ಸ್ಟಾರ್ ದಂಪತಿಗಳು ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್ ನ ಕ್ಯೂಟ್ ಕಪಲ್ಸ್ ದೀಪಿಕಾ ಪಡುಕೋಣೆ – ರಣ್ವೀರ್ ಸಿಂಗ್ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನುವ ಸುದ್ದಿಯೊಂದು ವೈರಲ್ ಆಗಿತ್ತು.
ಇತ್ತೀಚೆಗೆ ವಿದೇಶಿ ಸೆನ್ಸಾರ್ ಬೋರ್ಡ್ ನ ಸದಸ್ಯ ಉಮೈರ್ ಸಂಧು ಸೆ. 27 ರಂದು ‘ಬ್ರೇಕಿಂಗ್ ದೀಪಿಕಾ – ರಣ್ವೀರ್ ನಡುವೆ ಎಲ್ಲವೂ ಸರಿಯಾಗಿಲ್ಲ’ ಎನ್ನುವ ಟ್ವೀಟ್.
ಬಾಲಿವುಡ್ ಕ್ಯೂಟ್ ಕಪಲ್ಸ್ ಗಳಲ್ಲಿ ಒಬ್ಬರಾಗಿರುವ ದೀಪಿಕಾ ಪಡುಕೋಣೆ – ರಣ್ವೀರ್ ಸಿಂಗ್ ಅನ್ಯೋನ್ಯವಾಗಿ ಇದ್ದಾರೆ. ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಇದ್ದಾರೆ. ರಣ್ವೀರ್ ನನ್ನ ಯಶಸ್ಸಿನ ಹಿಂದೆ ಪತ್ನಿ ದೀಪಿಕಾ ಇದ್ದಾರೆ ಎಂದು ಹೇಳಿದ್ದರು.
ಇದಾದ ಬಳಿಕ ದೀಪಿಕಾ – ರಣ್ವೀರ್ ಜೊತೆಯಾಗಿ ಅಷ್ಟಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಇಬ್ಬರು ಬೇರೆ ಬೇರೆ ಕಡೆ ಇದ್ದಾರೆ. ಆದರೆ ಇದು ಇಬ್ಬರೂ ದೂರವಾಗಿದ್ದಾರೆ ಎಂದರ್ಥವಲ್ಲ.
ದೀಪಿಕಾ ಪಡುಕೋಣೆ ಮಾತಾನಾಡಿ, ನನ್ನ ಪತಿ ಒಂದು ವಾರಗಳ ಕಾಲ ಮ್ಯೂಸಿಕ್ ಕಾರ್ಯಕ್ರಮದಲ್ಲಿ ಬ್ಯುಸಿ ಇದ್ದರು. ಈಗತಾನೆ ವಾಪಸ್ ಬಂದಿದ್ದಾರೆ. ನನ್ನ ಮುಖ ನೋಡಿದರೆ ಅವರಿಗೆ ಖಂಡಿತಾ ಖುಷಿ ಆಗಲಿದೆ’ ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ.

