ಬೇರೆ ಭಾಷೆಯಲ್ಲಿ ಕನ್ನಡದ ನಟರು ನಟಿಸಿರುವುದು ಹೊಸದೇನಲ್ಲ. ಸ್ಟಾರ್ ನಟ ವಿಜಯ್ ಟಾಲಿವುಡ್ ನಲ್ಲಿ ಬಾಲಯ್ಯ ಅವರ ಸಿನಿಮಾದಲ್ಲಿ ನೆಗೆಟಿವ್ ರೋಲ್ ನಲ್ಲಿ ವಿಜಯ್ ನಟಿಸಿರುವುದು ಗೊತ್ತೇ ಇದೆ.
ಈ ಸಿನಿಮಾದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದೆ. ಬಾಲಯ್ಯ ಅವರ ‘ವೀರ ಸಿಂಹ ರೆಡ್ಡಿ’ ಸಿನಿಮಾ ದ ಟ್ರೇಲರ್ ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸಿದೆ. ಬಾಲಯ್ಯ ಅಭಿಮಾನಿಗಳು ದುನಿಯಾ ವಿಜಯ್ ಖಡಕ್ ಲುಕ್ ಗಳಿಗೆ ಫಿದಾ ಆಗಿದ್ದಾರೆ. ಟಾಲಿವುಡ್ ನಲ್ಲಿ ವಿಜಯ್ ಅವರ ನಟನೆ ನೋಡಿ ಹಲವರು ಶ್ಲಾಘಿಸಿದ್ದಾರೆ.
ಸ್ವತಃ ಬಾಲತ್ಯ ಅವರೇ ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ವಿಜಯ್ ಅವರನ್ನು ಶ್ಲಾಘಿಸಿದ್ದಾರೆ.
‘ಇವರು ದುನಿಯಾ ವಿಜಯ್. ಕನ್ನಡ ಸಿನಿಮಾ ರಂಗದ ದೊಡ್ಡ ಹೀರೋ. ನಮ್ಮ ಮೇಲಿನ ಪ್ರೀತಿ, ವಿಶ್ವಾಸಕ್ಕೆ ವಿಲನ್ ಪಾತ್ರವಿದ್ದರೂ, ಮಾಡಿದ್ದಾರೆ. ದೊಡ್ಡ ನಟರು ಹೀಗೆ ಪಾತ್ರಗಳನ್ನು ಒಪ್ಪಿಕೊಳ್ಳುವುದು ನನಗಂತೂ ಅವರ ಮೇಲಿ ಮತ್ತಷ್ಟು ಅಭಿಮಾನ ಹೆಚ್ಚಿಸಿದೆ’ ಎಂದಿದ್ದಾರೆ.
ಈ ಸಿನಿಮಾದಲ್ಲಿ ದುನಿಯಾ ವಿಜಯ್ ಅವರದ್ದು ಪ್ರತಾಪ್ ರೆಡ್ಡಿ ಹೆಸರಿನ ಪಾತ್ರ. ಗೋಪಿಚಂದ್ ಮಲಿನೇನಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರೆ, ವರಲಕ್ಷ್ಮಿ ಶರತ್ ಕುಮಾರ್ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ

