ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರು ನಿರ್ದೇಶನದ ಫೀಲ್ಡ್ ಗೆ ಇಳಿದಿದ್ದಾರೆ.
‘ಡೆಡ್ಲಿ ಕ್ಲಿಲ್ಲರ್’ ಸಸ್ಪೆನ್ಸ್ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಲು ಹೊರಟಿದ್ದಾರೆ.
ನಾಯಕನ ಸುತ್ತ ಎಂಟು ಪಾತ್ರಗಳಿದ್ದು, ಪ್ರತಿಯೊಂದು ಪಾತ್ರವೂ ಆದರದೇ ಆದ ಮಹತ್ವವನ್ನು ಹೊಂದಿದೆ. ಚಿತ್ರದಲ್ಲಿ ರೋಚಕತೆಯಿದ್ದು, ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರಿಸುವುದು ಖಂಡಿತ ಎನ್ನುತ್ತದೆ ಚಿತ್ರ ತಂಡ.
ಟೈಟಲ್ ನೋಡಿದರೆ ಇದೊಂದು ಸರಣಿ ಕೊಲೆಯ ಸುತ್ತ ಸಾಗುವ ಚಿತ್ರದಂತೆ ಕಾಣುತ್ತದೆ.
ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಜಗ್ಗೇಶ್ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು.
ಅಭಯ್ ವೀರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

