HomeNewsನಿರ್ಮಾಪಕ ಡಾ. ಕಶ್ಯಪ್ ದಾಕೋಜು ಅವರ 'ಮರಣ ಮಹೋತ್ಸ' ಕೃತಿ ಬಿಡುಗಡೆ

ನಿರ್ಮಾಪಕ ಡಾ. ಕಶ್ಯಪ್ ದಾಕೋಜು ಅವರ ‘ಮರಣ ಮಹೋತ್ಸ’ ಕೃತಿ ಬಿಡುಗಡೆ

ಐದು ಚಲನಚಿತ್ರಗಳಿಗೆ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿರುವ ನಿರ್ಮಾಪಕ ಡಾ.ಕಶ್ಯಪ್ ದಾಕೋಜು ಅವರು ಬರೆದಿರುವ ‘ಮರಣ ಮಹೋತ್ಸವ’ ಎನ್ನುವ ಕೃತಿ ಇತ್ತೀಚೆಗೆ ಬಿಡುಗಡೆಗೊಂಡಿತು.


ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯ ಗೌರವ ಕಾರ್ಯದರ್ಶಿ ಸುಂದರ್ ರಾಜ್ ಹಾಗು ಅಧ್ಯಕ್ಷರಾದ ಭಾ.ಮ.ಹರೀಶ್‍ರವರು ಭಾಗಿಯಾಗಿದ್ದರು.

ಅತಿಥಿಯಾಗಿ ಉಪಸ್ಥಿತರಿದ್ದ ಚಿನ್ನೇಗೌಡರು ಮಾತಾನಾಡಿ, ಡಾ.ಕಶ್ಯಪ್ ದಾಕೋಜು ರಚಿಸಿರುವ ಕೃತಿಯ ಹೆಸರಿನಲ್ಲೇ ವಿಶೇಷತೆವಿದೆ. ಇದರಲ್ಲಿರುವ ಸನ್ನಿವೇಶಗಳು ಕುತೂಹಲ ಹುಟ್ಟಿಸುತ್ತದೆ ಎಂದರು.


ಹಿರಿಯ ನಟ ಸುಂದರ್ ರಾಜ್ ಮಾತಾನಾಡಿ,
ಡಾ. ಕಶ್ಯಪ್ ದಾಕೋಜುರವರು ಮೂಲತಃ ಚಿತ್ರ ನಿರ್ಮಾಪಕರು. ಅವರ ಅನುಭವದಿಂದ ಚಲನಚಿತ್ರ ಕಥೆಯ ರೂಪದಲ್ಲಿ ಬರಹಗಳು ಮೂಡಿ ಬಂದಿವೆ ಅವರಿಗೆ ಅಭಿನಂದನೆಗಳೆಂದರು.

ಭಾ.ಮ.ಹರೀಶ್ ಮಾತಾನಾಡಿ, ಹಿರಿಯ ನಿರ್ಮಾಪಕರಾದ ಡಾ. ಕಶ್ಯಪ್ ದಾಕೋಜುರವರ ಪುಸ್ತಕ ವಾಣಿಜ್ಯ ಮಂಡಳಿಯಿಂದ ಬಿಡುಗಡೆ ‌ಮಾಡುತ್ತಿರುವುದು ಹೆಮ್ಮೆಯ ವಿಷಯ. ಇನ್ಮುಂದೆ ವಾಣಿಜ್ಯ ಮಂಡಲಿಯಲ್ಲಿ ಇಂಥ ಕಾರ್ಯಗಳನ್ನು ಮಾಡಿ ಪ್ರೋತ್ಸಾಹಿಸಲಾಗುವುದು ಎಂದರು.

ಕೃತಿಕಾರ,ನಿರ್ಮಾಪಕ ಡಾ. ಕಶ್ಯಪ್ ದಾಕೋಜುರವರು ಮಾತನಾಡಿ,ಮಾನವ ಹುಟ್ಟಿದಾಗಲೇ, ಆತನ ಸಾವಿನ ಮುಹೂರ್ಥವು ತಿಳಿದುಬಿಟ್ಟರೆ ಏನಾಗಬಹುದೆಂಬ ವಿಷಯವನ್ನಿಟ್ಟುಕೊಂಡು ಹೆಣೆದಿರುವ ಕಥೆಯಿದು.

ಅಮೆರಿಕಾದಲ್ಲಿ ಸೈಂಟಿಸ್ಟ್ ಆಗಿ ಉದ್ಯೋಗದಲ್ಲಿರುವ ಬ್ರಹ್ಮ, ಹಲವಾರು ಪ್ರಾಣಿಗಳ ಸಂಶೋಧನೆಯಿಂದ ಮಾನವನ ಸಾವಿನ ದಿನ, ಘಳಿಗೆಗಳನ್ನು ಕಂಡುಕೊಳ್ಳುತ್ತಾನೆ. ಮಾನವರ ಮೇಲೆ ಈ ಪ್ರಯೋಗಕ್ಕಾಗಿ ತನ್ನ ತಂದೆಯವರನ್ನೇ ವಸ್ತುವಾಗಿಟ್ಟುಕೊಳ್ಳುವ ಸಂಧರ್ಭಬಂದು,

ತನ್ನ ಮಗನಿಂದಲೇ, ತನ್ನ ತಂದೆಯ ಸಾವಿನ ಮುಹೂರ್ಥ ಇಟ್ಟಾಗ ನಡೆಯುವ ಸನ್ನಿವೇಶಗಳ ಈ ನನ್ನ ಪ್ರಯತ್ನದಲ್ಲಿ ಇದರಲ್ಲಿ ಹಾಸ್ಯ, ಭಾವನೆ, ಕಾಮಿಡಿ, ಮಾನವ ಸಂಬಂಧ, ಸ್ನೇಹ ಎಲ್ಲಾ ವಿಶೇಷವೂ ಇದೆ.
ಇದರಲ್ಲಿ ನಿರ್ಮಿಸಿದ ಎಲ್ಲ ಪಾತ್ರಗಳು ತಮ್ಮದೆ ಆದ ವಿಶೇಷತೆಗಳಿಂದ ಕೂಡಿ, ತಮ್ಮತನವನ್ನು ಉಳಿಸಿಕೊಂಡು ಸಾಗುತ್ತದೆ. ಇದೊಂದು ಹೊಸ ಪ್ರಯೋಗ ಎನ್ನಬಹುದು ಎಂದು ಹೇಳಿದರು.

RELATED ARTICLES

Most Popular

Share via
Copy link
Powered by Social Snap