

ಡಾ.ಪುನೀತ್ ರಾಜ್ ಕುಮಾರ್ ಅವರ ‘ಜೇಮ್ಸ್‘ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ ಬಳಿಕ ಚೇತನ್ ಕುಮಾರ್ ಅವರ ಮುಂದಿನ ಚಿತ್ರ ಯಾರೊಂದಿಗೆ ಎನ್ನುವುದು ಪ್ರಶ್ನೆಯಾಗಿ ಉಳಿದಿತ್ತು.


ಪವರ್ ಸ್ಟಾರ್ ಅವರ ಅಕಾಲಿಕ ನಿಧನದ ಬಳಿಕ ಹಲವಾರು ಸವಾಲನ್ನು ಎದುರಿಸಿ ಬಿಡುಗಡೆ ಆಗಿದ್ದ ಜೇಮ್ಸ್ 100 ಕೋಟಿಗೂ ಅಧಿಕ ಕಲೆಕ್ಷನ್ ಗಳಿಸಿ ಸದ್ದು ಮಾಡಿತ್ತು.
‘ಭರ್ಜರಿ’, ‘ಭರಾಟೆ’ ‘ಬಹದ್ದೂರ್’ ‘ಜೇಮ್ಸ್’ ಬಳಿಕ ಅದೇ ಹಿಟ್ ಸಾಲನ್ನು ಮುಂದುವರೆಸಲು ಚೇತನ್ ಕುಮಾರ್ ಮತ್ತೆ ನಿರ್ದೇಶನದ ಫೀಲ್ಡ್ ಗೆ ಇಳಿದಿದ್ದಾರೆ.


ತೆಲುಗು ಹಾಗೂ ಕನ್ನಡದಲ್ಲಿ ಬಂದ ‘ರೋಗ್’ ಸಿನಿಮಾದಿಂದ ಎಂಟ್ರಿಯಾಗಿ, ಪವನ್ ಒಡೆಯರ್ ಅವರ ‘ರೇಮೊ’ದಲ್ಲಿ ಕಾಣಿಸಿಕೊಂಡರುವ ಇಶಾನ್, ಚೇತನ್ ಅವರ ಹೊಸ ಚಿತ್ರದಲ್ಲಿ ನಾಯಕನಾಗಿ ಪಾತ್ರ ನಿಭಾಯಿಸಲಿದ್ದಾರೆ.
ಚೇತನ್ ಕುಮಾರ್ ಸದ್ಯ ಚಿತ್ರದ ನಾಯಕನ ಬಗ್ಗೆ ಮಾತ್ರ ಮಾಹಿತಿ ನೀಡಿದ್ದು, ಉಳಿದ ವಿವರಗಳನ್ನು ಗೌಪ್ಯವಾಗಿ ಇಟ್ಟಿದ್ದು, ಕುತೂಹಲ ಹುಟ್ಟಿಸಿದೆ.

