ದುನಿಯಾ ವಿಜಯ್ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅವರ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ‘ಭೀಮ’ ಟೀಸರ್ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ.
ಇದೇ ಸಮಯದಲ್ಲಿ ವಿಜಯ್ ಅವರ 29ನೇ ಸಿನಿಮಾ ಘೋಷಣೆ ಆಗಿದೆ. ‘ಸಲಗ’ದ ಬಳಿಕ ಹೈಪ್ ಹೆಚ್ಚಿಸಿಕೊಂಡಿರುವ ವಿಜಯ್ ಅವರು ಈ ಹಿಂದೆ ‘ಜಂಟಲ್ ಮ್ಯಾನ್’ ಹಾಗೂ ಕಳೆದ ಸೂಪರ್ ಹಿಟ್ ಆದ ‘ಗುರು ಶಿಷ್ಯರು’ ಸಿನಿಮಾವನ್ನು ನಿರ್ದೇಶನ ಮಾಡಿ ಗಮನ ಸೆಳೆದಿದ್ದ ಜಡೇಶ್ ಕುಮಾರ್ ಅವರು ವಿಜಯ್ 29ನೇ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಹುಟ್ಟು ಹಬ್ಬಕ್ಕೆ ಸಿನಿಮಾದ ಪೋಸ್ಟರ್ ರಿಲೀಸ್ ಆಗಿ,ಸಿನಿಮಾದ ಬಗ್ಗೆ ಘೋಷಣೆ ಹೊರ ಬಿದ್ದಿದೆ. ಕೃಷ್ಣ ಸಾರ್ಥಕ್ ಹಾಗೂ ಜಡೇಶ್ ಕುಮಾರ್ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ.
‘ವೀರಸಿಂಹ ರೆಡ್ಡಿ’ ಸಿನಿಮಾದ ಮೂಲಕ ಅವರು ತೆಲುಗು ಆಡಿಯನ್ಸ್‌ಗೂ ಪರಿಚಯವಾಗಿದ್ದಾರೆ. ಈ ಎಲ್ಲಾ ಕಾರಣಗಳನ್ನು ಇಟ್ಟುಕೊಂಡು ‘ವಿಕೆ 29’ನ್ನು ದೊಡ್ಡ ಸಿನಿಮಾವನ್ನಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಕಥೆ ಕೂಡ ಯೂನಿವರ್ಸಲ್ ಆಗಿ ಕನೆಕ್ಟ್ ಆಗುವಂತಹದ್ದೇ ಆಗಿದೆ’ ಎನ್ನುತ್ತಾರೆ ಜಡೇಶ್ ಕುಮಾರ್.
ವಿಜಯ್ ಅವರಿಗೆ ಬರೆದಿರುವ ಕಥೆ ದೊಡ್ಡ ಕ್ಯಾನ್ವಾಸ್‌ನಲ್ಲಿ ನಿರ್ಮಾಣವಾಗಲಿರುವ ಚಿತ್ರ. ನಾನು ಬರೆದಿರುವ ಕಥೆ ಸ್ವಾತಂತ್ರ್ಯದ ನಂತರ ನಡೆಯುತ್ತದೆ. ಕೆಲವು ನೈಜ ಘಟನೆಗಳನ್ನು ಆಧರಿಸಿ ಈ ಕಥೆ ಬರೆದಿದ್ದೇನೆ. ಕಂಪ್ಲೀಟ್ ಆ್ಯಕ್ಷನ್ ಇರುತ್ತದೆ. ವಿಜಯ್ ಅವರ ಕರಿಯರ್‌ನಲ್ಲಿ ಮತ್ತು ನನ್ನ ಕರಿಯರ್‌ನಲ್ಲಿಇದೊಂದು ರೀತಿಯ ವಿಭಿನ್ನ ಆಲೋಚನೆ ಮತ್ತು ಪ್ರಯತ್ನ ಎನ್ನಬಹುದು’ ಎಂದು ಹೇಳಿದ್ದಾರೆ ಜಡೇಶ್ ಕುಮಾರ್.
‘ಭೀಮ’ ಬಳಿಕ ಚಿತ್ರೀಕರಣ ಆರಂಭವಾಗಲಿದೆ.

