ದುನಿಯಾ ವಿಜಯ್ ಟಾಲಿವುಡ್ ನಲ್ಲಿ ಬಾಲಯ್ಯ ಎದುರಾಳಿಯಾಗಿ ಖಡಕ್ ಮಾಸ್ ವಿಲನ್ ಆಗಿ ಅಬ್ಬರಿಸಿದ್ದಾರೆ. ‘ವೀರ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ವಿಜಿ ವಿಲನ್ ಆಗಿ ಮಿಂಚಿದ್ದಾರೆ.
ಟಾಲಿವುಡ್ ವಿಜಯ್ ಖಳನಾಯಕನಾಗಿ ನಟಿಸಿದ್ದೇಕೆ ಎನ್ನುವುದರ ಕುರಿತು ನಡೆಸಿದ ಸಂದರ್ಶನವೊಂದರಲ್ಲಿ ವಿಜಿ ಮಾತಾನಾಡಿದ್ದಾರೆ.
ಕನ್ನಡ ಸಿನಿಮಾದಲ್ಲಿ ವಿಲನ್ ಆಗಿ ನಟಿಸಬೇಕಾದರೆ ಯಾವ ನಟನೊಂದಿಗೆ ಫೈಟ್ ಮಾಡುತ್ತೀರಾ ಎನ್ನುವ ಪ್ರಶ್ನೆಗೆ ಶಿವರಾಜ್ ಅವರೊಂದಿಗೆ ನಟಿಸಲು ಇಷ್ಟಪಡುತ್ತೇನೆ ಎಂದರು.
ಟಾಲಿವುಡ್ ನಲ್ಲಿ ಬಾಲಕೃಷ್ಣ ಹೇಗೆ ಎನರ್ಜಿಟಿಕ್ ಮಾಸ್ ನಟನೋ ಅದೇ ರೀತಿ ಕನ್ನಡದಲ್ಲಿ ಶಿವಣ್ಣ ಎಂದ ದುನಿಯಾ ವಿಜಯ್ ಈಗಾಗಲೇ ಚಿತ್ರ ಮಾಡುವುದರ ಕುರಿತು ನಾನು ಹಾಗೂ ಶಿವಣ್ಣ ಮಾತನಾಡಿದ್ದೇವೆ, ಆದರೆ ಒಳ್ಳೆಯ ಕಥೆ ಸಿಕ್ಕಿಲ್ಲ, ದೇವರಾಣೆ ಶಿವಣ್ಣ ಚಿತ್ರದಲ್ಲಿ ನಾನು ವಿಲನ್ ಆಗಿ ನಟಿಸುವುದು ಪಕ್ಕಾ ಎಂದರು.
ಪುನೀತ್ ರಾಜ್‍ಕುಮಾರ್ ಅವರ ಸಿನಿಮಾದಲ್ಲಿ ನಾನು ಖಳನಾಯಕನಾಗಿ ನಟಿಸುವ ಅವಕಾಶ ಬಂದಿತ್ತು.
ಚಿತ್ರವೊಂದರಲ್ಲಿ ಅಪ್ಪು ಸರ್ ಮುಂದೆ ನಾನು ವಿಲನ್ ಆಗಿ ನಟಿಸಲು ಮಾತುಕತೆ ನಡೆದಿತ್ತು. ಇದನ್ನು ಕೇಳಿದ್ದ ಪುನೀತ್ ರಾಜ್‌ಕುಮಾರ್ ಅವರು ವಿಜಯ್ ಅವರು ವಿಲನ್ ಪಾತ್ರ ಮಾಡ್ತಾರಾ ಎಂದು ಅನುಮಾನದಿಂದ ಕೇಳಿದ್ದರು ಹಾಗೂ ನಾನು ಖಂಡಿತ ಮಾಡ್ತೇನೆ, ನಿಮ್ಮ ಜತೆ ನಟಿಸುವುದು ನನ್ನ ಪುಣ್ಯ ಎಂದು ಹೇಳಿದ್ದೆ ಎಂದು ದುನಿಯಾ ವಿಜಯ್ ತಿಳಿಸಿದರು.

