HomeExclusive Newsಈ ಬಾರಿ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲ್ಲ: ದಯವಿಟ್ಟು ಕ್ಷಮಿಸಿ; ಡಾಲಿ ಧನಂಜಯ

ಈ ಬಾರಿ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲ್ಲ: ದಯವಿಟ್ಟು ಕ್ಷಮಿಸಿ; ಡಾಲಿ ಧನಂಜಯ

ನಟ ಡಾಲಿ ಧನಂಜಯ ಇದೇ ಆ.23 ರಂದು (ಮಂಗಳವಾರ) ತನ್ನ ಬದುಕಿನ 36 ವರ್ಷಕ್ಕೆ ಕಾಲಿಡುತ್ತಿದ್ದಾರೆ. ಡಾಲಿ ಅಭಿಮಾನಿಗಳು ಅವರ ಹುಟ್ಟು ಹಬ್ಬವನ್ನು ಜೋರಾದ ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ಕಳೆದ ಎರಡು ವರ್ಷದಿಂದ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ.


ಈ ಬಾರಿಯೂ ನಟ ರಾಕ್ಷಸ ಧನಂಜಯ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲ್ಲ ಎಂದು ಹೇಳಿ ಅಭಿಮಾನಿಗಳಲ್ಲಿ ಕ್ಷಮೆಯನ್ನು ಕೇಳಿದ್ದಾರೆ.
ಈ ಕುರಿತು ವಿಡಿಯೋ ಮಾಡಿರುವ ಅವರು, ವಿಡಿಯೋದಲ್ಲಿ ನನ್ನ ಅಭಿಮಾನಿಗಳು, ಪ್ರೀತಿಸುವ ಜೀವಗಳಿಗೆ ಎಲ್ಲರಿಗೂ ನಮಸ್ಕಾರ.

ಬಹಳ ಖುಷಿಯಾಗುತ್ತದೆ. ನನ್ನ ಹುಟ್ಟುಹಬ್ಬ ಅಂದಾಕ್ಷಣ ತುಂಬಾ ಹಿಂದಿನಿಂದಲೇ ಸೆಲೆಬ್ರೆಷನ್ ಶುರು ಮಾಡುತ್ತಾ ಬರುತ್ತಿದ್ದೀರಾ.ಬೆಂಗಳೂರಿನಲ್ಲಿ ರಕ್ತದಾನ ಶಿಬಿರ, ನೇತ್ರದಾನ ನೋಂದಣಿ ಶಿಬಿರ ಎಲ್ಲಾ ನಡೆಸಿದ್ದೀರಿ, ಬೆಳಗಾವಿ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲೂ ಕಾರ್ಯಕ್ರವನ್ನು ಮಾಡಿದ್ದೀರಿ.

ನನಗೂ ನಿಮ್ಮೊಟ್ಟಿಗೆ ಸೇರಿ ಹುಟ್ಟುಹಬ್ಬ ಆಚರಿಸಲು ಆಸೆ. ಆದರೆ ಕಳೆದೆರಡು ವರ್ಷಗಳಿಂದ ಕೊರೊನಾ ಕಾರಣ ಸೆಲೆಬ್ರೇಟ್ ಮಾಡಲು ಸಾಧ್ಯವಾಗಲಿಲ್ಲ. ಈ ವರ್ಷ ಕೂಡ ಬರ್ತ್‌ಡೇ ಸೆಲೆಬ್ರೆಷನ್ ಮಾಡುವ ಪರಿಸ್ಥಿತಿಯಲ್ಲಿ ನಾನು ಕೂಡ ಇಲ್ಲ. ನಮ್ಮ ನಾಡು ಕೂಡ ಇಲ್ಲ.

ಯಾಕೆಂದರೆ ಅಪ್ಪು ಅವರು ಅಗಲಿ ಇನ್ನು ವರ್ಷ ಕೂಡ ಆಗಿಲ್ಲ. ಶಿವಣ್ಣ ಸೇರಿದಂತೆ ಯಾರು ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಹಾಗಾಗಿ ಈ ವರ್ಷ ಕೂಡ ಬರ್ತ್‌ಡೇ ಆಚರಣೆ ಇರಲ್ಲ. ಹೇಗೆ ಎರಡು ವರ್ಷ ಕ್ಷಮಿಸಿ ಪ್ರೀತಿಸಿದ್ರೋ ಹಂಗೆ ಈ ವರ್ಷ ಕೂಡ ಕ್ಷಮಿಸಿ. ಮುಂದಿನ ವರ್ಷ ಎಲ್ಲರೂ ಸೇರಿ ಬರ್ತ್‌ಡೇ ಆಚರಿಸೋಣ” ಎಂದಿದ್ದಾರೆ.


ಮುಂದಿನ ವರ್ಷ ಒಳ್ಳೆ ಕೆಲಸಗಳ ಮೂಲಕ ಹುಟ್ಟುಹಬ್ಬ ಆಚರಿಸೋಣ. ನಾನು ಕೂಡ ನಿಮ್ಮ ಜೊತೆ ನಿಮ್ಮ ಜೊತೆ ಸೇರಿಕೊಳ್ಳುತ್ತೇನೆ. ಹಾಗಾಗಿ ಈ ವರ್ಷ ಎಲ್ಲಿದ್ದಿರೋ ಅಲ್ಲಿಂದಲೇ ಶುಭಾಶಯ ಕೋರಿ. ನನ್ನ ಹುಟ್ಟುಹಬ್ಬಕ್ಕೆ ತರುತ್ತಿದ್ದ ಕೇಕ್, ಹಾರ, ಶಾಲೂ ಮತ್ತೊಂದು ಎಲ್ಲದಕ್ಕೂ ಖರ್ಚು ಮಾಡುತ್ತಿದ್ದ ದುಡ್ಡಲ್ಲಿ ಒಂದಿಷ್ಟು ಅವಶ್ಯಕ ಇರುವ ಜೀವಗಳಿಗೆ ನಿಮ್ಮ ಕೈಲಾದ ಸಹಾಯ ಮಾಡಿ. ಅದರ ಮೂಲಕ ಹುಟ್ಟುಹಬ್ಬ ಆಚರಿಸೋಣ.

ಅವರ ಪ್ರಾರ್ಥನೆಗಳು ನನ್ನನ್ನು ಕಾಯುತ್ತದೆ. ನಿಮ್ಮನ್ನು ಕಾಯುತ್ತದೆ. ಈ ವರ್ಷ ಬರ್ತ್‌ಡೇ ಆಚರಣೆ ಇರಲ್ಲ. ನಾನು ಸಹ ಬೆಂಗಳೂರಿನಲ್ಲಿ ಇರುವುದಿಲ್ಲ. ಮನೆ ಬಳಿ ಸಿಗುವುದಕ್ಕೂ ಆಗುವುದಿಲ್ಲ. ನಾನು ಆ ದಿನ ಗೆಳೆಯರ ಜೊತೆ ಹೊರಗೆ ಹೋಗುತ್ತಿದ್ದೇನೆ. ಖಂಡಿತ ಹುಟ್ಟುಹಬ್ಬ ಮುಗಿದ ಮೇಲೆ ಯಾವುದಾದರೂ ಕಾರ್ಯಕ್ರಮದಲ್ಲಿ ಎಲ್ಲರೂ ಸಿಗೋಣ. ಥ್ಯಾಂಕ್ಯೂ” ಎಂದಿದ್ದಾರೆ.


ಧನಂಜಯ ಸದ್ಯ “ಹೆಡ್‌ ಬುಷ್‌” , “ಮಾನ್ಸೂನ್‌ ರಾಗ”, ‘ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ’, ‘ತೋತಾಪುರಿ’, “ಹೊಯ್ಸಳ” ಸೇರಿದಂತೆ ಟಾಲಿವುಡ್‌ ನ “ಪುಷ್ಪ-2” ಸಿನಿಮಾದಲ್ಲಿ ಬ್ಯುಸಿದ್ದಾರೆ.

RELATED ARTICLES

Most Popular

Share via
Copy link
Powered by Social Snap