ಕನ್ನಡದಲ್ಲಿ ಹೊಸ ಪ್ರಯೋಗದ ಸಿನಿಮಾಗಳು ಬರುತ್ತಿರುತ್ತದೆ. ಈ ಸಾಲಿಗೆ ʼದೇವಿಪುತ್ರಿʼ ಎನ್ನುವ ಸಿನಿಮಾವೂ ಸೇರಿದೆ. ಹಾರಾರ್ ಕಥಾಹಂದರವುಳ್ಳ ಚಿತ್ರವನ್ನು ಯೋಗೀಶ್ ಎಂ ಅವರು ನಿರ್ದೇಶನ ಮಾಡುತ್ತಿದ್ದಾರೆ.
ಫ್ಯಾಮಿಲಿ ಡ್ರಾಮಾ ಕಥೆಗೆ ಹಾರಾರ್ ಟಚ್ ಕೊಟ್ಟು ಹೊಸ ಬಗೆಯ ಕಥೆಯನ್ನು ನಿರ್ದೇಶಕರು ಹೇಳಲು ಹೊರಟಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಮುಕ್ತಾಯ ಕಂಡಿದ್ದು, ವಿಎಫ್ ಎಕ್ಸ್ ಹಾಗೂ ಇತರ ಕಾರ್ಯದಲ್ಲಿ ಚಿತ್ರ ತಂಡ ಬ್ಯುಸಿಯಾಗಿದೆ.
ಸ್ಕೈ ಬೆಲ್ಸ್ ಮಲ್ಟಿಮೀಡಿಯಾ ಬ್ಯಾನರ್ ನಡಿಯಲ್ಲಿ ಈ ಚಿತ್ರ ತಯಾರಾಗಿದೆ. ಪೋಸ್ಟ್ ಪ್ರೂಡಕ್ಷನ್ ಹಂತದಲ್ಲಿರುವ ಚಿತ್ರ ಶೀಘ್ರದಲ್ಲಿ ತೆರೆಗೆ ಬರುವ ತಯಾರಿಯಲ್ಲಿದೆ.
ಎನ್ ಎಲ್ ನರೇಂದ್ರ ಬಾಬು, ಉಗ್ರಂ ಮಂಜು, ರಂಜನ್ ಶೆಟ್ಟಿ, ಮಧು ಎಂ, ವಿಜಯ್ ಚೆಂದೂರ್, ಸ್ವಾತಿ ಸೇರಿದಂತೆ ಇತರ ಪ್ರಮುಖ ಕಲಾವಿದರು ನಟಿಸಿದ್ದಾರೆ.