HomeExclusive Newsಓಟಿಟಿಗೆ ಬಂತು ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ 'ಡೊಳ್ಳು'

ಓಟಿಟಿಗೆ ಬಂತು ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ‘ಡೊಳ್ಳು’

ಕನ್ನಡದ ಖ್ಯಾತ ನಿರ್ದೇಶಕ, ನಿರ್ಮಾಪಕ ಪವನ್ ಒಡೆಯರ್ ಅವರ ‘ಡೊಳ್ಳು’ ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು, ಥಿಯೇಟರ್ ನಲ್ಲೂ ಜನಮನ ಸೆಳೆದು, ಈಗ ಓಟಿಟಿಗೆ ಕಾಲಿಟ್ಟಿದೆ.


ಸಾಗರ್ ಪುರಾಣಿಕ್‌‌ ನಿರ್ದೇಶನದ ‘ಡೊಳ್ಳು’ ಹಲವಾರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನ ಕಂಡಿದೆ.
68ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ‘ಡೊಳ್ಳು’ ಪಡೆದುಕೊಂಡಿದೆ.

ಊರಿನ ಹಬ್ಬ ಹರಿದಿನಗಳಲ್ಲಿ
“ಡೊಳ್ಳು” ಬಾರಿಸುತ್ತಲೇ ಕುಟುಂಬ ನಿಭಾಯಿಸುವ ಸಂಪ್ರದಾಯವನ್ನು ಮುಂದುವರೆಸುವ ಕಾಳ ತನ್ನ ಮಗ ಭದ್ರ ಹಾಗೂ ಊರಿನ ಇತರರಿಗೆ ಡೊಳ್ಳು ಬಾರಿಸುವ ತರಬೇತಿ ‌ನೀಡುತ್ತಾನೆ ಇದರೊಂದಿಗೆ ಆಧುನಿಕತೆಯ ಘಮಲು ಚಿತ್ರದಲ್ಲಿದೆ.


ಚಿತ್ರ ಮಂದಿರದಲ್ಲಿ ಭರ್ಜರಿ ಪ್ರದರ್ಶನ ಕಂಡ ಬಳಿಕ ಈಗ ಅಮೇಜಾನ್ ಪ್ರೈಮ್ ನಲ್ಲಿ ಚಿತ್ರ ರಿಲೀಸ್ ಆಗಿದೆ. ಚಿತ್ರ ಮಂದಿರದಲ್ಲಿ ನೀಚುಯ ಚಿತ್ರವನ್ನು ನೋಡದೆ ಇದ್ರೆ, ಓಟಿಟಿಯಲ್ಲಿ ನೋಡಿ.. ಆನಂದಿಸಿ..

RELATED ARTICLES

Most Popular

Share via
Copy link
Powered by Social Snap