ಸಾಹಸ ಸಿಂಹ ವಿಷ್ಣುವರ್ಧನ್ ಮರೆಯಾದರೂ ಮರೆಯಲಾರದ ಪ್ರೀತಿಯ ಆಪ್ತರಕ್ಷಕ.
ವಿಷ್ಣುದಾದರ ಪವರ್ ಫುಲ್ ಡೈಲಾಗ್ಸ್, ಆ ಖದರ್, ಲುಕ್ ಇಂದಿಗೂ ಕಣ್ಣ ಮುಂದೆ ಹಾಗೆಯೇ ಇದೆ. ಅವರು ಸಿನಿರಂಗಕ್ಕೆ ಬಂದು ಇದೇ ವರ್ಷದ ಡಿಸೆಂಬರ್ 29 ರಂದು 50 ವರ್ಷಗಳಾಗಲಿವೆ. ಅದೇ ರೀತಿ ಇದೇ ತಿಂಗಳ 18 ರಂದು ವಿಷ್ಣುವರ್ಧನ್ ಅವರ ಹುಟ್ಟು ಹಬ್ಬವಿದೆ. ಈ ಎರಡು ಸಂಭ್ರಮವನ್ನು ಸಡಗರದಿಂದ ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ.
ವಿಷ್ಣುದಾದರ 50 ಯಶಸ್ಸು ಚಿತ್ರಗಳ ಬೃಹತ್ ಕಟೌಟ್ ಗಳು ಅಭಿಮಾನ್ ಸ್ಟುಡಿಯೋದಲ್ಲಿ ನಿಲ್ಲಲಿವೆ. ಈ 50 ಕಟೌಟ್ ಗಳನ್ನು ರಾಜ್ಯದ ವಿವಿಧ ಭಾಗದ ಅಭಿಮಾನಿಗಳು ಸೇರಿ ನಿರ್ಮಿಸುತ್ತಿದ್ದಾರೆ ಎನ್ನುವುದು ವಿಶೇಷ.


ಸೆಪ್ಟೆಂಬರ್ 18ರಂದು ಡಾ.ವಿಷ್ಣು ಪುಣ್ಯಭೂಮಿಯ ಬಳಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ನಿರೀಕ್ಷೆಯಿದ್ದು, ಸಾಮಾಜಿಕ ಜಾಲತಾಣದಲ್ಲಿ ತಯಾರಿ ಜೋರಾಗಿ ನಡೆಯುತ್ತಿದೆ.
ಇದುವರೆಗೆ ಚಿತ್ರರಂಗದಲ್ಲಿ ಈ ರೀತಿಯ ಕಟೌಟ್ ಗಳು ಕಲಾವಿದನೊಬ್ಬನ ಹೆಸರಿನಲ್ಲಿ ಆಗಿಲ್ಲ. ಇದು ಮೊದಲ ಬಾರಿ ಆಗಿರುವುದರಿಂದ ವಿಶ್ವದಾಖಲೆ ಆಗಲಿದೆ ಎಂದು ವಿಷ್ಣುದಾದ ಅಭಿಮಾನಿಗಳು ಹೇಳಿದ್ದಾರೆ.

