HomeNews''ನಾನು ಸತ್ತ ದಿನವೂ ನನ್ನ ಮುಖದಲ್ಲಿ ಬಣ್ಣವಿರಬೇಕು": ನಟನೆ ನಿವೃತ್ತಿ ಬಗ್ಗೆ ದಾಸನ ಮಾತು

”ನಾನು ಸತ್ತ ದಿನವೂ ನನ್ನ ಮುಖದಲ್ಲಿ ಬಣ್ಣವಿರಬೇಕು”: ನಟನೆ ನಿವೃತ್ತಿ ಬಗ್ಗೆ ದಾಸನ ಮಾತು

ಡಿಬಾಸ್ ದರ್ಶನ್ ಅವರ ‘ಕ್ರಾಂತಿ’ ಜನವರಿ 26,2023 ರಂದು ತೆರೆಗೆ ಬರಲಿದೆ.

ಸಿನಿಮಾದ ಪ್ರಚಾರದ ಅಂಗವಾಗಿ ದರ್ಶನ್ ಹಲವಾರು ಸಂದರ್ಶನದಲ್ಲಿ ಭಾಗಿಯಾಗುತ್ತಿದ್ದಾರೆ ಪ್ರಶ್ನೆಗಳಿಗೆ ನೇರವಾಗಿಯೇ ಉತ್ತರ ನೀಡುತ್ತಿದ್ದಾರೆ. ‘ಬೆಂಗಳೂರು ಟೈಮ್ಸ್’ ನಡೆಸಿದ ಸಂದರ್ಶನದಲ್ಲಿ ನಟ ದರ್ಶನ್ ನಟನೆಯಿಂದ ನಿವೃತ್ತಿ ಹಾಗೂ ನಟನಾಗಲು ಯಾವಾಗ ಬಯಸಿದ್ದರು ಎಂಬಿತ್ಯಾದಿ ಬಗ್ಗೆ ಮುಕ್ತವಾಗಿ ಮಾತಾನಾಡಿದ್ದಾರೆ.

ಮೆಜೆಸ್ಟಿಕ್ ನಿಂದ ಇಲ್ಲಿಯವರೆಗೆ ನಾನು ಮಾಡಿರುವ ಪಾತ್ರಗಳು ಯಶಸ್ಸಿಗೆ ಕಾರಣಾಗಿದೆ. ಅವು ಯಾವುದೂ ಸುಲಭವಾಗಿ ದಕ್ಕಿದ್ದಲ್ಲ. ಅದು ಕಷ್ಟದ ಪ್ರತಿಫಲ, ಅದೃಷ್ಟದ ಯಶಸ್ಸಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ಇನ್ನು ಚಿತ್ರರಂಗದಲ್ಲಿ ಸಾಧಿಸುವುದು ತುಂಬನೇ ಇದೆ ಎಂದಿದ್ದಾರೆ.

ನಟನಾಗಲು ಬಹಳ ಮುಂದೆಯೇ ತೀರ್ಮಾನ ‌ಮಾಡಿದ್ರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ನಟನಾಗಬೇಕು, ಚಿತ್ರರಂಗಕ್ಕೆ ಬರಬೇಕೆಂದು ತೀರ್ಮಾನ ‌ಮಾಡಿದ್ದು ನನ್ನ ಅಪ್ಪು ತೂಗುದೀಪ ದರ್ಶನ್ ಅವರು ನಿಧನ ಹೊಂದಿದ ದಿನದಂದು. ಅಲ್ಲಿಯವರೆಗೆ ಝೂ ಕೀಪರ್ ಆಗಬೇಕೆಂದುಕೊಂಡಿದ್ದೆ. ನನ್ನ ತಂದೆ ಸಾವಿನ ದಿನ ಮನೆ ಮುಂದೆ ಸೇರಿದ ಜನರನ್ನು ನೋಡಿ, ಇದನ್ನು ನಾನು ಹಾಗೆಯೇ ಉಳಿಸಿಕೊಂಡು ಹೋಗಬೇಕೆಂದು ತೀರ್ಮಾನಿಸಿ ನಟನೆಯತ್ತ ಕಾಲಿಟ್ಟೆ ಎಂದರು.

ನಟನೆಯಿಂದ ನಿವೃತ್ತಿಯಾಗಲು ಯೋಚಿಸಿದ್ದೀರಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಸತ್ತ ದಿನವೂ ನನ್ನ ಮುಖದಲ್ಲಿ ‌ಬಣ್ಣವಿರಬೇಕು. .ಮುಖದ ಮೇಲೆ ಪಾತ್ರದ ಬಣ್ಣವಿರುವಾಗಲೇ ಕೊನೆಯುಸಿರೆಳೆಯಬೇಕು. ನಟನೆ ಬಿಡುವ ಮಾತೇ ಇಲ್ಲ, ನಾನು ಇಲ್ಲಿಯವರೆಗೆ ಕಷ್ಟಪಟ್ಟು ಬಂದಿದ್ದೇನೆ ಎಂದರು.

RELATED ARTICLES

Most Popular

Share via
Copy link
Powered by Social Snap