ಡಾಲಿ ಧನಂಜಯ ಬ್ಯಾಕ್ ಟು ಬ್ಯಾಕ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವರ ‘ಉತ್ತರಕಾಂಡ’ ಸಿನೆಮಾದ ಮುಹೂರ್ತ ನೆರವೇರಿದೆ. ಇದೇ ತಿಂಗಳ 30 ರಂದು ಅವರ ಜಮಾಲಿಗುಡ್ಡ ಸಿನಿಮಾ ಕೂಡ ತೆರೆಗೆ ಬರಲಿದೆ.
ಈ ನಡುವೆ ಡಾಲಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಾಕಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.
ಒಂದು ಕೋಣೆಯಲ್ಲಿ ಕೂತುಕೊಂಡು ಡಾಲಿ ಪೇಪರ್ ತುಂಬಾ ಯೋಚನೆ ಮಾಡಿಆ ಪೇಪರ್ ನಲ್ಲಿ ’12-1=23′ ಬರೆದು ಏನಿರಬಹುದೆಂದು ಅವರೇ ಪ್ರಶ್ನೆ ಹಾಕಿದ್ದಾರೆ.
ಸದ್ಯ ಈ ಪೋಸ್ಟ್ ವೈರಲ್ ಆಗಿದ್ದು, ‘ಬಡವ ರಾಸ್ಕಲ್’ ಎರಡನೇ ಭಾಗ ಇದಾಗಿರಬಹುದು. ಹೊಸ ಸಿನಿಮಾದ ಟೈಟಲ್ ಇರಬಹುದೆಂದು ಅಭಿಮಾನಿಗಳು ಊಹಿಸಿದ್ದಾರೆ.
ಮೋಹಕ ತಾರೆ ರಮ್ಯಾ ಅವರು ಡಾಲಿ ಅವರ ಪೋಸ್ಟ್ ಗೆ ಈ ದಿನ ನಿಮ್ಮ ಮದುವೆಯೆಂದು ಕಾಮೆಂಟ್ ಮಾಡಿ ಡಾಲಿ ಕಾಲು ಎಳೆದಿದ್ದಾರೆ.
ಕುತೂಹಲದ ಪ್ರಶ್ನೆಯ ಬಗ್ಗೆ ಮುಂದಿನ ದಿನದಲ್ಲೇ ಡಾಲಿ ಅವರು ಸ್ಪಷ್ಟಪಡಿಸಬೇಕು.

