ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ನಿರ್ದೇಶಕರಾದ ಜಿ ಕೆ ಮುದ್ದುರಾಜ್ ಅವರು ಇದೀಗ ಮರಳಿ ನಿರ್ದೇಶನದತ್ತ ಮುಖ ಮಾಡಿದ್ದಾರೆ. ತಮ್ಮ ಯಶಸ್ವಿ ಸಿನಿಮಾಗಳಾದ ‘ಜಯಭೇರಿ’,’ರಣಚಂಡಿ’ಗಳ ನಂತರ ಇದೀಗ ಹಲವು ವರುಷಗಳೇ ಕಳೆದ ಮೇಲೆ ಜಿ ಕೆ ಮುದ್ದುರಾಜ್ ಅವರು ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಅದು ‘ಎಜುಕೇಟೆಡ್ ಬುಲ್ಸ್’ ಎಂಬ ಹೊಸಪರಿಯ ಕಥಾಹಂದರದ ಸಿನಿಮಾದ ಮೂಲಕ. ಸದ್ಯ ಮುಹೂರ್ತ ನೆರೆವೆರಿಸಿಕೊಂಡಿರುವ ಈ ಚಿತ್ರಕ್ಕೆ ಸ್ವತಃ ನಿರ್ದೇಶಕ ಜಿ ಕೆ ಮುದ್ದುರಾಜ್ ಅವರು ಕಥೆ ಹಾಗು ಚಿತ್ರಕತೆ ಬರೆದಿದ್ದಾರೆ.
ರಾಜಾಜಿನಗರದ ಆಂಜನೇಯ ಹಾಗು ಸಾಯಿಬಾಬಾ ದೇವಸ್ಥಾನದಲ್ಲಿ ಈ ‘ಎಜುಕೇಟೆಡ್ ಬುಲ್ಸ್’ ಸಿನಿಮಾದ ಮುಹೂರ್ತ ನೆರೆವೇರಿತು. ಚಿತ್ರಸಾಹಿತಿ ಕವಿರತ್ನ ಡಾ| ವಿ ನಾಗೇಂದ್ರ ಪ್ರಸಾದ್ ಅವರು ಕ್ಯಾಮೆರಾ ಚಾಲನೆ ಮಾಡಿದರೆ, ಭಾ ಮ ಗಿರೀಶ್ ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಒಡೆಯರ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣಗೊಳ್ಳುತ್ತಿದ್ದು, ತನುಷ್, ಯಶಸ್ ಅಭಿ, ರಾಕೇಶ್ ಚಂದ್ರ, ಹರ್ಷಿಣಿ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಜಗದೀಶ್ ಅವರ ಸಂಭಾಷಣೆ, ರಾಘವೇಂದ್ರ ಛಾಯಾಗ್ರಹಣ, ಬಾಬುಖಾನ್ ಅವರ ಕಲಾ ನಿರ್ದೇಶನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಸಂಜೀವ್ ರೆಡ್ಡಿ ಸಂಕಲನ ಈ ಸಿನಿಮಾದಲ್ಲಿರಲಿದೆ. ಒಂದೇ ಹಂತದಲ್ಲಿ ಸುಮಾರು ನಲವತ್ತು ದಿನಗಳಲ್ಲಿ ಚಿತ್ರೀಕರಣ ಮುಗಿಸುವ ಆಲೋಚನೆ ಚಿತ್ರತಡದ್ದು.



