HomeNewsಮೈಸೂರು - ಬನ್ನೇರುಘಟ್ಟ ರಸ್ತೆಗೆ ಅಪ್ಪು ಹೆಸರು: ನಾಳೆ ಸಿಎಂ ಬೊಮ್ಮಾಯಿ ಉದ್ಘಾಟನೆ

ಮೈಸೂರು – ಬನ್ನೇರುಘಟ್ಟ ರಸ್ತೆಗೆ ಅಪ್ಪು ಹೆಸರು: ನಾಳೆ ಸಿಎಂ ಬೊಮ್ಮಾಯಿ ಉದ್ಘಾಟನೆ

ಡಾ.ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಹೆಸರಿನಲ್ಲಿ ನಾನಾ ಬಗೆಯಲ್ಲಿ ಸಾಮಾಜಿಕ ಕೆಲಸ ಕಾರ್ಯಕ್ರಮಗಳು ನಡೆಯುತ್ತಿದೆ .

ನೇತ್ರದಾನ, ರಕ್ತದಾನ, ಅನ್ನದಾನ ಹೀಗೆ ಬೇರೆ ಬೇರೆ ರೀತಿಯಲ್ಲಿ ಅಪ್ಪು ಅವರನ್ನು ನಾವು ಇಂದಿಗೂ ಸ್ಮರಸಿಸುತ್ತೇವೆ.

ಈ ಬಗ್ಗೆ ಫಿಲ್ಮ್ ಚೇಂಬರ್ ನಲ್ಲಿ ಸಚಿವರಾದ ಆರ್.ಅಶೋಕ್ ಅವರು ವಾಣಿಜ್ಯ ಮಂಡಳಿ ಅಧ್ಯಕ್ಷರಾ್ ಭಾ.ಮ. ಹರೀಶ್, ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಅವರೊಂದಿಗೆ ಚರ್ಚಿಸಿದ್ದಾರೆ.

ಮೈಸೂರು ರಸ್ತೆಯಿಂದ ಬನ್ನೇರುಘಟ್ಟವರೆಗಿನ ರಸ್ತೆಗೆ ಪುನೀತ್ ರಾಜ್‍ಕುಮಾರ್ ಅವರ ಹೆಸರನ್ನು ಇಟ್ಟಿದ್ದು ನಾಳೆ ಈ ರಸ್ತೆ ಉದ್ಘಾಟನೆಗೊಳ್ಳಲಿದೆ.

ಈ ಬಗ್ಗೆ ಮಾಹಿತಿ ಕೊಟ್ಟಿರುವ ಕಂದಾಯ ಸಚಿವ ಆರ್.ಅಶೋಕ್ ಫೆಬ್ರವರಿ 7ರಂದು ಸಂಜೆ 6 ಗಂಟೆಗೆ ಪದ್ಮನಾಭನಗರದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಸ್ತೆಯನ್ನು ಉದ್ಘಾಟನೆ ಮಾಡಲಿದ್ದಾರೆ. ‘ಪುನೀತ್ ರಾಜ್ಕುಮಾರ್ ಸಾಮಾಜಿಕ ಕೆಲಸ ಮಾಡಿದ ಹೃದಯವಂತ. ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ , ರಾಘವೇಂದ್ರ ರಾಜಕುಮಾರ್ ಸೇರಿ ಅನೇಕರು ಭಾಗಿ ಆಗುತ್ತಿದ್ದಾರೆ. ಪುನೀತ್ ಪತ್ನಿ ಅಶ್ವಿನಿಯವರು ಕೂಡ ಪಾಲ್ಗೊಳ್ಳುತ್ತಾರೆ’ ಎಂದು ಆರ್.ಅಶೋಕ್ ಹೇಳಿದ್ದಾರೆ.

ಪುನೀತ್ ಅವರನ್ನು ಕೆಲವರು ದೇವರು ಅಂತ ಕರೀತಾರೆ . ಜಾಹೀರಾತಿಗೆ ಸ್ಟಾರ್ಗಳು ಕೋಟ್ಯಾಂತರ ರೂಪಾಯಿ ತೆಗೆದುಕೊಳ್ಳುತ್ತಾರೆ. ಆದರೆ, ನಮ್ಮ ನಂದಿನಿ ಜಾಹೀರಾತಿಗೆ ಅವರು ಒಂದು ನಯಾಪೈಸಾ ತೆಗೆದುಕೊಂಡಿಲ್ಲ. ಫ್ರೀ ಆಗಿ ರಾಯಬಾರಿ ಆಗಿದ್ರು. ರೈತರ ಬೆನ್ನೆಲುಬಾಗಿ ನಾನು ಉಚಿತವಾಗಿ ಮಾಡ್ತೀನಿ ಅಂದಿದ್ರು. ಅವರ ನೆನಪು ಸದಾ ನಮ್ಮೊಂದಿಗೆ ಇರಬೇಕು ಎನ್ನುವ ಕಾರಣಕ್ಕೆ  ಬೆಂಗಳೂರಿನ ರಿಂಗ್ ರಸ್ತೆಗೆ ಪುನೀತ್ ಹೆಸರು ಇಡುತ್ತಿದ್ದೇವೆ’ ಎಂದು ಆರ್. ಅಶೋಕ್ ಹೇಳಿದ್ದಾರೆ.

RELATED ARTICLES

Most Popular

Share via
Copy link
Powered by Social Snap