HomeReview"ಡೊಳ್ಳು" ಇದು ಕಲೆಯೊಂದರ ಅಳಿವು - ಉಳಿವಿನ ಯಾನ: ಆಧುನಿಕತೆಯ ಮೋಹ

“ಡೊಳ್ಳು” ಇದು ಕಲೆಯೊಂದರ ಅಳಿವು – ಉಳಿವಿನ ಯಾನ: ಆಧುನಿಕತೆಯ ಮೋಹ

ಮಣ್ಣಿನ ಕಥೆ, ಸಂಪ್ರದಾಯ, ಆಚಾರ -ವಿಚಾರದ ಸೊಗಡನ್ನು ‌ಇಟ್ಟುಕೊಂಡು ಈ‌ ವಾರ ತೆರೆಗೆ ಬಂದಿರುವ ‘ಡೊಳ್ಳು’ ಪ್ರೇಕ್ಷಕರನ್ನು ಥಿಯೇಟರ್ ನತ್ತ ಸೆಳೆಯುತ್ತಿದೆ.


ರಿಲೀಸ್ ಗೂ ಮುನ್ನ ಹತ್ತು ಹಲವಡೆ ಪ್ರದರ್ಶನ ಕಂಡು ಪ್ರಶಸ್ತಿ ಪುರಸ್ಕಾರ ಪಡೆದುಕೊಂಡಿರುವ ಪವನ್ ಒಡೆಯರ್ ಅವರ ‘ಡೊಳ್ಳು’ ಬಹು ಜನರ‌ ಅಪೇಕ್ಷೆಯ ಮೇರೆಗೆ ಥಿಯೇಟರ್ ನಲ್ಲಿ ‌ಬಿಡುಗಡೆಯಾಗಿದೆ.

ಊರಿನ ಹಬ್ಬ ಹರಿದಿನಗಳಲ್ಲಿ
“ಡೊಳ್ಳು” ಬಾರಿಸುತ್ತಲೇ ಕುಟುಂಬ ನಿಭಾಯಿಸುವ ಸಂಪ್ರದಾಯವನ್ನು ಮುಂದುವರೆಸುವ ಕಾಳ ತನ್ನ ಮಗ ಭದ್ರ ಹಾಗೂ ಊರಿನ ಇತರರಿಗೆ ಡೊಳ್ಳು ಬಾರಿಸುವ ತರಬೇತಿ ‌ನೀಡುತ್ತಾನೆ.

ಅಪ್ಪನಂತೆ ಡೊಳ್ಳು ಬಾರಿಸುವುದನ್ನೇ ಕಾಯಕನೆಂದುಕೊಂಡ ಮಗ ಭದ್ರನ ಜೀವನದಲ್ಲಿ ಅನಿರೀಕ್ಷಿತ ಘಟನೆಗಳು ನಡೆಯುತ್ತವೆ. ಹರೆಯದಲ್ಲಿ ಪ್ರೇಮ ಹಾಗೂ ಗೆಳೆಯನೊಬ್ಬನ ಸಾವು, ಭದ್ರನ ಬದುಕನ್ನು ಬದಲಿಸುತ್ತದೆ. ವರ್ಷಗಳು ಉರುಳಿತ್ತಿರುವಂತೆ ಡೊಳ್ಳನೇ ಹೊಟ್ಟೆ ತುಂಬಿಸುವ ಕೆಲಸ ಎಂದುಕೊಂಡವವರಿಗೆ ಮಾಯಾನಗರಿ ಬೆಂಗಳೂರು ಕೈ ಬೀಸಿ ಕರೆಯುತ್ತದೆ. ಊರಿನ ಹಲವು ಯುವಕರು ನಗರಕ್ಕೆ ಪಯಣ ಬೆಳೆಸುತ್ತಾರೆ. ಎರಡು ಕಾಸು‌ ಉಳಿಯುವ ದುಡಿಮೆಗೆ ಸೇರಿಕೊಳ್ಳುವ ಭದ್ರನ ಸ್ನೇಹಿತರು, ‌ಡೊಳ್ಳು‌ ಸಂಪ್ರದಾಯವನ್ನು ಮರೆಯುತ್ತಾರೆ. ಆಧುನಿಕತೆಗೆ ತೆರೆದುಕೊಳ್ಳುತ್ತಾರೆ.
ಹಳ್ಳಿ ಬಿಟ್ಟು ಐಟಿಬಿಟಿ ಊರು ಸೇರಿದ ಗ್ರಾಮೀಣ ಪ್ರದೇಶದ ಹುಡುಗರು ಮತ್ತೆ ವಾಪಾಸ್ ಬರುತ್ತಾರ ಎನ್ನುವುದು ಕ್ಲೈಮ್ಯಾಕ್ಸ್ ಗುಟ್ಟು.


ಹೀಗೆ ಸಾಗುವ ಕಥೆಯಲ್ಲಿ ಗ್ರಾಮೀಣ ಹಾಗೂ ನಗರದ ನಡುವಿನ‌ ಜೀವನ‌ ಶೈಲಿಯ ಸೂಕ್ಷ್ಮತೆಯನ್ನು ನಿರ್ದೇಶಕರಿಲ್ಲಿ‌ ಹೇಳಿದ್ದಾರೆ.


ನಾಯಕ ‌ಕಾರ್ತಿಕ್ ಮಹೇಶ್ ಅವರ ಅಭಿನಯಕ್ಕೆ ಶಹಬ್ಬಾಸ್ ಹೇಳಲೇ ಬೇಕು. ನೈಜವಾಗಿ ನಟಿಸಿರುವ ಅವರು, ‘ಡೊಳ್ಳು’ ಸಂಪ್ರದಾಯದ ಅಳಿವು – ಉಳಿವಿನ ನಡುವಿನ ಬದಲಾವಣೆಗೆ ಕೇಂದ್ರ ‌ಬಿಂದುಬಾಗಿ‌ ಕಾಣಿಸಿಕೊಳ್ಳುತ್ತಾರೆ.


ನಿಧಿ ಹೆಗಯ ಹಾಯ ಶರಣ್ಯ ಸುರೇಶ್ ತನ್ನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಿರಿಯ ನಟರಾದ ಕಾಣಿಸಿಕೊಂಡ ಚಂದ್ರ ಮಯೂರು ಹಾಗೂ ಬಾಬು ಹಿರಣ್ಣಯ್ಯ ಪ್ರೇಕ್ಷಕರನ್ನು ಸೆಳೆಯುತ್ತಾರೆ.

ಸಂಗೀತ,ಕ್ಯಾಮರಾ ವರ್ಕ್,ಲೈಟ್ ಹೀಗೆ ತಂತ್ರಜ್ಞಾನದ ವಿಭಾಗದಲ್ಲೂ ಡೊಳ್ಳು ಗಮನ ಸೆಳೆಯುತ್ತದೆ.


ಆ್ಯಕ್ಷನ್, ಕರ್ಮಷಿಯಲ್ ಚಿತ್ರಗಳ ನಡುವೆ ಒಂದು ಸೊಗಡಿನ ಕಥೆಯನ್ನು ನೋಡುವುದಾದರೆ ಡೊಳ್ಳು ಉತ್ತಮ ಆಯ್ಕೆ.

RELATED ARTICLES

Most Popular

Share via
Copy link
Powered by Social Snap