಲು ಇಚ್ಛೆಸುತ್ತೇವೆ. ಜೊತೆಗೆ ಪಂದ್ಯಾಟದಲ್ಲಿ ಪಾಲ್ಗೊಂಡ ಹನ್ನೆರಡು ತಂಡಗಳಿಗೂ ಕೂಡ ಧನ್ಯವಾದಗಳು. ಜೊತೆಯಲಿ ನಿಂತು ಸಹಕರಿಸಿದ ಎಲ್ಲರಿಗೂ ಈ ವೇಳೆ ನಮ್ಮ ವಂದನೆಗಳನ್ನ ಅರ್ಪಿಸುತ್ತೇವೆ. ಆರಂಭದಿಂದಲೂ ಬೆನ್ನಹಿಂದೆ ನಿಂತು ಬೆನ್ನು ತಟ್ಟುತ್ತಾ ಪ್ರೋತ್ಸಾಹ ನೀಡುತ್ತಿರುವ ಕನ್ನಡ ಚಿತ್ರರಂಗದ ಗಣ್ಯರಿಗೂ, ಸ್ಟಾರ್ ಕಲಾವಿದರಿಗೂ ಧನ್ಯವಾದಗಳು. ಅಲ್ಲದೇ ನಮ್ಮನ್ನು ಸ್ಪಾನ್ಸರ್ ಗಳಾಗಿ ಸೇರಿ, ಸಹಾಯ ನೀಡಿದವರಿಗೂ, ನಮ್ಮ ಎಲ್ಲಾ ಸ್ನೇಹಿತರಿಗೂ, ಕನ್ನಡ ಚಿತ್ರರಂಗದ ಅಪಾರ ಅಭಿಮಾನಿ ಸಾಗರಕ್ಕೂ ನಾವು ಸದಾ ಚಿರಋಣಿ. ನಿಮ್ಮೆಲ್ಲರ ಸಹಕಾರದಿಂದಲೇ ಈ ಪಂದ್ಯಾಟ ಇಷ್ಟು ಯಶಸ್ಸು ಪಡೆದದ್ದು. ಜೊತೆಯಲ್ಲಿ ನಿಂತು ಸಹಕರಿಸಿದ ಪ್ರತಿಯೊಬ್ಬರಿಗೂ ನಮ್ಮ ಕೃತಜ್ಞತೆಗಳನ್ನು ತಿಳಿಸಲು ಇಚ್ಚಿಸುತ್ತೇವೆ.

RELATED ARTICLES

Most Popular

Share via
Copy link
Powered by Social Snap