HomeFans Celebrationಹನ್ನೆರಡು ತಂಡಗಳು, ಒಂದು ಟ್ರೋಫಿ! ಸಿನಿಪ್ರೇಮಿಗಳು ಜೊತೆಯಾಗಿ ಆಡುವ ಏಕೈಕ ಕ್ರಿಕೆಟ್ ಕೂಟ "ಫ್ಯಾನ್ಸ್ ಕ್ರಿಕೆಟ್...

ಹನ್ನೆರಡು ತಂಡಗಳು, ಒಂದು ಟ್ರೋಫಿ! ಸಿನಿಪ್ರೇಮಿಗಳು ಜೊತೆಯಾಗಿ ಆಡುವ ಏಕೈಕ ಕ್ರಿಕೆಟ್ ಕೂಟ “ಫ್ಯಾನ್ಸ್ ಕ್ರಿಕೆಟ್ ಲೀಗ್”

ನಮ್ಮಲ್ಲಿ ಅತಿಹೆಚ್ಚು ಅಭಿಮಾನ ಬೆಳೆದಿರುವುದು ಒಂದು ಕ್ರಿಕೆಟ್ ಗೆ, ಇನ್ನೊಂದು ಸಿನಿಮಾಗೆ. ಇವೆರಡರ ಅಭಿಮಾನಿಗಳು ಒಂದೆಡೆ ಸೇರಿದರೆ? ಹೌದು, ಸಿನಿಮಾ ಪ್ರೇಮಿಗಳು, ಸಿನಿಮಾ ಕಲಾವಿದರ ಅಭಿಮಾನಿಗಳು ಜೊತೆಯಾಗಿ ಆಡುವಂತಹ ಕ್ರಿಕೆಟ್ ಪಂದ್ಯಾಟ ‘ಫ್ಯಾನ್ಸ್ ಕ್ರಿಕೆಟ್ ಲೀಗ್”. ವಿವಿಧ ಪ್ರಖ್ಯಾತ ಕಲಾವಿದರ ಅಭಿಮಾನಿಗಳಾಗಿ, ಕ್ರಿಕೆಟ್ ಆಡುವ ಕ್ರೀಡಾಪಟುಗಳಾಗಿ ಒಟ್ಟು ಹನ್ನೆರಡು ತಂಡಗಳಲ್ಲಿ ಆಟಗಾರರು ಅಥವಾ ಅಭಿಮಾನಿಗಳು ಕಣಕ್ಕಿಳಿಯುತ್ತಾರೆ. ‘ನಮ್ ಟಾಕೀಸ್’ ನಡೆಸುವ ಈ ಪ್ರತಿಷ್ಟಿತ ‘ಫ್ಯಾನ್ಸ್ ಕ್ರಿಕೆಟ್ ಲೀಗ್’ ನ ಹತ್ತನೇ ಆವೃತ್ತಿ ಇದೇ ಮೇ 27 ಹಾಗು 28 ರಂದು ನಡೆಯಲಿದೆ. ಯಲಹಂಕದ ‘ಹೊಯ್ಸಳ ಕ್ರೀಡಾಂಗಣ’ ಈ ಕ್ರಿಕೆಟ್ ಪಂದ್ಯಾಟಕ್ಕೆ ಅಂಕಣವಾಗಲಿದೆ. ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಆಶೀರ್ವಾದವಿರುವ ಈ ‘FCL – 10’ಗೆ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ.


ಒಟ್ಟು ಹನ್ನೆರಡು ತಂಡಗಳು ನಾಲ್ಕು ಗುಂಪುಗಳಾಗಿ ಈ ಕ್ರಿಕೆಟ್ ಲೀಗ್ ನಲ್ಲಿ ಆಡುತ್ತಾರೆ. ಎ ಗುಂಪಿನಲ್ಲಿ ‘ಪ್ರಜ್ವಲ್ ದೇವರಾಜ್ ಅಭಿಮಾನಿಗಳು’,’ಲವ್ಲೀ ಸ್ಟಾರ್ ಪ್ರೇಮ್ ಫ್ಯಾನ್ಸ್’ ಹಾಗು ‘ಅಪ್ಪು ಬಾಯ್ಸ್’ ತಂಡಗಳಿದ್ದರೆ, ಬಿ ಗುಂಪಿನಲ್ಲಿ ‘ನೀನಾಸಂ ಸತೀಶ್ ಫ್ಯಾನ್ಸ್’,’ಕರಾಟೆ ಕಿಂಗ್ ಶಂಕರ್ ನಾಗ್ ಅಭಿಮಾನಿಗಳು’ ಹಾಗು ಶಿವರಾಜಕುಮಾರ್ ಅಭಿಮಾನಿಗಳ,’ಶಿವಸೈನ್ಯ’ ತಂಡಗಳಿವೆ. ಇನ್ನು ಸಿ ಗುಂಪಿನಲ್ಲಿ ‘ಜಗ್ಗೇಶ್ ಅಭಿಮಾನಿಗಳು’,’ಟೈಗರ್ ಪ್ರಭಾಕರ್ ಅಭಿಮಾನಿಗಳು’,ಹಾಗು ‘ರಘು ಮುಖರ್ಜಿ-ಅನು ಪ್ರಭಾಕರ್ ಫ್ಯಾನ್ಸ್ ಕ್ಲಬ್’ ತಂಡಗಳಿವೆ. ಇನ್ನು ಕೊನೆಯದಾಗಿ ಡಿ ಗುಂಪಿನಲ್ಲಿ ‘ತೂಗುದೀಪ ಡೈನಾಸ್ಟಿ ಫ್ಯಾನ್ಸ್’, ಗೋಲ್ಡನ್ ಸ್ಟಾರ್ ಗಣೇಶ್ ಅವರ ಅಭಿಮಾನಿಗಳ ‘ಗೋಲ್ಡ್ ಫ್ಯಾನ್ಸ್’ ಹಾಗು ‘ಡೈನಾಮಿಕ್ ಸ್ಟಾರ್ ದೇವರಾಜ್ ಅಭಿಮಾನಿಗಳ ಸಂಘ’ ತಂಡಗಳು ಇರಲಿವೆ. ಒಟ್ಟು ಹನ್ನೆರಡು ತಂಡಗಳು ಆರು ಓವರ್ ಗಳ ಹನ್ನೆರಡು ಲೀಗ್ ಪಂದ್ಯಗಳನ್ನ ಆಡಲಿದ್ದಾರೆ. ನಂತರ ಎರಡು ಸೆಮಿಫೈನಲ್ ಹಾಗು ಕೊನೆಯದಾಗಿ ಗೆದ್ದ ತಂಡಗಳು ಟ್ರೋಫಿಗಾಗಿ ಫೈನಲ್ ಆಡಲಿದ್ದಾರೆ.

ಮೇ 27ರಂದು ಉದ್ಘಾಟನೆಯಾಗಲಿರೋ ‘ಫ್ಯಾನ್ಸ್ ಕ್ರಿಕೆಟ್ ಲೀಗ್’ನ ಹತ್ತನೇ ಆವೃತ್ತಿಗೆ ಚಿತ್ರರಂಗದ ಗಣ್ಯರು ಆಗಮಿಸಲಿದ್ದಾರೆ. ಈ ಪಂದ್ಯಾಟಕ್ಕೆ ಅತಿಹೆಚ್ಚು ಪ್ರೋತ್ಸಾಹ ನೀಡಿರುವ ಡೈನಾಮಿಕ್ ಸ್ಟಾರ್ ದೇವರಾಜ್ ಅವರು, ಅವರ ಪುತ್ರ ಪ್ರಜ್ವಲ್ ದೇವರಾಜ್ ಹಾಗು ಪ್ರಣಮ್ ದೇವರಾಜ್ ಅವರು ಕೂಡ ಈ ಗಳಿಗೆಯಲ್ಲಿ ಉಪಸ್ಥಿತರಿರಲಿದ್ದಾರೆ. ಇವರಷ್ಟೇ ಅಲ್ಲದೇ ಯಲಹಂಕ ಕ್ಷೇತ್ರದ MLAಗಳಾದ ಎಸ್ ಆರ್ ವಿಶ್ವನಾಥ್ ಅವರು, ಚಂದನವನದ ಪ್ರಖ್ಯಾತ ಕಲಾವಿದರಾದಂತಹ ಭಾವನಾ ರಾವ್, ನಿರಂಜನ್ ದೇಶಪಾಂಡೆ, ಲವ್ಲೀ ಸ್ಟಾರ್ ಪ್ರೇಮ್, ಸೆನ್ಸೇಷನಲ್ ಸ್ಟಾರ್ ಕೋಮಲ್, ಅನು ಪ್ರಭಾಕರ್, ರಘು ಮುಖರ್ಜಿ ಸೇರಿದಂತೆ ಇನ್ನು ಹಲವರು ಆಗಮಿಸಲಿದ್ದಾರೆ. ಮೇ 27 ಹಾಗು 28ರಂದು ನಡೆಯಲಿರುವ ಪಂದ್ಯಾಟಗಳ ವೇಳಾಪಟ್ಟಿ ಕೂಡ ಬಿಡುಗಡೆಯಾಗಿದೆ. ‘ನಮ್ ಟಾಕೀಸ್’ನ ಮುಖ್ಯಸ್ಥರಾದ ಭರತ್ ಹಾಗು ತಂಡದವರು ಈ ‘ಫ್ಯಾನ್ಸ್ ಕ್ರಿಕೆಟ್ ಲೀಗ್’ಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

RELATED ARTICLES

Most Popular

Share via
Copy link
Powered by Social Snap