ಕೋವಿಡ್ ಪ್ರಕರಣಗಳು ಹೆಚ್ಚಾಗುವ ಭೀತಿಯಲ್ಲಿ ರಾಜ್ಯ ಸರ್ಕಾರ ರಾಜ್ಯಾದ್ಯಂತ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಮಾಸ್ಕ್ ಕಡ್ಡಾಯದೊಂದಿಗೆ ಅನೇಕ ಗೈಡ್ ಲೈನ್ಸ್ ಹೊರ ತಂದಿದೆ.
ಈಗಷ್ಟೇ ಸಿನಿಮಾಗಳು ಯಾವುದೇ ನಿರ್ಬಂಧವಿಲ್ಲದೆ, ಥಿಯೇಟರ್ ನಲ್ಲಿ ಬಿಡುಗಡೆ ಆಗುತ್ತಿದೆ. ಜನರಿಗೆ ಸಂಪೂರ್ಣವಾಗಿ ಮನರಂಜನೆ ಸಿಗುತ್ತಿದೆ. ಮೊದಲಿನ ಹಾಗೆ 50-50 ನಿಯಮಗಳಿಲ್ಲ. ಕೋವಿಡ್ ನಿಂದಾದ ನಷ್ಟದಿಂದ ಸಿನಿಮಾ ರಂಗ ಹಾಗೂ ಥಿಯೇಟರ್ ಗಳು ನಿಧಾನವಾಗಿ ಮೇಲ್ಕೇರುತ್ತಿದೆ. ಆದರೆ ಮತ್ತೆ ಥಿಯೇಟರ್, ಮಾಲ್ ರೆಸ್ಟೋರೆಂಟ್, ಶಾಲಾ – ಕಾಲೇಜು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವೆಂದು ಸರ್ಕಾರ ಮಾರ್ಗಸೂಚಿಯನ್ನು ಹೊರಡಿಸಿದೆ.
ಹಿರಿಯ ಅಧಿಕಾರಿಗಳ ಸಭೆಯ ಬಳಿಕ ಮಾತಾನಾಡಿರುವ ಸಚಿವ ಆರ್. ಅಶೋಕ್, ಶಾಲಾ ಕಾಲೇಜು, ಸಿನಿಮಾ ಮಂದಿರ, ಬಸ್ , ರೈಲು, ವಿಮಾನ ಸೇರಿ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ನೂತನ ವರ್ಷಾಚರಣೆ 31 ರ ರಾತ್ರಿ 1 ಗಂಟೆವರೆಗೆ ಮಾತ್ರ ಅವಕಾಶವಿರುತ್ತದೆ. ಎಲ್ಲರೂ ನಿಯಮವನ್ನು ಪಾಲಿಸಬೇಕೆಂದಿದ್ದಾರೆ.
ಮುಂದಿನ ದಿನಗಳಲ್ಲಿ ಥಿಯೇಟರ್ ಗೆ ಇನ್ನಷ್ಟು ಕಠಿಣ ನಿಯಮಗಳು ಬಂದರೆ, ಚಿತ್ರ ರಂಗದ ಓಟಕ್ಕೆ ಬ್ರೇಕ್ ಬೀಳಬಹುದು. ಥಿಯೇಟರ್ ಗೆ ಇನ್ನಷ್ಟು ನಷ್ಟವಾಗಬಹುದು.

