‘ಕ್ರಾಂತಿ’ ಚಿತ್ರದ ಮೂರನೇ ಹಾಡು ‘ಪುಷ್ಪಾವತಿ’ ಹುಬ್ಬಳ್ಳಿಯಲ್ಲಿ ರಿಲೀಸ್ ಆಗಿದೆ. ಹಾಡು ರಿಲೀಸ್ ಗೂ ಮುನ್ನ ನಟ ದರ್ಶನ್ ಪತ್ರಕರ್ತರ ಬಳಿ ಮಾತಾನಾಡಿದರು.
ಈ ವೇಳೆ ಅನೇಕ ವಿಚಾರಗಳ ಪ್ರತಿಕ್ರಿಯೆ ನೀಡಿದ್ದಾರೆ. ಪೈರಸಿ ವಿಚಾರದ ಬಗ್ಗೆ ಮಾತಾನಾಡಿದ ಅವರು ಸಿನಿಮಾ ಚೆನ್ನಾಗಿದ್ದರೆ ಅದಕ್ಕೆ ಗೆಲುವು ಸಿಕ್ಕೇ ಸಿಕ್ಕುತ್ತದೆ. ‘ಯಜಮಾನ’ ಸಿನಿಮಾ 45 ದಿನಗಳ ಬಳಿಕ ಓಟಿಟಿಯಲ್ಲಿ ರಿಲೀಸ್ ಆಯಿತು. ಆದರೂ ಅದು 100 ದಿನ ಥಿಯೇಟರ್ ನಲ್ಲಿ ಓಡಿತು ಎಂದು ಉದಾಹರಣೆ ಕೊಟ್ಟರು. ಸಿನಿಮಾದ ಕಂಟೆಂಟ್ ಚೆನ್ನಾಗಿದ್ದರೆ ಜನ ಪೈರಸಿ ಆದರೂ ಥಿಯೇಟರ್ ಗೆ ಬಂದು ಸಿನಿಮಾ ನೋಡುತ್ತಾರೆ ಎಂದರು.
ಇನ್ನು ಹೊಸಪೇಟೆ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಯಾರು ಏನೇ ಮಾಡಲಿ, ಹಾಳು ಮಾಡಲು ಒಂದು ಜನವಿದ್ದರೆ ಕಾಪಾಡೋಕೆ ಸಾವಿರಾರು ಮಂದಿ ಇರುತ್ತಾರೆ. ನಿನ್ನೆ ಬಿದ್ದಿರೋದಕ್ಕೆ ಇವತ್ತು ಹೂವಿನಲ್ಲಿ ಮುಳುಗಿಸಿದ್ರಾ? ಇದಕ್ಕಿಂತ ಬೇಕಾ? ಇದಕ್ಕಿಂತ ಬೇಕೆನಪ್ಪಾ? ಅದ್ಯಾವುದು ನಾವು ತಲೆಗೂ ಹಾಕಿಕೊಳ್ಳೋದಿಲ್ಲ. ನೀವು ಏನೇ ಮಾಡಿದ್ರೂ ನಾವು ತಲೆಗೂ ಹಾಕಿಕೊಳ್ಳಲ್ಲ. ನೊಂದುಕೊಳ್ಳಲ್ಲ. ಬೇಜಾರು ಮಾಡಿಕೊಳ್ಳಲ್ಲ. ಹಿಂಗೆ (ಕಾಲರ್) ಎತ್ಕೊಂಡೆ ಓಡಾಡೋಣ. ಇನ್ನೂ ಒಂದು ಸ್ಟೆಪ್ ಮುಂದಕ್ಕೆ ಹೋಗಿ ಉರಿಸಬೇಕು ಅಂದ್ರೆ, ಇನ್ನೂ ಜಾಸ್ತಿ ಉರಿಸೋಣ. ನಾವು ಮಾತಾಡೋದು ಬೇಡ. ನಮ್ಮ ಕೆಲಸ ಮಾತಾಡಲಿ ಅಂತಾನೇ ನಾನು ಬಯಸೋದು’ ಎಂದು ಹೇಳಿಕೆ ನೀಡಿದರು.
ವಿವಾದದ ಬಳಿಕ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಅವರ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

