ಇದೇ 31 ರಂದು ಚಿಯಾನ್ ವಿಕ್ರಮ್ ಅವರ ಪ್ಯಾನ್ ಇಂಡಿಯಾ ‘ಕೋಬ್ರಾ’ ರಿಲೀಸ್ ಆಗಲಿದೆ.
ದಕ್ಷಿಣ ಭಾರತದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಸಸ್ಪೆನ್ಸ್ – ಸೈನ್ಸ್ ಫಿಕ್ಷನ್ ‘ಕೋಬ್ರಾ’ ಸಿನಿಮಾ ಕೂಡ ಒಂದು.
ಚಿತ್ರದಲ್ಲಿ ಖಳನಾಯಕನಾಗಿ ಇರ್ಫಾನ್ ಪಠಾಣ್ ಕಾಣಿಸಿಕೊಳ್ಳಲಿದ್ದಾರೆ. ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇತ್ತೀಚೆಗೆ ಚಿಯಾನ್ ವಿಕ್ರಮ್ ಮತ್ತು ತಂಡ ಬೆಂಗಳೂರಿಗೆ ಸಿನಿಮಾದ ಪ್ರಚಾರಕ್ಕಾಗಿ ಬಂದಿದ್ದರು. ಈ ವೇಳೆ ನಟ ವಿಕ್ರಮ್ ಅಪ್ಪು ಅವರ ಬಗ್ಗೆ ಮಾತಾನಾಡುತ್ತಾ, ಅಪ್ಪು ಕಳೆದುಕೊಂಡಿರೋದು ಸಿನಿಮಾ ಇಂಡಸ್ಟ್ರೀಗೆ ನಷ್ಟವಾಗಿದೆ. ಅವರು ಎಲ್ಲರಿಗೂ ಸ್ಫೂರ್ತಿ ನೀಡುವಂಥ ನಟ. ವೈಯಕ್ತಿಕವಾಗಿ ನನಗೂ ತುಂಬ ಇಷ್ಟವಾಗಿದ್ದ ವ್ಯಕ್ತಿಯಾಗಿದ್ದರು’ ಎಂದರು.
ಅವರು ಆಡಿದ ಇನ್ನೊಂದು ಮಾತು ಈಗ ವೈರಲ್ ಆಗಿದೆ. ಕನ್ನಡದಲ್ಲಿ ಯಶ್ ನನಗೆ ಒಳ್ಳೆಯ ಫ್ರೆಂಡ್. ಕನ್ನಡದಲ್ಲಿ ಲೂಸಿಯಾ ಪವನ್ ಹೇಳಿದ ಕಥೆ ಇಷ್ಟವಾಗಿದ್ದು ಅವರ ಜೊತೆ ಸಿನಿಮಾ ಮಾಡುತ್ತೇನೆ’ ಎಂದು ಹೇಳಿದ್ದಾರೆ.
ಈಗ ಈ ಮಾತು ಚರ್ಚೆ ಆಗುತ್ತಿದೆ. ಏಕೆಂದರೆ ಲೂಸಿಯಾ ಪವನ್ ಕುಮಾರ್ ಅಪ್ಪು ಅವರಿಗೆ “ದ್ವಿತ್ವ” ಸಿನಿಮಾ ನಿರ್ದೇಶನ ಮಾಡಲಿದ್ದರು. ಅಪ್ಪು ನಿಧನದ ಬಳಿಕ ಆ ಚಿತ್ರದಲ್ಲಿ ಫಹದ್ ಪಾಸಿಲ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು.
ಆದರೆ ಈಗ ವಿಕ್ರಮ್ ಹೇಳಿರುವ ಮಾತು “ದ್ವಿತ್ವ”ದಲ್ಲಿ ಅವರೇ ಕಾಣಿಸಿಕೊಳ್ಳಬಹುದೇನೋ ಎನ್ನುವ ಟಾಕ್ ಜೋರಾಗಿದೆ.

