ದೂಧ್ ಪೇಡ ದಿಗಂತ್ ಮೊದಲನಿಂದಲೂ ವಿಭಿನ್ನ ಕಥೆಗಳನ್ನು ಆಯ್ದುಕೊಳ್ಳುವ ನಟ, ಅವರ ಈ ಹಿಂರೆ ‘ಕಥೆಯೊಂದು ಶುರುವಾಗಿದೆ’ ಎನ್ನುವ ಭಿನ್ನವಾದ ಕಥೆಯಲ್ಲಿ ಅವರು ಮಿಂಚಿದ್ದರು.
‘ಗಾಳಿಪಟ -2’ ಸಿನಿಮಾದ ಸಕ್ಸಸ್ ನಲ್ಲಿ ಖುಷಿಯಾಗಿರುವ ದಿಗಿ, ಈಗ ಮತ್ತೊಂದು ಚಿತ್ರದ ತಯಾರಿಯತ್ತ ಮುಖ ಮಾಡಿದ್ದಾರೆ.


‘ಎಡಗೈಯೇ ಅಪಘಾತಕ್ಕೆ ಕಾರಣ’ ಕ್ಯಾಚಿ ಟೈಟಲ್ ಇಟ್ಟುಕೊಂಡು ಪರಿಣಾಮ ಕಥೆಯೊಂದಿಗೆ ದಿಗಂತ್ ಬರಲಿದ್ದಾರೆ. ಈ ಚಿತ್ರದ ಮೂಲಕ ಧನು ಹರ್ಷ ಎಂಬ ಯುವ ಪ್ರತಿಭೆ ಈ ಸಿನಿಮಾ ಮೂಲಕ ಸ್ಯಾಂಡಲ್ ವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ.
ವಿಶ್ವ ಎಡಚರ ದಿನದ ಅಂಗವಾಗಿ (ಎಡಗೈಯನ್ನೇ ಹೆಚ್ಚಾಗಿ ಬಳಸುವವರು) ನಾಯಕಿಯನ್ನು ಪರಿಚಯ ಮಾಡಿರುವುದು ವಿಶೇಷ.
ಸಮರ್ಥ್ ಬಿ ಕಡ್ಕೋಳ್ ನಿರ್ದೇಶನ ಮಾಡಿರುವ ಚಿತ್ರದಲ್ಲಿ ಧನು ಹರ್ಷ ರಾಧಿಕಾ ಎನ್ನುವ ಪಾತ್ರವನ್ನು ಮಾಡಲಿದ್ದಾರೆ.
ಈ ಹಿಂದೆ ದಿಗಂತ್ ಅವರ ಮೊದಲ ಲುಕ್ ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಡಿಫ್ರೆಂಟ್ ಶೇಡ್ ನಲ್ಲಿ ಕಾಣಿಸಿಕೊಂಡಿರುವುದರಿಂದ ಈ ಪಾತ್ರ ತಮಗೆ ವಿಶೇಷವಾದದ್ದು ಎನ್ನುತ್ತಾರೆ ನಟಿ ಧನು.

