ನಮ್ ಟಾಕೀಸ್ ನೇತೃತ್ವದಲ್ಲಿ ನಡೆಯುವ ಫ್ಯಾನ್ಸ್ ಕ್ರಿಕೆಟ್ ಲೀಗ್ -9 ಗೆ ದಿನಗಣನೆ ಆರಂಭವಾಗಿದೆ. ಇದೇ ಡಿ.3,4 ರಂದು ಎಫ್ ಸಿಎಲ್ -9 ಸ್ಟಾರ್ಸ್ ಅಭಿಮಾನಿಗಳ ಟೀಮ್ ಗಳು ಟ್ರೋಫಿಗಾಗಿ ಹಣಾಹಣೆ ನಡೆಸಲಿವೆ.
ರೆಬೆಲ್ ಸ್ಟಾರ್ ಅಂಬರೀಶ್ ಅವರ ಆಶೀರ್ವಾದೊಂದಿಗೆ ಈ ಬಾರಿಯ ಎಫ್ ಸಿಎಲ್ ನಡೆಯಲಿದೆ. ತಂಡಗಳ ಜೆರ್ಸಿ ಲಾಂಚ್ ಆದ ಬಳಿಕ ಇತ್ತೀಚೆಗೆ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅವರು ತಂಡಗಳ ಪಂದ್ಯಗಳನ್ನು ಚೀಟಿಯ ಮೂಲಕ ಆಯ್ಕೆ ಮಾಡಿದ್ದರು.


9 ತಂಡಗಳು ಎ,ಬಿ,ಸಿ ಗುಂಪುಗಳಾಗಿ ಮೂರು ತಂಡಗಳಾಗಿ ಡಿವೈಡ್ ಆಗಲಿದ್ದು, ಈ ಮೂರು ತಂಡಗಳಲ್ಲಿ ಒಂದು ತಂಡಗಳು ರನ್ ರೇಟ್ ಹಾಗೂ ಅಂಕಗಳ ಆಧಾರದಿಂದ ಮುಂದಿನ ಸುತ್ತು ಅಂದರೆ ಡಿ ಗ್ರೂಪ್ ಗೆ ತೇರ್ಗಡೆ ಆಗುತ್ತದೆ. ಡಿ ಗ್ರೂಪ್ ನಲ್ಲಿ ತಂಡಗಳಿಗೆ ಎರಡು ಪಂದ್ಯಗಳು ಇರಲಿವೆ. ಇದರಲ್ಲಿ ಎರಡು ಟಾಪ್ ತಂಡಗಳು ಫೈನಲ್ ಗೆ ಬರುತ್ತದೆ.


ಎಫ್ ಸಿಎಲ್ ಗೆ ಅನೇಕ ಸೆಲೆಬ್ರಿಟಿಗಳು, ಸೋಶಿಯಲ್ ಮೀಡಿಯಾ ಪೇಜ್ ಗಳು, ಸಿನಿಮಾ ಪೇಜ್ ಗಳು ಸಹಕಾರ, ಪ್ರೋತ್ಸಾಹ ನೀಡುತ್ತಿದ್ದಾರೆ.
ಎ2 entertainment ಯುಟ್ಯೂಬ್ ನಲ್ಲಿ ಪಂದ್ಯಾಕೂಟ ಲೈವ್ ಸ್ಟ್ರೀಮಿಂಗ್ ಕಾಣಲಿದೆ.



