HomeNewsಸಸ್ಪೆನ್ಸ್ ಹುಟ್ಟಿಸುವ ಶರಣ್ ಅಭಿನಯದ 'ಛೂ‌ ಮಂತರ್' ಮೋಷನ್ ಪಿಕ್ಚರ್

ಸಸ್ಪೆನ್ಸ್ ಹುಟ್ಟಿಸುವ ಶರಣ್ ಅಭಿನಯದ ‘ಛೂ‌ ಮಂತರ್’ ಮೋಷನ್ ಪಿಕ್ಚರ್

ನಟ ಶರಣ್ ಅಭಿನಯದ ಹಾರಾರ್ ಕಾಮಿಡಿ “ಛೂ ಮಂತರ್” ಚಿತ್ರದ ಮೋಷನ್ ‌ಪಿಕ್ಚರ್ ರಿಲೀಸ್ ಆಗಿದೆ.

ಒಂದು ದೊಡ್ಡ ಬಂಗಲೆಯಲ್ಲಿ ನಾಲ್ಕೈದು ಪಾತ್ರಗಳನ್ನು ಸಸ್ಪೆನ್ಸ್ ರೀತಿಯ‌ ಬಿಜಿಎಂಯನ್ನು ಹಾಕಿ ಕುತೂಹಲ ಹುಟ್ಟಿಸುತ್ತದೆ.

ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ಈ ಚಿತ್ರವನ್ನು ನಿರ್ಮಿಸಿದ್ದಾರೆ.

“ಕರ್ವ” ಚಿತ್ರದ‌ ಮೂಲಕ ಕನ್ನಡಿಗರ ಮನಗೆದ್ದಿರುವ ನವನೀತ್, ಕಥೆ, ಚಿತ್ರಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಹಾರಾರ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು, ಬಿಡುಗಡೆಗೆ ಸಿದ್ದವಾಗುತ್ತಿದೆ. ಬೆಂಗಳೂರು, ಮೈಸೂರು, ಉತ್ತರಕಾಂಡ ಹಾಗೂ ಲಂಡನ್ ನಲ್ಲಿ ಚಿತ್ರೀಕರಣ ನಡೆದಿದೆ.

ಮೇಘನಾ ಗಾಂವ್ಕರ್, ಚಿಕ್ಕಣ್ಣ, ಅದಿತಿ ಪ್ರಭುದೇವ ಹಾಗೂ ಪ್ರಭು ಮುಂಡ್ಕರ್ ಚಿತ್ರದ ಪ್ರಮುಖಪಾತ್ರದಲ್ಲಿದ್ದಾರೆ.

ಅನೂಪ್ ಕಟ್ಟುಕರನ್ ಮೊದಲ ಬಾರಿಗೆ ಈ ಚಿತ್ರದ ಮೂಲಕ ಛಾಯಾಗ್ರಾಹಕರಾಗಿದ್ದಾರೆ. ವೆಂಕಿ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಶಿವಕುಮಾರ್(ಕೆ.ಜಿ.ಎಫ್ ಖ್ಯಾತಿ) ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ “ಛೂ ಮಂತರ್” ಚಿತ್ರಕ್ಕಿದೆ.

RELATED ARTICLES

Most Popular

Share via
Copy link
Powered by Social Snap