ಹತ್ತು ಹಲವಾರು ಪ್ರಶಸ್ತಿ ಸಮಾರಂಭದಲ್ಲಿ ಹೆಸರನ್ನು ಪಡೆದುಕೊಂಡು ‘ಡೊಳ್ಳು’ ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ಇದೇ ತಿಂಗಳು ರಾಜ್ಯಾದ್ಯಂತ ಚಿತ್ರ ತೆರೆಗೆ ಬರಲಿದೆ.
ಸಾಗರ್ ಪುರಾಣಿಕ್ ನಿರ್ದೇಶನದ ಮಾಡಿರುವ, ಚಿತ್ರಕ್ಕೆ ಮೊದಲ ಬಾರಿ ನಿರ್ಮಾಪಕರಾಗಿ ಪವನ್ ಒಡೆಯರ್ ಜವಬ್ದಾರಿ ನಿಭಾಯಿಸಿದ್ದಾರೆ.


ಇತ್ತೀಚೆಗೆ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಕನ್ನಡ ಸಿನಿಮಾವೆಂಬ ಗೌರವವನ್ನು ಪಡೆದುಕೊಂಡಿದೆ.
ಚಿತ್ರದಿಂದ ಮೊದಲ ಹಾಡು ಕೂಡ ರಿಲೀಸ್ ಆಗಿದೆ. ನಟ ರಕ್ಷಸ ಡಾಲಿ ಧನಂಜಯ ಅವರು ‘ಮಾಯಾನಗರಿ’ ಹಾಡನ್ನು ರಿಲೀಸ್ ಮಾಡಿ ಶುಭ ಹಾರೈಸಿದರು.
ದೂರದೂರಿನಿಂದ ಕನಸು ಕಟ್ಟಿಕೊಂಡು ಬೆಂಗಳೂರಿಗೆ ಬರುವ ಯುವಕನೊಬ್ಬನ ಹಾದಿಯನ್ನು ಹಾಡಿನಲ್ಲಿ ತೋರಿಲಾಗಿದೆ.ಈ ಹಾಡಿಗೆ ಸ್ವತಃ ನಿರ್ದೇಶಕರಾದ ಸಾಗರ್ ಪುರಾಣಿಕ್ ಅವರೇ ಹಾಡಿದ್ದಾರೆ.


ಸಿನಿಮಾದಲ್ಲಿ ಕಾರ್ತಿಕ್ ಮಹೇಶ್ ನಾಯಕನಾಗಿ ನಟಿಸಿದ್ದು, ನಿಧಿ ಹೆಗ್ಡೆ ನಾಯಕಿಯಾಗಿ ಬಣ್ಣ ಹಚ್ಚಿದ್ದು, ಉಳಿದಂತೆ ಬಾಬು ಹಿರಣಯ್ಯ, ಚಂದ್ರ ಮಯೂರ್, ಶರತ್ ಮುಂತಾದ ಕಲಾವಿದರು ನಟಿಸಿದ್ದಾರೆ.

