‘ಜೋಗಿ’ ಪ್ರೇಮ್ ಧ್ರುವ ಸರ್ಜಾ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಚಿತ್ರ ನಿರೀಕ್ಷೆ ದುಪ್ಟಾಟ್ಟು ಮಾಡಿದೆ. ಕೆವಿಎನ್ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಸಿನಿಮಾ ಸಟ್ಟೇರುವ ಮುನ್ನವೇ ಸದ್ದು ಮಾಡುತ್ತಿದೆ.
‘ಜೋಗಿ’ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್‌ನ ಈ ಸಿನಿಮಾವು ಅಕ್ಟೋಬರ್ ತಿಂಗಳ ಅಂತ್ಯದಿಂದ ಶೂಟಿಂಗ್ ಆರಂಭಿಸಲಿದೆ. ‘ರಂಗಿತರಂಗ’, ‘ವಿಕ್ರಾಂತ್ ರೋಣ’ ಖ್ಯಾತಿಯ ವಿಲಿಯಂ ಡೇವಿಡ್ ಛಾಯಾಗ್ರಹಣ ಮಾಡಲಿದ್ದಾರೆ.
ಚಿತ್ರದಲ್ಲಿ ಧ್ರುವ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದು, 70 ದಶಕದ ಮಾಸ್ ಕಥೆ ಇದಾಗಿದೆ ಎಂದು ತಿಳಿದು ಬಂದಿದೆ.


ಇತ್ತೀಚೆಗೆ ನಿರ್ದೇಶಕ ಪ್ರೇಮ್ ಚಿತ್ರಕ್ಕೆ ಅರ್ಜುನ್ ಜನ್ಯ ಮ್ಯೂಸಿಕ್ ನೊಂದಿಗೆ, ಖ್ಯಾತ ತಬಲಾ ಮಾಂತ್ರಿಕ ಉಸ್ತಾದ್ ಜಾಕಿರ್ ಹುಸೇನ್ ಅವರು ಚಿತ್ರದಲ್ಲಿ ಮ್ಯೂಸಿಕ್ ಗೆ ಜತೆಯಾಗಲಿದ್ದಾರೆ ಎನ್ನುವ ಸುದ್ದಿಯನ್ನು ಹಂಚಿಕೊಂಡಿದ್ದರು.
ಈಗ ಫೋಟೋ ಹಂಚಿಕೊಂಡು ಮತ್ತೊ ದೊಡ್ಡ ಸುದ್ದಿಯನ್ನು ರಿವೀಲ್ ಮಾಡಿದ್ದಾರೆ.
ಜೋಗಿ ಪ್ರೇಮ್ – ಧ್ರುವ ಸರ್ಜಾ ಕಾಂಬಿನೇಷನ್ ನಲ್ಲಿ ಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಧ್ರುವ ಸರ್ಜಾ ಅವರೇ ಎಲ್ಲಾ ಭಾಷೆಗಳಿಗೂ ಡಬ್ ಮಾಡಲಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ಪ್ರೇಮ್ ಅವರು ಹಂಚಿಕೊಂಡಿದ್ದು, ‘War Begins Soon’ ಎಂದು ಬರೆದು ಕೊಂಡಿದ್ದಾರೆ.
ಅಂದ ಹಾಗೆ ಚಿತ್ರದ ಟೈಟಲ್ ಇನ್ನು ರಿವೀಲ್ ಆಗಿಲ್ಲ.

