ಬೆಳಗಾವಿ ಗಡಿ ವಿಚಾರಕ್ಕೆ ಮಹಾರಾಷ್ಟ್ರ ಮೂಗು ತೂರಿಸಿಕೊಂಡಿ ಜಗಳಕ್ಕೆ ಬರುತ್ತಿದ್ದು, ಕನ್ನಡಗಿಗರ ಆಕ್ರೋಶಕ್ಕೆ ಕಾರಣಾಗಿದೆ. ಕನ್ನಡಿಗರು ರೊಚ್ಚಿಗೆದ್ದು, ಗಡಿ ವಿಚಾರದಲ್ಲಿ ಒಂದಾಗಿದ್ದಾರೆ. ಕನ್ನಡ ಪರ ಸಂಘಟನೆಗಳ ಹೋರಾಟ ಕಾವು ಪಡೆದುಕೊಂಡಿದ್ದು, ಕನ್ನಡ ಧ್ವಜ ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ.
ಕನ್ನಡ ನಾಡು, ನುಡಿ,ಜಲಕ್ಕೆ ಯಾವಾಗಲೂ ಸ್ಟಾರ್ ಗಳು ಒಂದಾಗುತ್ತಾರೆ. ಯಾವುದೇ ಸಂದರ್ಭವೂ ಆಗಲಿ ಅಲ್ಲಿ ಸ್ಟಾರ್ ಗಳು ಕನ್ನಡದ ಪರ ಧ್ವನಿ ಎತ್ತುತ್ತಾರೆ. ನಟ ದರ್ಶನ್ ಅವರು ಕೂಡ ಇದಕ್ಕೆ ಹೊರತಾಗಿಲ್ಲ ಈ ಹಿಂದೆಯೂ ಕನ್ನಡದ ಭಾಷೆ, ನೆಲ,ಜಲದ ಹೋರಾಟಕ್ಕೆ ಅವರು ಸಾಥ್ ನೀಡಿದ್ದರು.


ಈಗ ಬೆಳಗಾವಿ ಗಡಿ ವಿಚಾರದಲ್ಲೂ ಸಾಥ್ ನೀಡಿ,ಬೆಳಗಾವಿ ನಮ್ಮದು ಎನ್ನುವ ಕೂಗಿಗೆ ಧ್ವನಿ ಸೇರಿಸಿದ್ದಾರೆ.
ಕನ್ನಡದ ಧ್ವಜದ ಮುಂದೆ ನಿಂತುಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

