ಸ್ಯಾಂಡಲ್ ವುಡ್ ನಲ್ಲಿ ಮೋಡಿ ಮಾಡಿದ ಹರ್ಷ – ಶಿವರಾಜ್ ಕುಮಾರ್ ಅವರ ‘ವೇದ’ ಸಿನಿಮಾ ತೆಲುಗು ವರ್ಷನ್ ನಲ್ಲಿ ಈ ವಾರ ರಿಲೀಸ್ ಆಗಲಿದೆ.
ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಹೈದರಾಬಾದ್ ನಲ್ಲಿ ನಡೆಯಿತು. ಟಾಲಿವುಡ್ ನಟ ಬಾಲಯ್ಯ ಅವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಅಪ್ಪು ಅವರ ಎವಿ ಪ್ಲೇ ಆಗುತ್ತಿದ್ದಂತೆ ಶಿವರಾಜ್ ಕುಮಾರ್ ಕಣ್ಣೀರು ಸುರಿಸಿದರು.ಸಹೋದರನನ್ನು ನೆನದು ಶಿವಣ್ಣ ಬಿಕ್ಕಿ ಬಿಕ್ಕಿ ಅತ್ತರು. ಬಳಿಕ ಸಮಾಧಾನಗೊಂಡು ವೇದಿಕೆ ಮೇಲೆ ಹತ್ತಿ ಮಾತನಾಡಿದರು.
ನನಗೆ ಅಲ್ಲು ಅರ್ಜುನ್ ಎಂದರೆ ತುಂಬಾ ಇಷ್ಟ. ಅವರ ಡ್ಯಾನ್ಸ್ ನಲ್ಲಿ ನಾನಯ ಅವರನ್ನು ಕಾಣುತ್ತೇನೆ. ಅಪ್ಪು., ಅಲ್ಲು ಅರ್ಜುನ್ ಹಾಗೂ ಜೂ. ಎನ್ ಟಿಆರ್ ಇವರ ಮೂವರ ವ್ಯಕ್ತಿತ್ವ ಒಂದೇ ರೀತಿಯಿದೆ. ಅಲ್ಲು ಅರ್ಜುನ್ ಡ್ಯಾನ್ಸ್ ನೋಡಿದಾಗಲೆಲ್ಲಾ ನನಗೆ ಪುನೀತ್ ಡ್ಯಾನ್ಸ್ ನೋಡಿದಂತೆ ಆಗುತ್ತದೆ. ಅವರಿಗೆ ಡ್ಯಾನ್ಸ್‌ನಲ್ಲಿ ಆ ಸ್ಟೈಲ್ ಇದೆ. ಅಲ್ಲು ಅರ್ಜುನ್ ಒಳ್ಳೆ ಡ್ಯಾನ್ಸ್, ಎನ್‌ಟಿಆರ್ ಕೂಡ ಒಳ್ಳೆ ಡ್ಯಾನ್ಸರ್ ಎಂದು ಹೇಳಿದರು.

