ಬರ್ಮಿಂಗ್ ಹ್ಯಾಮ್ : ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಮೀರಬಾಯಿ ಚಾನು ಅವರು ತಂದು ಕೊಟ್ಟಿದ್ದಾರೆ.
ಮಹಿಳೆಯರ 49 ಕೆಜಿ ಕ್ಲೀನ್ & ಜರ್ಕ್ ವಿಭಾಗದಲ್ಲಿ ಅವರು ಸಾಧನೆ ಮಾಡಿದ್ದಾರೆ.
ಮಹಿಳೆಯರ ವೇಟ್ ಲಿಫ್ಟಿಂಗ್ ನಲ್ಲಿ ಮೀರಬಾಯಿ ಕ್ಲೀನ್ & ಜರ್ಕ್ ನಲ್ಲಿ ಮೊದಲ ಪ್ರಯತ್ನದಲ್ಲಿ 109 ಭಾರವನ್ನು ಎತ್ತಿ ಚಿನ್ನವನ್ನು ಖಚಿತ ಪಡಿಸಿದರು. ಬಳಿಕ ದ್ವಿತೀಯ ಪ್ರಯತ್ನದಲ್ಲಿ 113 ಭಾರವನ್ನು ಎತ್ತಿದರು. ಮೂರನೇ ಪ್ರಯತ್ನದಲ್ಲಿ 115 ಭಾರವನ್ನು ಎತ್ತುವಲ್ಲಿ ವಿಫಲವಾದರು.


ಮೀರಬಾಯಿ ಸ್ನ್ಯಾಚ್ ನಲ್ಲಿ 88 ಕೆಜಿ ಭಾರ, ಕ್ಲೀನ್ ಜರ್ಕ್ ನಲ್ಲಿ 113 ಭಾರ, ಒಟ್ಟು 201 ಕೆಜಿ ಭಾರವನ್ನು ಎತ್ತಿ ಪದಕ ಖಾತ್ರಿ ಪಡಿಸಿದರು.




ಇಂದು ಭಾರತಕ್ಕೆ ಒಟ್ಟು ಮೂರು ಪದಕ ಬಂತು. ಮೂರು ಕೂಡ ವೇಟ್ ಲಿಫ್ಟಿಂಗ್ ನಲ್ಲೇ ಎನ್ನುವುದು ವಿಶೇಷ.
ಸಂಕೇತ್ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ತಂದು ಕೊಟ್ಟರು. ಬಳಿಕ ಕನ್ನಡಿಗ ಗುರುರಾಜ ಪೂಜಾರಿ ವೇಟ್ ಲಿಫ್ಟಿಂಗ್ ನಲ್ಲಿ ಕಂಚು ಪದಕ ದೇಶಕ್ಕೆ ತಂದು ಕೊಟ್ಟರು.

