HomeMoviesಥ್ರಿಲ್ಲರ್ ಮಂಜು ನಿರ್ದೇಶನದ ಡೆಡ್ಲಿ ಕಿಲ್ಲರ್ ಸಿನಿಮಾಗೆ ಯು/ಎ ಪ್ರಮಾಣ ಪತ್ರ! ಯಾವುದೇ ಕಟ್ಸ್...

ಥ್ರಿಲ್ಲರ್ ಮಂಜು ನಿರ್ದೇಶನದ ಡೆಡ್ಲಿ ಕಿಲ್ಲರ್ ಸಿನಿಮಾಗೆ ಯು/ಎ ಪ್ರಮಾಣ ಪತ್ರ! ಯಾವುದೇ ಕಟ್ಸ್ ನೀಡದ ಸೆನ್ಸಾರ್ ಮಂಡಳಿ

ಬಹಳ ದಿನಗಳ ನಂತರ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ ಡೆಡ್ಲಿ ಕಿಲ್ಲರ್,ಕೀರ್ತಿ ಸಿಲ್ವರ್ ಸ್ಕ್ರೀನ್‌ ಹಾಗೂ ವೇದಿಕ್ ಕಾಸ್ಮಾಸ್ ಮೂಲಕ ಪ್ರಶಾಂತ್ ಟಿ.ತಂಬ್ರಳ್ಳಿಮಠ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿಭಿನ್ನವಾದ ಆಕ್ಷನ್, ಥ್ರಿಲ್ಲರ್, ಹಾರರ್ ಕಥಾಹಂದರ ಒಳಗೊಂಡ ಈ ಚಿತ್ರವೀಗ ಬಿಡುಗಡೆಗೆ ಸಿದ್ದವಾಗಿದ್ದು, ಇತ್ತೀಚೆಗಷ್ಟೇ ಸೆನ್ಸಾರ್ ಪ್ರಕ್ರಿಯೆ ಕೂಡ ಮುಗಿಸಿಕೊಂಡಿದೆ. ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯಾವುದೇ ಕಟ್ಸ್ ಕೊಡದೆ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ.


ಈ ಚಿತ್ರದಲ್ಲಿ ಯುವನಟ ಅಭಯ್‌ವೀರ್ ಹಾಗೂ ನಿವೀಕ್ಷಾ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಐವರು ವಿಲನ್‌ಗಳ ಜೊತೆ ಹುಡುಗಿಯೊಬ್ಬಳನ್ನು ಪೊಲೀಸರು ಆಂದ್ರ ಪ್ರದೇಶದಲ್ಲಿ ಬಂಧಿಸಿ, ಕರ್ನಾಟಕಕ್ಕೆ ಕರೆತರುವಾಗ ಮಾರ್ಗಮದ್ಯೆ ಕಾಡಲ್ಲಿ ಅವರುಗಳು ಪೋಲೀಸರಿಂದ ಎಸ್ಕೇಪ್ ಆಗುತ್ತಾರೆ, ಅಲ್ಲಿಂದ ಅವರು ರಕ್ಷಣೆಗಾಗಿ ಕಾಡಲ್ಲಿರುವ ಮನೆಯೊಂದಕ್ಕೆ ಹೋಗುತ್ತಾರೆ. ನಂತರ ಅವರೆಲ್ಲ ಅದೇ ಮನೆಯಲ್ಲಿ ಲಾಕ್ ಆಗಿಬಿಡುತ್ತಾರೆ, ಮುಂದೇನಾಯ್ತು ಅನ್ನೋದೇ ಚಿತ್ರದ ಕುತೂಹಲ. ಈ ಚಿತ್ರದಲ್ಲಿ ಒಟ್ಟು ೩ ಹಾಡುಗಳಿದ್ದು, ವಿನು ಮನಸು ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಅಲ್ಲದೆ ಮಲ್ಲಿಕಾರ್ಜುನ್ ಅವರ ಛಾಯಾಗ್ರಹಣ, ದೀಪು ಅವರ ಸಂಕಲನ ಈ ಚಿತ್ರಕ್ಕಿದೆ. ಚಿತ್ರದಲ್ಲಿ ೬ ವಿಶಿಷ್ಠವಾದ ಸಾಹಸ ದೃಶ್ಯಗಳಿದ್ದು, ನಿರ್ದೇಶಕ ಥ್ರಿಲ್ಲರ್ ಮಂಜು ಅವರೇ ಎಲ್ಲಾ ಆಕ್ಷನ್ ಗಳನ್ನು ಕಂಪೋಜ್ ಮಾಡಿದ್ದಾರೆ. ಲೋಕೇಂದ್ರ ಸೂರ್ಯ, ಥ್ರಿಲ್ಲರ್ ಮಂಜು, ಸುನಿಲ್ ಬಾಲ್ಡರ್ ಮುಂತಾದವರು ಈ ಚಿತ್ರದ ಉಳಿದ ಪಾಅತ್ರಗಳಲ್ಲಿ ನಟಿಸಿದ್ದಾರೆ.
ಸದ್ಯದಲ್ಲೇ ಡೆಡ್ಲಿ ಕಿಲ್ಲರ್ ಚಿತ್ರವು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

RELATED ARTICLES

Most Popular

Share via
Copy link
Powered by Social Snap