ಕನ್ನಡ ನಾಡು ಕಂಡ ಧೀಮಂತ ನಟ, ಮಗುವಿನ ಮನಸ್ಸಿನ ದೇವರಂತಹ ಮನುಷ್ಯ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗಿರುವ ಅಭಿಮಾನಿಗಳ ಬಗ್ಗೆ, ಅವರ ಅಭಿಮಾನದ ಬಗ್ಗೆ ಏನು ತಾನೇ ಹೇಳುವುದು. ಇಡೀ ಕರುನಾಡು ಅವರನ್ನ ನೆನೆಯದೇ ಇರುವಂತಹ ದಿನವಿಲ್ಲ. ಯಾವುದೇ ಹೊಸ ಕನ್ನಡ ಸಿನಿಮಾ ಬಂದರು, ಅವರ ನಗುವಿನ ಫೋಟೋ ಹೊರತು ಅದು ಮುಂದುವರಿಯುವುದೇ ಇಲ್ಲ.
ಇಷ್ಟೆಲ್ಲಾ ಹೆಗ್ಗಳಿಕೆ ಹೊತ್ತ, ಇಷ್ಟೊಂದು ಅಭಿಮಾನದ ಪರ್ವತದ ಮೇಲೆ ಕುಳಿತಂತ ರಾಜನಾಗಿರುವ ಅಪ್ಪು ಅವರು ನಮ್ಮನ್ನ ಅಗಲಿ ಎರಡು ವರ್ಷಗಳು ಕಳೆಯುತ್ತಾ ಬಂದಿವೆ. ಈ ಮಾತನ್ನ ಯಾರೂ ಒಪ್ಪುವುದಿಲ್ಲ. ಅಪ್ಪು ನಮ್ಮೊಂದಿಗೆ ಇದ್ದಾರೆ ಅನ್ನುವವರೇ ಎಲ್ಲರೂ. ಆದರೂ ಮನದ ಮೂಲೆಯಲ್ಲಿ ಆ ಬೇಸರ, ಅವರ ನಗುವ ನೆನೆದಾಗ ಸಿಗುವ ಆತ್ಮತೃಪ್ತಿ ಇವೆಲ್ಲ ಎಂದಿಗೂ ಶಾಶ್ವತ! ಸದ್ಯ ನಮ್ಮೆಲ್ಲರ ನೆಚ್ಚಿನ ಪವರ್ ಸ್ಟಾರ್ ಅವರ ಮೇಲೆ ಪುಸ್ತಕವೊಂದು ಸಿದ್ಧವಾಗಿದೆ. ಅದುವೇ ‘ಪುನೀತ್ ರಾಜ್‌ಕುಮಾರ್ – ಮುಗ್ಧ ನಗುವೊಂದರ ಕಣ್ಮರೆ’


ಅವರ ಆ ನಿಷ್ಕಲ್ಮಶ ನಗು, ದೇವರ ಸನಿಹದ ವ್ಯಕ್ತಿತ್ವ, ಸಮಾಜಸ್ನೇಹಿ ಗುಣ, ಅವರ ಅದೆಷ್ಟೋ ಹಿಟ್ ಸಿನಿಮಾಗಳಿಂದ ಅಪ್ಪು ನಮ್ಮಲ್ಲೊಬ್ಬರಾಗಿ, ನಮ್ಮ ಮನಗಳ ಖಾಯಂ ನಿವಾಸಿಯಾಗಿ ನಮ್ಮೊಂದಿಗೆ ಇದ್ದಾರೆ. ಸದ್ಯ ಡಾ ಎ ಎಸ್ ಪ್ರಭಾಕರ್ ಅವರಿಂದ ಮೂಡಿಬಂದಿರುವ ಈ ‘ಪುನೀತ್ ರಾಜಕುಮಾರ್ – ಮುಗ್ಧ ನಗುವೊಂದರ ಕಣ್ಮರೆ’ ಎಂಬ ಪುಸ್ತಕ ಅಪ್ಪು ಅವರ ಇದೇ ಜೀವನಶೈಲಿಯನ್ನ ಹೊತ್ತು ತಂದಿದೆ. ಅವರ ಜೀವನ, ಸಾಧನೆ, ಸಹಾಯಗಳು ಜೊತೆಗೆ ಜನರಿಗೆ ಅವರ ಮೇಲಿದ್ದ ಪ್ರೀತಿಯನ್ನ ಈ ಪುಸ್ತಕ ಸಾರಿ ಸಾರಿ ಹೇಳುತ್ತದೆ. ಅಂಚೆ ವೆಚ್ಚ ಸೇರಿ ಕೇವಲ 170ರೂಪಾಯಿಗಳಲ್ಲಿ ಈ ಪುಸ್ತಕವನ್ನ ನಿಮ್ಮದಾಗಿಸಿಕೊಳ್ಳಬಹುದು. ಈ ಕೆಳಗಿನ ಲಿಂಕ್ ನಿಂದ ಪುಸ್ತಕ ಕೊಳ್ಳಬಹುದು.
https://shorturl.at/bdfBN

