HomeFans Celebrationಫ್ಯಾನ್ಸ್‌ ಕ್ರಿಕೆಟ್‌ ಲೀಗ್‌ ಟ್ರೋಫಿ ಗೆದ್ದ ಅಪ್ಪು ಫ್ಯಾನ್ಸ್‌ : ನಮ್‌ ಟಾಕೀಸ್‌ ನಿಂದ ಎಲ್ಲರಿಗೂ...

ಫ್ಯಾನ್ಸ್‌ ಕ್ರಿಕೆಟ್‌ ಲೀಗ್‌ ಟ್ರೋಫಿ ಗೆದ್ದ ಅಪ್ಪು ಫ್ಯಾನ್ಸ್‌ : ನಮ್‌ ಟಾಕೀಸ್‌ ನಿಂದ ಎಲ್ಲರಿಗೂ ಸ್ಪೆಷೆಲ್‌ ಥ್ಯಾಂಕ್ಸ್‌

ನಮ್‌ ಟಾಕೀಸ್‌ ನೇತೃತ್ವದ ಫ್ಯಾನ್ಸ್‌ ಕ್ರಿಕೆಟ್‌ ಲೀಗ್ ಸೀಸನ್‌ -9 ಯಶಸ್ವಿಯಾಗಿ ಮುಕ್ತಾಯ ಕಂಡಿದೆ. ಸ್ಟಾರ್‌ ಗಳ ಒಂಬತ್ತು ತಂಡಗಳು ಪಂದ್ಯಾಕೂಟದಲ್ಲಿ ಭಾಗಿಯಾಗಿದೆ. ಅಂತಿಮವಾಗಿ ಫೈನಲ್‌ ಪಂದ್ಯದಲ್ಲಿ ಅಪ್ಪು ಫ್ಯಾನ್ಸ್‌ ವಸಿಷ್ಠ ಫ್ಯಾನ್ಸ್‌ ತಂಡವನ್ನು ಮಣಿಸಿ ಈ ಬಾರಿ ಕಪನ್ನು ತನ್ನದಾಗಿಸಿಕೊಂಡಿದೆ.

ನಿನ್ನೆಯಿಂದ – ಇವತ್ತಿನವರೆಗೂ ಯಾವುದೇ ಗೊಂದಲ – ಗದ್ದಲ್ಲವಿಲ್ಲದೇ ಪಂದ್ಯಗಳು ಸಾಗಿ ಬಂದಿದೆ. ಪ್ರತಿಬಾರಿಯಂತೆ ಈ ಬಾರಿಯೂ ನಮ್ಮ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಎಲ್ಲರಿಗೂ ನಮ್‌ ಟಾಕೀಸ್‌ ಧನ್ಯವಾದವನ್ನು ಸಲ್ಲಿಸುತ್ತದೆ.

ನಾವು ಹೀಗೀಗೆ ಕ್ರಿಕೆಟ್‌ ಮಾಡುತ್ತಿದ್ದೇವೆ ಎಂದಾಗ ಮಾಡಿ ಎಂದು ನಮ್ಮನ್ನು ಪ್ರೋತ್ಸಾಹಿದ, A2Music ತಂಡ , ಕರ್ನಾಟಕ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾಮ ಹರೀಶ್‌ , ಪ್ರತಿಕಾಗೋಷ್ಟಿ ಆಯೋಜಿಸಿ ಕೊಟ್ಟ ಎಂಎಂ ಲೆಗೆಸ್ಸಿಯ ನವರಸನ್‌ , MMMGroups , ಇದರೊಂದಿಗೆ ಟ್ರೋಫಿಯನ್ನು ಸ್ಪಾನ್ಸರ್‌ ಮಾಡಿಸಿಕೊಟ್ಟ ಎನ್‌ ವನ್ ಕ್ರಿಕೆಟ್ ಅಕಾಡೆಮಿ ಸುನಿಲ್ ಕುಮಾರ್, ಪಿ.ಆರ್.ಓ ವೆಂಕಟೇಶ್‌ ಅವರಿಗೂ ಈ ಸಂದರ್ಭದಲ್ಲಿ ವಿಶೇಷವಾಗಿ ಧನ್ಯವಾದವನ್ನು ಸಲ್ಲಿಸುತ್ತಿದ್ದೇವೆ.

ಎ2 ಮ್ಯೂಸಿಕ್‌ ನಲ್ಲಿ ಲೈವ್‌ ಸ್ಟ್ರೀಮಿಂಗ್‌ ಆಗಿ ಪಂದ್ಯಾಕೂಟ ಸಾಗಿ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ನಮ್ಮನ್ನು ಪ್ರೋತ್ಸಾಹಿಸಿ ನಮ್ಮ ಮಾಧ್ಯಮ ಮಿತ್ರರು , ಸೋಷಿಯಲ್ ಮೀಡಿಯಾ ರವರಿಗೆ ಧನ್ಯವಾದವನ್ನು ನಮ್‌ ಟಾಕೀಸ್‌ ಸಲ್ಲಿಸುತ್ತಿದೆ.

ಫೈನಲ್‌ ಪಂದ್ಯಾಟದ ವೇಳೆ ಅಭಿಷೇಕ್‌ ಅಂಬರೀಶ್‌ ಅವರು ಭಾಗಿಯಾಗಿ ಎರಡೂ ತಂಡಗಳಿಗೆ ಶುಭಕೋರಿದರು.

ಮತ್ತೊಂದು ದೊಡ್ಡ ಧನ್ಯವಾದವನ್ನು ಅಭಿಮಾನಿಗಳಿಗೆ ಹಾಗೂ ಸೆಲೆಬ್ರಿಟಿಗಳಿಗೆ. ನಿಮ್ಮ ಸಹಕಾರ – ಸಲಹೆ ಇಲ್ಲದಿದ್ರೆ ಇದು ಬಹುಶಃ ಕಷ್ಟ ಸಾಧ್ಯವಾಗುತ್ತಿತ್ತೇನೋ. ಈ ವೇಳೆ ನಿಮ್ಮ ಋಣವನ್ನು ನಾವು ಸ್ಮರಿಸಿ ಧನ್ಯವಾದವನ್ನು ಸಲ್ಲಿಸುತ್ತಿದ್ದೇವೆ.

RELATED ARTICLES

Most Popular

Share via
Copy link
Powered by Social Snap