ಹರಾರೆ: ಭಾರತ ಜಿಂಬಾಬ್ವೆ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಂಡಿದೆ. ಇದೇ ವೇಳೆ ಭಾರತದ ಆಟಗಾರನೊಬ್ಬ ವಿಶಿಷ್ಟವಾದ ವಿಶ್ವದಾಖಲೆಯನ್ನು ಬರೆದಿದ್ದಾನೆ.
ಹಾರ್ದಿಕ್ ಪಾಂಡ್ಯ ಇಲ್ಲದ ಕಾರಣ ಮಧ್ಯಮ ಕ್ರಮಾಂಕದಲ್ಲಿ ಆಡಲು ಅವಕಾಶ ಪಡೆದುಕೊಂಡ ಬರೋಡದ ದೀಪಕ್ ಹೂಡಾ ತನ್ನ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಮಿಂಚಿದ್ದಾರೆ. ಅವರು ವಿಶಿಷ್ಟ ವಿಶ್ವದಾಖಲೆಯನ್ನು ಗಮನ ಸೆಳೆದಿದ್ದಾರೆ.
2022 ಫೆಬ್ರವರಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ದೀಪಕ್ ಹೂಡಾ ಇದುವರೆಗೆ 7 ಏಕದಿನ ಹಾಗೂ 9 ಟಿ-ಟ್ವಿಂಟಿಯನ್ನು ಆಡಿದ್ದಾರೆ. ವಿಶೇಷ ಅಂದರೆ ಅವರು ಪಾದಾರ್ಪಣೆ ಮಾಡಿದಾಗದಿಂದ ಇದುವರೆಗೆ ಆಡಿರುವ 16 ಪಂದ್ಯದಲ್ಲಿ ಭಾರತ ಒಂದು ಪಂದ್ಯವನ್ನು ಕೂಡ ಸೋತಿಲ್ಲ. ಇದು ವಿಶಿಷ್ಟ ವಿಶ್ವದಾಖಲೆ ಆಗಿದೆ.
ಈ ಹಿಂದೆ ಈ ದಾಖಲೆ ರೊಮೇನಿಯಾದ ಸ್ವಾತಿಕ್ ನದಿಗೋತ್ಲಾ ಅವರ ಹೆಸರಿನಲ್ಲಿತ್ತು.ಅವರು ಪಾದಾರ್ಪಣೆ ಮಾಡಿದ ಬಳಿಕ ಸತತ 15 ಪಂದ್ಯಗಳನ್ನು ಗೆದ್ದು ದಾಖಲೆ ಬರೆದಿದ್ದರು. ಈ ದಾಖಲೆಯನ್ನು ದೀಪಕ್ ಬದಿಗಟ್ಟಿದ್ದಾರೆ.

