ನಮ್ ಟಾಕಿಸ್. ಇನ್ ರೇಟಿಂಗ್ :【 3.5/5 】
ಡಾರ್ಲಿಂಗ್ ಕೃಷ್ಣ ಅವರ ‘ದಿಲ್ ಪಸಂದ್’ ಇಂದು ರಾಜ್ಯಾದ್ಯಂತ ತೆರೆಗೆ ಬಂದಿದೆ. ಕೃಷ್ಣ ಮತ್ತೆ ಇಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಾರಿ ಸ್ವಲ್ಪ ಡಿಫ್ರೆಂಟ್ ಆಗಿ.
ಮಧ್ಯಮ ವರ್ಗದ ಹುಡುಗ ಸಂತೋಷ್ ನದು ( ಕೃಷ್ಣ) ಅಮ್ಮ ಹೇಳಿದಂತೆ ನಡೆಯುವ ಸ್ವಭಾವ. ವಯಸ್ಸಿಗೆ ಬಂದಾಗ ಮದುವೆ ಮಾಡಿಸುವ ಸಲುವಾಗಿ ಸಂತೋಷನಿಗೆ ಹುಡುಗಿಯನ್ನು ಹುಡುಕುತ್ತಾರೆ ಆ ಹುಡುಗಿಯೇ ಮಿಂಚು (ಮೇಘಾ ಶೆಟ್ಟಿ) ಸಂತೋಷ್ – ಮಿಂಚು ಇಬ್ಬರ ಮದುವೆಗೆ ನಿಗದಿಯಾಗಿದೆ. ಇಲ್ಲೇ ಕಥೆಯಲ್ಲೊಂದು ಟ್ವಿಸ್ಟ್ ಬರುತ್ತದೆ. ಸಂತೋಷ್ ಬದುಕಿನಲ್ಲಿ ಐಶ್ವರ್ಯ ( ನಿಶ್ವಿಕಾ ನಾಯ್ಡು) ಎಂಬ ಹುಡುಗಿ ಬರುತ್ತಾಳೆ. ಐಶ್ವರ್ಯನಿಂದ ಸಂತೋಷ್ ಅತ್ತ ಮದುವೆಯೂ ಇಲ್ಲ ಇತ್ತ ನೆಮ್ಮದಿಯೂ ಇಲ್ಲದ ಗೊಂದಲಕ್ಕೆ ಸಿಲುಕುತ್ತಾನೆ. ಐಶ್ವರ್ಯ ಯಾರು ಆಕೆ ಸಂತೋಷ್ ಗೆ ಏನಾಗಬೇಕೆನ್ನುವುದೇ ಚಿತ್ರದ ಕಥೆ.
ಕ್ಲೈಮ್ಯಾಕ್ಸ್ ನಲ್ಲಿ ಕಣ್ಣೀರು ಬರುವಂತಹ ಎಮೋಷನಲ್ ದೃಶ್ಯ ಅದರೊಂದಿಗೆ ಒಂದೊಳ್ಳೆ ಸಂದೇಶದೊಂದಿಗೆ ಸಿನಿಮಾ ಮುಗಿಯುತ್ತದೆ.
ಮಧ್ಯಮ ವರ್ಗದ ಫ್ಯಾಮಿಲಿಯ ಜಂಜಾಟ, ಡಾರ್ಲಿಂಗ್ ಕೃಷ್ಣ ಹಾಗೂ ರಂಗಾಯಣ ರಘು ಅವರ ಭಾವುಕ ದೃಶ್ಯಗಳು ಪ್ರೇಕ್ಷಕರನ್ನು ಸೆಳೆಯುತ್ತದೆ. ಸಾಧುಕೋಕಿಲಾ ನಗಿಸುವ ಪ್ರಯತ್ನ ಮಾಡಿದ್ದಾರೆ.


ಅರುಣಾ ಬಾಲರಾಜ್, ತಬಲಾ ನಾಣಿ, ಚಿತ್ಕಳಾ ಬಿರಾದರ್, ಕಾಕ್ರೋಚ್ ಸುಧಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಅರ್ಜುನ್ ಜನ್ಯ ಮ್ಯೂಸಿಕ್ ನಲ್ಲಿ ಮಂಗ್ಲಿ ಹಾಡಿರುವ ‘ರಾಮ ರಾಮ ರಾಮ’ ಹಾಡು ಥಿಯೇಟರ್ ಹೊರಗೆ ಬಂದ್ಮೇಲೂ ಕಿವಿಯೊಳಗೆ ಕೇಳಿಸುತ್ತದೆ.
ನಿರ್ದೇಶಕ ಶಿವತೇಜಸ್ ಕಥೆಗೆ ಇನ್ನು ಸ್ವಲ್ಪ ಗಮನ ಕೊಟ್ಟಿದ್ದರೆ ಇನ್ನು ಚೆನ್ನಾಗಿ ಇರುತ್ತಿತ್ತು. ಕೆಲ ಸಂದರ್ಭಗಳು ನಾವು ಮೊದಲೇ ಊಹಿಸಿದಂತೆ ಆಗುತ್ತದೆ.
ಇದು ಬಿಟ್ಟರೆ ‘ದಿಲ್ ಪಸಂದ್ ‘ ಮನಸ್ಸಿಗೆ ಕಚಗುಳಿ ಇಡುವ ಒಂದು ಫೀಲ್ ಗುಡ್ ಯಾನ

