HomeNewsಸ್ನೇಹಿತನ ಸಿನಿ ನಿರ್ಮಾಣ ಸಂಸ್ಥೆ ಉದ್ಘಾಟಿಸಿ ಶುಭಹಾರೈಸಿದ ಡಿ ಬಾಸ್!

ಸ್ನೇಹಿತನ ಸಿನಿ ನಿರ್ಮಾಣ ಸಂಸ್ಥೆ ಉದ್ಘಾಟಿಸಿ ಶುಭಹಾರೈಸಿದ ಡಿ ಬಾಸ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ ಅಪಾರ ಅಭಿಮಾನಿ ಬಳಗವನ್ನ ಹೊಂದಿರುವ ನಟರುಗಳಲ್ಲಿ ಮುಂಚೂಣಿಯಲ್ಲಿರುವವರು. ತಮ್ಮ ಸಿನಿಮಾಗಳಷ್ಟೇ ಅಲ್ಲದೇ, ತಮ್ಮವರಿಗೆ, ತನ್ನ ಸ್ನೇಹಿತರಿಗೆ ಜೊತೆಯಾಗಿ ನಿಲ್ಲುವ ಡಿ ಬಾಸ್ ನ ಗುಣ ಅವರ ಮೇಲಿನ ಈ ಅಪಾರ ಅಭಿಮಾನಕ್ಕೆ ಕಾರಣ ಎಂದರೂ ತಪ್ಪಾಗದು. ಸದ್ಯ ಚುನಾವಣಾ ಪ್ರಚಾರ ಹಾಗು ತಮ್ಮ ಮುಂದಿನ ಸಿನಿಮಾವಾದ ‘ಕಾಟೇರಾ’ದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ದರ್ಶನ್ ಅವರು, ತಮ್ಮ ಎಲ್ಲಾ ಕೆಲಸಗಳ ನಡುವೆಯೂ ಗೆಳೆಯನೊಬ್ಬನ ಕನಸಿಗೆ ಜೊತೆಯಾಗಿ ನಿಂತಿದ್ದಾರೆ. ತಮ್ಮ ಸ್ನೇಹಿತ ಆರಂಭಿಸುತ್ತಿರುವ ಹೊಸ ನಿರ್ಮಾಣ ಸಂಸ್ಥೆ ಉದ್ಘಾಟನೆ ಮಾಡಿ ಶುಭ ಹಾರೈಸಿದ್ದಾರೆ.

ದರ್ಶನ್ ಅವರ ದೊಡ್ಡ ಗೆಳೆಯರ ಬಳಗದಲ್ಲಿ ಒಬ್ಬರಾದ ವಿ ವಿನಯ್ ಅವರು ಹೊಸದೊಂದು ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸುತ್ತಿದ್ದು, ಸದ್ಯ ಅದರದ್ದೇ ಉದ್ಘಾಟನೆಯಲ್ಲಿ ಡಿ ಬಾಸ್ ಪಾಲ್ಗೊಂಡಿದ್ದಾರೆ. ವಿನಯ್ ಅವರ ಈ ಹೊಸ ಸಂಸ್ಥೆಯ ಹೆಸರು ‘ವಿರೌಡ್’. ವಿ ಅಂದರೇ ವಿನಯ್, ರೌಡ್ ಅಂದರೇ ಸ್ಪ್ಯಾನಿಷ್ ನಲ್ಲಿ ಕಬ್ಬಿಣ ಎಂದರ್ಥವಂತೆ. ಈ ಸಂಸ್ಥೆ ಬಿಡದಿಯ ಸಮೀಪ ಅನಾವರಣಗೊಂಡಿದ್ದು, ಮೂಲತಃ ರಿಯಲ್ ಎಸ್ಟೇಟ್ ಉದ್ಯಮಿಯಾದ ವಿನಯ್ ಅವರು ಕನ್ನಡಕ್ಕೆ ಹೊಸರೀತಿಯ ಸಿನಿಮಾಗಳನ್ನ ನೀಡುವ ಆಸೆಯೊಂದಿಗೆ ಈ ನಿರ್ಮಾಣ ಸಂಸ್ಥೆಯನ್ನ ಹುಟ್ಟುಹಾಕಿದ್ದಾರೆ.

ಈ ಬಗ್ಗೆ ಮಾತನಾಡುವ ಅವರು, “ಇದು ಬಹಳ ದಿನಗಳ ಕನಸು. ನಮ್ಮ ಸಂಸ್ಥೆಯ ಹೆಸರು ‘ವಿರೌಡ್’. ನಮ್ಮ ಪ್ರತೀ ಹೆಜ್ಜೆಯಲ್ಲೂ ದರ್ಶನ್ ಅವರು ಜೊತೆಯಾಗಿ ನಿಂತಿದ್ದಾರೆ. ಈಗಲೂ ಕೂಡ ಚಿತ್ರೀಕರಣ, ಚುನಾವಣಾ ಪ್ರಚಾರ ಇದೆಲ್ಲದರ ನಡುವೆ ಬಂದು ನಮ್ಮ ನಿರ್ಮಾಣ ಸಂಸ್ಥೆಯನ್ನ ಅನಾವರಣ ಮಾಡಿಕೊಟ್ಟಿದ್ದಾರೆ. ಹೊಸತಾಗಿ, ವಿಭಿನ್ನವಾಗಿ ಏನಾದರೂ ಮಾಡಬೇಕು ಎಂಬ ಹಂಬಲದ ಜೊತೆಗೇ ಈ ಹೆಜ್ಜೆ ಇಟ್ಟಿದ್ದು, ಅದೇ ನಿಟ್ಟಿನಲ್ಲಿ ಕೆಲಸ ಕೂಡ ಮಾಡುತ್ತಿದ್ದೇವೆ. ಸದ್ಯದಲ್ಲೇ ನಮ್ಮ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿಗಳನ್ನ ಕೊಡುತ್ತೇವೆ” ಎಂದರು.

ಒಳ್ಳೆಯ ಕಂಟೆಂಟ್ ಇರುವಂತಹ ಮನರಂಜನಾತ್ಮಕ ಸಿನಿಮಾವನ್ನ ಕನ್ನಡ ಚಿತ್ರರಂಗಕ್ಕೆ ನೀಡುವ ಆಸೆ ಹೊತ್ತಿರುವ ವಿನಯ್ ಅವರು ತಮ್ಮ ಸಂಸ್ಥೆ ‘ವಿರೌಡ್’ ಬ್ಯಾನರ್ ಅಡಿಯಲ್ಲಿನ ಮೊದಲ ಸಿನಿಮಾದ ತಯಾರಿಯಲ್ಲಿದ್ದಾರೆ. ವಿನಯ್ ಆಪ್ತರೊಬ್ಬರೇ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ ಎನ್ನಲಾಗುತ್ತಿದ್ದು, ಅವರ ಬಗ್ಗೆ ಅಥವಾ ನಾಯಕನ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಸದ್ಯದಲ್ಲೇ ಈ ಮೊದಲ ಸಿನಿಮಾದ ಬಗ್ಗೆ ಅಪ್ಡೇಟ್ ನೀಡಬಹುದು ದರ್ಶನ್ ಆಪ್ತರ ‘ವಿರೌಡ್’.

RELATED ARTICLES

Most Popular

Share via
Copy link
Powered by Social Snap