ದರ್ಶನ್ ‘ಕ್ರಾಂತಿ: ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿಯೊಂದು ಹೊರಬಿದ್ದಿದೆ.
ಗಾಳಿಪಟ -2 ಬಳಿಕ ಯೋಗರಾಜ್ ಭಟ್ ಶಿವರಾಜ್ ಕುಮಾರ್ ಅವರ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅವರ ನಿರ್ಮಾಣದ ‘ಪದವಿ ಪೂರ್ವ’ ಚಿತ್ರವೂ ತೆರೆಗೆ ಬರಲು ಸಿದ್ದವಾಗಿದೆ.
ಯುವ ನಟ ಸೂರ್ಯ ಹಾಗೂ ಹಿರಿಯ ನಟ ಬಿಸಿ ಪಾಟೀಲ್ ಮುಖ್ಯ ಭೂಮಿಕೆಯಲ್ಲಿ ‘ಗರಡಿ’ ಚಿತ್ರ ಬರುತ್ತಿರುವುದು ಗೊತ್ತೇ ಇದೆ. ಇದೇ ಚಿತ್ರದಲ್ಲಿ ದರ್ಶನ್ ಅವರು ಕಾಣಿಸಿಕೊಳ್ಳಲಿದ್ದಾರಂತೆ.
ದೇಸಿ ಕ್ರೀಡೆ ಕುಸ್ತಿಯ ಕಥೆಯನ್ನು ಒಳಗೊಂಡಿರುವ ಚಿತ್ರದಲ್ಲಿ ದರ್ಶನ್ ಅವರು ಪೈಲ್ವಾನ್ ಆಗಿ ಕಾಣಿಸಿಕೊಳ್ಳಬಹುದಾ ಎಂದು ಅಭಿಮಾನಿಗಳು ಊಹಿಸಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಮುಗಿಯಲಿದ್ದು, ದರ್ಶನ್ ಅವರು ಶೀಘ್ರದಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

