ಶ್ವಾನ ಹಾಗೂ ಮನುಷ್ಯನ ನಡುವಿನ ಬಾಂಧವ್ಯವನ್ನು ಕಣ್ಣಂಚಿನಲ್ಲಿ ನೀರು ಬರುವಂತೆ ಚಿತ್ರದಲ್ಲಿ ತೋರಿಸಿದ ರಕ್ಷಿತ್ ಶೆಟ್ಟಿ ಅವರ ‘777 ಚಾರ್ಲಿ’ ವರ್ಷದ ಹಿಟ್ ಸಿನಿಮಾಗಳಲ್ಲೊಂದು.
ಚಾರ್ಲಿಯ ನಟನೆ ಮೂಖ ಪ್ರಾಣಿಯ ಭಾವನೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಕನ್ನಡ, ಟಾಲಿವುಡ್ ಸೇರಿದಂತೆ ಇತರ ಭಾಷೆಯಲ್ಲೂ ಚಿತ್ರ ಕಮಾಲ್ ಮಾಡಿತು.
100 ಕೋಟಿಯನ್ನು ಸಿನಿಮಾ ಗಳಿಸಿದೆ.
50 ದಿನಗಳನ್ನು ಪೊರೈಸಿ ಚಿತ್ರ ಈಗ ಓಟಿಟಿಯಲ್ಲಿ ರಿಲೀಸ್ ಆಗಿದೆ. ಓಟಿಟಿಯಲ್ಲೂ ಭರ್ಜರಿ ಸದ್ದು ಮಾಡುತ್ತಿದೆ.
ಕಿರಣ್ ರಾಜ್ ನಿರ್ದೇಶನದ ‘777 ಚಾರ್ಲಿ’ ಇತರ ರಾಜ್ಯದಲ್ಲಿ ತೆರೆ ಕಂಡು ಉತ್ತಮಗಳಿಕೆಯನ್ನು ಕಂಡಿತು. ಈಗ ಸಿನಿಮಾ ಬೇರೆ ದೇಶದಲ್ಲಿ ತೆರೆಗೆ ಬರಲು ಸಿದ್ದವಾಗಿದೆ.
ರಾಜಮೌಳಿ ಅವರ ‘RRR’ ಇತ್ತೀಚೆಗೆ ಜಪಾನ್ ನಲ್ಲಿ ರಿಲೀಸ್ ಆಗಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈಗ ಮತ್ತೊಂದು ಸೌತ್ ಸಿನಿಮಾ ವಿದೇಶದಲ್ಲಿ ತೆರೆಗೆ ಬರಲು ಸಿದ್ದವಾಗಿದೆ.
ಕನ್ನಡದ ‘ಕೆಜಿಎಫ್ -2’ ‘ವಿಕ್ರಾಂತ್ ರೋಣ’, ‘ಕಾಂತಾರ’ ದ ಬಳಿಕ ವಿದೇಶದಲ್ಲಿ ಹವಾ ಎಬ್ಬಿಸಲು ‘777 ಚಾರ್ಲಿ’ ಮತ್ತೆ ರಿಲೀಸ್ ಆಗಲಿದೆ. ಥೈಲ್ಯಾಂಡ್ ನಲ್ಲಿ ಥಾಯ್ ಭಾಷೆಗೆ ಡಬ್ ಆಗಿ ಡಿಸೆಂಬರ್ 1 ಧರ್ಮ – ಚಾರ್ಲಿ ಯಾನ ಶುರುವಾಗಲಿದೆ.
ಈ ಸಂಭ್ರಮವನ್ನು ಚಾರ್ಲಿ ತಂಡ ಥೈಲ್ಯಾಂಡ್ ನಲ್ಲಿ ಆಚರಿಸಿಕೊಂಡು ಸುಂದರ ಕ್ಷಣಗಳನ್ನು ಹಂಚಕೊಂಡಿದೆ.
ರಕ್ಷಿತ್ ಶೆಟ್ಟಿ, ಕಿರಣ್ ರಾಜ್ ಹಾಗೂ ಇತರರು ಥೈಲ್ಯಾಂಡ್ ಪ್ರವಾಸದಲ್ಲಿ ಚಾರ್ಲಿ ಗೆಲುವನ್ನು ಸಂಭ್ರಮಿಸಿದೆ. ನಿರ್ದೇಶಕ ಪ್ರವಾಸದ ಫೋಟೋಗಳನ್ನು ಹಂಚಿಕೊಂಡು, ‘ಶಾಂತಿ ಮತ್ತು ನಗು ಯಶಸ್ಸಿನ ನಂತರ’ ಎಂದು ಬರೆದುಕೊಂಡಿದ್ದಾರೆ.
ರಕ್ಷಿತ್ ಶೆಟ್ಟಿ ಕೂಲ್ ಮೂಡಿನಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

