HomeNewsಕ್ರಿಸ್ ಗೇಲ್ ನ ಭೇಟಿಯಾದರು ಬಿಗ್ ಬಾಸ್ ನ 'ನಾಗಿಣಿ'!

ಕ್ರಿಸ್ ಗೇಲ್ ನ ಭೇಟಿಯಾದರು ಬಿಗ್ ಬಾಸ್ ನ ‘ನಾಗಿಣಿ’!

ಕನ್ನಡ ಕಿರುತೆರೆಯ ಹೆಸರಾಂತ ನಟಿಯರಲ್ಲಿ ಒಬ್ಬರಾದವರು ದೀಪಿಕಾ ದಾಸ್. ‘ನಾಗಿಣಿ’ ಧಾರಾವಾಹಿಯ ಮೂಲಕ ಕಿರುತೆರೆ ಪ್ರೇಕ್ಷಕರ ಮನೆಮಗಳಾದ ಇವರು, ನಂತರ ಬಿಗ್ ಬಾಸ್ ಮನೆ ಪ್ರವೇಶಿಸಿ ಇನ್ನಷ್ಟು ಜನಪ್ರಿಯತೆ ಪಡೆದರು. ‘ನಾಗಿಣಿ’ ಎಂದೇ ಪ್ರಖ್ಯಾತಾರಾಗಿರುವ ದೀಪಿಕಾ, ಬಿಗ್ ಬಾಸ್ ಮನೆಯಲ್ಲಿ ತಮ್ಮ ಗಟ್ಟಿ ನಿಲುವಿನಿಂದಲೇ ಎಲ್ಲರ ಅಚ್ಚುಮೆಚ್ಚು ಆದವರು. ಸದ್ಯ ದೀಪಿಕಾ ಅವರು ಶೂಟಿಂಗ್ ನ ಗಡಿಬಿಡಿಗಳ ನಡುವೆ ಒಂದಿಂಚು ಬ್ರೇಕ್ ಪಡೆದು ದುಬೈ ಗೆ ಹಾರಿದ್ದಾರೆ. ಆಶ್ಚರ್ಯವೆಂದರೆ, ಅಲ್ಲಿಯೇ ಅಕಸ್ಮಾತ್ ಆಗಿ ಹೆಸರಾಂತ ಕ್ರಿಕೆಟಿಗ ಕ್ರಿಸ್ ಗೇಲ್ ಅವರನ್ನು ಭೇಟಿಯಾಗಿದ್ದಾರೆ.

ವೆಸ್ಟ್ ಇಂಡೀಸ್ ಮೂಲದ ಹೆಸರಾಂತ ಕ್ರಿಕೆಟಿಗ ಕ್ರಿಸ್ ಗೇಲ್. ಪ್ರಪಂಚದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಪಡೆದಿರುವ ಇವರ ಕ್ರಿಕೆಟ್ ಆಟಕ್ಕೆ ಮಾರುಹೋಗದವರೇ ಇಲ್ಲ. ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಟವಾಡಿದ್ದ ಇವರು, ಹಲವು ಕನ್ನಡದ ಅಭಿಮಾನಿಗಳನ್ನು ಕೂಡ ಪಡೆದಿದ್ದಾರೆ. ಸದ್ಯ ಈ ಕ್ರಿಸ್ ಗೇಲ್ ಅವರನ್ನು ದುಬೈ ನಲ್ಲಿ ದೀಪಿಕಾ ದಾಸ್ ಭೇಟಿಯಾಗಿದ್ದು, ಅವರೊಂದಿಗಿನ ಫೋಟೋವೊಂದನ್ನು ದೀಪಿಕಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಕ್ರಿಸ್ ಗೇಲ್ ಅವರ ಅಸಂಖ್ಯ ಅಭಿಮಾನಿಗಳಲ್ಲಿ ಒಬ್ಬರಾಗಿರುವ ದೀಪಿಕಾ, ಈ ಕ್ಷಣವನ್ನು ಅತ್ಯಂತ ಸಂತಸದಿಂದ ಹಂಚಿಕೊಂಡಿದ್ದಾರೆ.

ಸ್ನೇಹಿತರ ಜೊತೆಗೆ ಮೋಜು ಮಸ್ತಿಗಾಗಿ ಟ್ರಿಪ್ ಹೊರಟ ದೀಪಿಕಾ ಈ ಅಕಸ್ಮಾತ್ ಭೇಟಿಯಿಂದ ಅತ್ಯಂತ ಸಂತುಷ್ಟರಾಗಿದ್ದಾರೆ. ಅಭಿಮಾನಿಗಳು ಕೂಡ ಇವರ ಈ ಸುಂದರ ಕ್ಷಣಕ್ಕೆ ಇನ್ನಷ್ಟು ಅಭಿಮಾನ ತುಂಬಿದ್ದಾರೆ. ಕ್ರಿಸ್ ಗೇಲ್ ಅವರು, ಇದೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಕನ್ನಡದ ನಟರ ಕ್ರಿಕೆಟ್ ಲೀಗ್,’ಕನ್ನಡ ಚಲನಚಿತ್ರ ಕಪ್’ ಅಲ್ಲಿ ಕೂಡ ಪಾಲ್ಗೊಳ್ಳಲಿದ್ದಾರೆ.

RELATED ARTICLES

Most Popular

Share via
Copy link
Powered by Social Snap