HomeExclusive Newsಪರವಾಗಿ ನಿಂತ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ ದಾಸ

ಪರವಾಗಿ ನಿಂತ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ ದಾಸ

ಹೊಸಪೇಟೆಯಲ್ಲಾದ ಘಟನೆಯ ಬಳಿಕ ಡಿಬಾಸ್ ದರ್ಶನ್ ತನ್ನ ಪರವಾಗಿ ನಿಂತವರ ಬಗ್ಗೆ ಮಾತಾನಾಡಿದ್ದಾರೆ.


ಕಿಚ್ಚ ಮಾತ್ರವಲ್ಲದೆ. ಶಿವರಾಜ್ ಕುಮಾರ್, ನವರಸ ನಾಯಕ ಜಗ್ಗೇಶ್ ಸೇರಿದಂತೆ ಅನೇಕ ಹಿರಿ – ಕಿರಿಯ ಕಲಾವಿದರು ದರ್ಶನ್ ಅವರ ಪರ ನಿಂತಿದ್ದಾರೆ.

ಡಿಬಾಸ್ ದರ್ಶನ್ ಅವರು ಪ್ರತಿಯೊಬ್ಬರಿಗೂ ಧನ್ಯವಾದಗಳೆಂದು ಪ್ರತಿಕ್ರಿಯೆ ನೀಡಿದ್ದಾರೆ. ಇದರೊಂದಿಗೆ ಈ ಸಮಯದಲ್ಲಿ ನನಗಿಂತಲೂ ನನ್ನ ಸೆಲೆಬ್ರಿಟಿಗಳಿಗೆ ಹೆಚ್ಚು ನೋವಾಗಿದೆ ಎಂಬ ಅರಿವು ನನಗಿದೆ. ಇಂಥ ಘಟನೆಗಳು ಒಬ್ಬ ವ್ಯಕ್ತಿಯನ್ನು ಮತ್ತಷ್ಟು ಬಲಪಡಿಸುತ್ತದೆಯೇ ಹೊರತೂ ಬಲಹೀನನನ್ನಾಗಿ ಮಾಡುವುದಿಲ್ಲ. ಅದಕ್ಕೆ ತಕ್ಕ ಉದಾಹರಣೆಗಳು ನಮ್ಮ ಕನ್ನಡ ನೆಲದಲ್ಲೇ ನೋಡಿದ್ದೇವೆ. ಈ ಸಮಯದಲ್ಲಿ ನ್ಯಾಯದ ಪರ ನಿಂತ ಪ್ರತಿಯೊಬ್ಬ ಚಿತ್ರರಂಗದ ಗೆಳೆಯರು, ನಟರಿಗೆ ಧನ್ಯವಾದಗಳು. ಈ ಘಟನೆಯನ್ನು ತಪ್ಪು ಹಾದಿಯಲ್ಲಿ ಪ್ರೇರೇಪಿಸಲು ಪ್ರಯತ್ನಿಸಿದ ಕೆಲವರಿಗೂ ಧನ್ಯವಾದಗಳು.

ಮೊದಲಿಂದಲೂ ಹೇಳಿಕೊಂಡು ಬಂದಿದ್ದೇನೆ, ಹಾಳು ಮಾಡೋಕೆ ನೂರು ಜನ ಇದ್ರೆ, ಕಾಯೋಕೆ ನಮ್ಮ ಕೋಟ್ಯಾಂತರ ಸೆಲೆಬ್ರಿಟಿಗಳಿರುತ್ತಾರೆ. ನಿಮ್ಮ ಈ ಪ್ರೀತಿಯ ಅಪ್ಪುಗೆಗೆ ಈ ದಾಸ ಸದಾ ಚಿರಋಣಿ ಎಂದಿದ್ದಾರೆ.

RELATED ARTICLES

Most Popular

Share via
Copy link
Powered by Social Snap