HomeSportsಐಸಿಸಿ ವಿಶ್ವ ಕಪ್ 2023: ಶ್ರೀ ಲಂಕಾಗೆ ಎಂಟ್ರಿ, ವೆಸ್ಟ್ ಇಂಡೀಸ್ ಗೆ ಗೇಟ್ ಪಾಸ್!...

ಐಸಿಸಿ ವಿಶ್ವ ಕಪ್ 2023: ಶ್ರೀ ಲಂಕಾಗೆ ಎಂಟ್ರಿ, ವೆಸ್ಟ್ ಇಂಡೀಸ್ ಗೆ ಗೇಟ್ ಪಾಸ್! ಒಂದೆಡೆ ಸಂಭ್ರಮ ಇನ್ನೊಂದೆಡೆ ಮಹದಾಶ್ಚರ್ಯ!

ಈ ಅಕ್ಟೋಬರ್ ತಿಂಗಳಿನಲ್ಲಿ ಭಾರತದಲ್ಲಿ ನಡೆಯಲಿರುವ ಬಹುನಿರೀಕ್ಷಿತ ಏಕದಿನ ವಿಶ್ವಕಪ್ ಗೆ ದಿನಗಣನೆ ಆರಂಭವಾಗಿದೆ. ಈ ಪ್ರತಿಷ್ಟಿತ ಲೀಗ್ ನಲ್ಲಿ ಒಟ್ಟು ಹತ್ತು ಬಲಿಷ್ಠ ತಂಡಗಳು ಕಣಕ್ಕಿಳಿಯಲಿವೆ. ಇದರಲ್ಲಿ ಎಂಟು ತಂಡಗಳು ಈಗಾಗಲೇ ನೇರವಾಗಿ ತಮ್ಮ ಸ್ಥಾನ ಗಳಿಸಿಕೊಂಡಿವೆ. ಇನ್ನು ಉಳಿದಂತಹ ಎರಡು ಸ್ಥಾನಕ್ಕೆ ಒಟ್ಟು ಹತ್ತು ತಂಡಗಳು ಜಿಂಬಾಬ್ವೆನಲ್ಲಿ ಪೈಪೋಟಿಯನ್ನ ನಡೆಸುತ್ತಲಿವೆ. ಈ ಕ್ವಾಲಿಫಯರ್ಸ್ ತನ್ನ ಅಂತಿಮ ಹಂತವನ್ನ ತಲುಪುತ್ತಿದೆ. ಈ ಪೈಕಿ ಒಂದು ತಂಡ ತನ್ನ ಸ್ಥಾನವನ್ನ ಗಟ್ಟಿ ಮಾಡಿಕೊಂಡರೆ, ಮತ್ತೊಂದು ತಂಡ ಟೂರ್ನಿಯಿಂದ ಹೊರಬಿದ್ದಿದೆ. ಇದು ಪ್ರಪಂಚದ ವಿವಿಧ ಭಾಗಗಳ ಕ್ರಿಕೆಟ್ ಪ್ರೇಮಿಗಳಲ್ಲಿ ಅಚ್ಚರಿ ಹುಟ್ಟಿಸಿದೆ.

48 ವರ್ಷಗಳ ಏಕದಿನ ವಿಶ್ವಕಪ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ತಂಡ ವಿಶ್ವಕಪ್ ನಲ್ಲಿ ಪಾಲ್ಗೊಳ್ಳದೆ ಮರಳುವಂತಾಗಿದೆ. ಹೌದು, ಇಡೀ ಸರಣಿಯಲ್ಲಿ ಆಡಿದ ಒಟ್ಟು ಏಳು ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯಗಳನ್ನಷ್ಟೇ ಗೆಲ್ಲಲು ಯಶಸ್ವಿಯಾದಂತಹ ವಿಂಡೀಸ್ ತಂಡ, ಜುಲೈ 1ರಂದು ಸ್ಕಾಟ್ಲ್ಯಾಂಡ್ ಎದುರಿಗೆ ಆಡಿದ ಪಂದ್ಯದಲ್ಲಿ ಏಳು ವಿಕೆಟ್ ಗಳ ಸೋಲು ಕಾಣುವುದರ ಮೂಲಕ ಅಧಿಕೃತವಾಗಿ ಏಕದಿನ ವಿಶ್ವಕಪ್ ನಿಂದ ಹೊರಬಿದ್ದಿದೆ. ಇದು ಇಡೀ ಪ್ರಪಂಚದ ವಿವಿಧ ಮೂಲೆಯಲ್ಲಿರುವ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿ ತಂದಿದೆ. ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ನಲ್ಲೂ ಕೂಡ ವೆಸ್ಟ್ ಇಂಡೀಸ್ ತಂಡ ಹೊರಬಿದ್ದಿತ್ತು. ವೆಸ್ಟ್ ಇಂಡೀಸ್ ತಂಡ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕಾಣುತ್ತಿರುವ ಇಳಿತಕ್ಕೆ ಇಡೀ ವಿಶ್ವದ ಕ್ರಿಕೆಟ್ ಪ್ರೇಮಿಗಳು ನಿರಾಸೆ ವ್ಯಕ್ತಪಡಿಸಿದ್ದಾರೆ. ವೆಸ್ಟ್ ಇಂಡೀಸ್ ತಂಡದ ಆಟಗಾರರ ಬೇಜವಾಬ್ದಾರಿ, ಕಳಪೆ ಆಟವೇ ಇದಕ್ಕೆಲ್ಲ ಕಾರಣ ಎನ್ನುತ್ತಾರೆ ನೆಟ್ಟಿಗರು.

ಇನ್ನೊಂದೆಡೆ ಅತಿರಥ ಮಹಾರಥರ ನಿವೃತ್ತಿಯ ನಂತರ ಕೊಂಚ ಮಟ್ಟಿಗೆ ತಗ್ಗಿಹೋಗಿದ್ದ ಶ್ರೀಲಂಕಾ ತಂಡ, ಇದೀಗ ಅಂತರ್ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮರಳಿ ತನ್ನ ಹಿಡಿತ ಕಾಣುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಸದ್ಯ ನಡೆಯುತ್ತಿರುವ ಏಕದಿನ ವಿಶ್ವಕಪ್ ನ ಕ್ವಾಲಿಫಾಯರ್ಸ್ ನಲ್ಲಿ ಆಡಿದ ಎಂಟು ಪಂದ್ಯಗಳಲ್ಲಿ ಒಂದು ಸೋಲನ್ನೂ ಕಾಣದೆ, ಎಂಟೂ ಪಂದ್ಯಗಳಲ್ಲಿ ತಮ್ಮ ಉತ್ತಮ ಪ್ರದರ್ಶನದಿಂದಾಗಿ ಗೆಲುವು ಕಾಣುತ್ತಾ, ಏಕದಿನ ವಿಶ್ವಕಪ್ ಸರಣಿಯಲ್ಲಿನ ತಮ್ಮ ಜಾಗವನ್ನ ಖಾತ್ರಿ ಮಾಡಿಕೊಂಡಿದ್ದಾರೆ. ಜುಲೈ 2ರಂದು ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ ಒಂಬತ್ತು ವಿಕೆಟ್ ಗಳ ಭರ್ಜರಿ ಜಯ ಕಂಡು, ಭಾರತದಲ್ಲಿ ಅಕ್ಟೋಬರ್ ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಗೆ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಇದು ಇಡೀ ತಂಡಕ್ಕೆ ಹಾಗು ಶ್ರೀಲಂಕಾ ಅಭಿಮಾನಿಗಳಿಗೆ ಸಂತಸ ತಂದಿದೆ.

RELATED ARTICLES

Most Popular

Share via
Copy link
Powered by Social Snap