HomeNews'ಕಾಕ್ಟೈಲ್' ನಟನಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ: ಹೆಚ್ಚಾಯಿತು ಚಿತ್ರದ ನಿರೀಕ್ಷೆ

‘ಕಾಕ್ಟೈಲ್’ ನಟನಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ: ಹೆಚ್ಚಾಯಿತು ಚಿತ್ರದ ನಿರೀಕ್ಷೆ

ಇನ್ನಷ್ಟೇ ತೆರೆ ಕಾಣಬೇಕಿರುವ “ಕಾಕ್ಟೈಲ್’ ಸಿನಿಮಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿಯನ್ನು ಗೆದ್ದು ಸದ್ದು ಮಾಡಿದೆ.

“ಕಾಕ್ಟೈಲ್” ಚಿತ್ರದಲ್ಲಿನ ಅಭಿನಯಕ್ಕಾಗಿ ವಿರೇನದ ಕೇಶವ್ ಅವರಿಗೆ ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ಧಾರವಾಡ ಇವರು ಆಯೋಜಿಸಿರುವ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವ 2022ರಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ.

ಡಾ. ಶಿವಪ್ಪ ನಿರ್ಮಾಣದಲ್ಲಿ “ಕಾಕ್ಟೈಲ್” ತಯಾರಾಗಿದೆ.
ಈ ಚಲನಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸಿರುವ ವಿರೇನ್ ಕೇಶವ್ ಅವರಿಗೆ ಮೊಟ್ಟ ಮೊದಲ ಬಾರಿಗೆ ” ಅತ್ಯುತ್ತಮ ನಾಯಕ ನಟ ” ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ವಿರೇನ್ ಕೇಶವ್ ಅವರಿಗೆ ಬಾಲ್ಯದಿಂದಲೂ ಕಲೆ, ಸಾಹಿತ್ಯ, ನಾಟಕ ಅಭಿನಯದಲ್ಲಿ ಆಸಕ್ತಿ ಇದ್ದುದರಿಂದ ತಮ್ಮ ಎಂ.ಬಿ.ಎ ಶಿಕ್ಷಣವನ್ನು ಮುಗಿಸಿ ಮುಂಬೈನಲ್ಲಿರುವ ಅನುಪಮ್ ಖೇರ್ ಅವರ ನಟನಾ ಸಂಸ್ಥೆಯಲ್ಲಿ ನಟನೆಯಲ್ಲಿ ತರಬೇತಿಯನ್ನು ಪಡೆದು, ಒಬ್ಬ ಪರಿಪೂರ್ಣ ನಟನಾಗಲು ಬೇಕಾಗಿರುವ ತಯಾರಿಯನ್ನು ಮಾಡಿಕೊಂಡೇ ಚಿತ್ರ ರಂಗಕ್ಕೆ ಎಂಟ್ರಿ‌ ಕೊಟ್ಟಿದ್ದಾರೆ.

ಖ್ಯಾತ ಚಲನಚಿತ್ರ ನಟಿ ಪ್ರಿಯಾಂಕ ಉಪೇಂದ್ರ ಈ ಪ್ರಶಸ್ತಿಯನ್ನು ನೀಡಿ ಶುಭ ಹಾರೈಸಿದ್ದಾರೆ.

ಭಾರೀ ಕುತೂಹಲ ಕೆರಳಿಸಿರುವ ” ಕಾಕ್ಟೈಲ್ ” ಚಲನಚಿತ್ರವು ದಿ. 06. 01. 2023 ರಂದು ಕರ್ನಾಟಕ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಪ್ರಸ್ತುತ ಚಲನಚಿತ್ರವನ್ನು ವಿಜಯಲಕ್ಷ್ಮಿ ಕಂಬೈನ್ಸ್‍ನಲ್ಲಿ ಡಾ. ಶಿವಪ್ಪ ನಿರ್ಮಾಣ ಮಾಡಿದ್ದು, ಶ್ರೀರಾಮ್ ನಿರ್ದೇಶನ ಮಾಡಿದ್ದಾರೆ.

ನಾಯಕನಟನಾಗಿ ಪ್ರತಿಭಾವಂತ ಹುಡುಗ ವಿರೇನ್ ಕೇಶವ್, ನಾಯಕಿಯಾಗಿ ಚರಿಷ್ಮಾ ನಟಿಸಿದ್ದಾರೆ. ಮುಖ್ಯ ತಾರಾಗಣದಲ್ಲಿ ಶೋಭರಾಜ್, ರಮೇಶ್ ಪಂಡಿತ್, ಮಹಾಂತೇಶ್ , ಶಿವಮಣಿ, ಕರಿಸುಬ್ಬು, ಚಂದ್ರಕಲಾ ಮೋಹನ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಲನಚಿತ್ರವನ್ನು ಕೆ.ಆರ್.ಜಿ ಸ್ಟುಡಿಯೋಸ್ ಇವರು ಬಿಡುಗಡೆ ಮಾಡುತ್ತಿದ್ದು, ಎ2 ಮ್ಯೂಸಿಕ್‍ನಲ್ಲಿ ಹಾಡುಗಳು ಪ್ರಸಾರವಾಗುತ್ತಿದೆ.

ಮುಂಬೈನ ಖ್ಯಾತ ಗಾಯಕ ಅರ್ಮಾನ್ ಮಲಿಕ್ ಅವರು ಹಾಡಿರುವ ಹಾಡು ಈಗಾಗಲೇ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

RELATED ARTICLES

Most Popular

Share via
Copy link
Powered by Social Snap