ಕನ್ನಡ ಚಿತ್ರರಂಗದಲ್ಲಿ ನಿರತರಾಗಿ, ತಮ್ಮ ಸಿನಿಮಾಗಳ ಮೂಲಕ, ತಮ್ಮ ವಿಡಿಯೋ ಗಳ ಮೂಲಕ ಮನರಂಜಿಸೋ ಕಲಾವಿದರುಗಳಿಗೆ ನೀಡುವಂತಹ ಕೆಲವೇ ಕೆಲವು ಪ್ರಮುಖ ಪ್ರಶಸ್ತಿಗಳಲ್ಲಿ ಒಂದು ‘ಚಂದನವನ ಫಿಲಂ ಕ್ರಿಟಿಕ್ ಅವಾರ್ಡ್ಸ್’. ಸದ್ಯ ಈ ಪ್ರಶಸ್ತಿಯ 2023ನೇ ಆವೃತ್ತಿ ನಡೆದಿದ್ದು, 2022ನೇ ಸಾಲಿನಲ್ಲಿ ಬಿಡುಗಡೆಯಾದ ಹಲವು ಕನ್ನಡದ ಸಿನಿಮಾಗಳ ಪ್ರತಿಭಾನ್ವಿತ ಕಲಾವಿದರಿಗೆ ಪ್ರಶಸ್ತಿ ನೀಡಿ ಪುರಸ್ಕಾರಿಸಲಾಯಿತು. ಈ ಪೈಕಿ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾ ಹಾಗು ಪ್ರಶಾಂತ್ ನೀಲ್ ಹಾಗು ಯಶ್ ಜೋಡಿಯ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ಅತ್ಯಂತ ಹೆಚ್ಚು ಪ್ರಶಸ್ತಿಗಳನ್ನ ತನ್ನದಾಗಿಸಿಕೊಂಡಿವೆ.


ವಿಶೇಷವೆಂದರೆ ಸಾಮಾನ್ಯವಾಗಿ ಪ್ರತೀ ಬಾರೀ ನೀಡುವ ಪ್ರಶಸ್ತಿಗಳ ಜೊತೆಗೇ ಐದು ವಿಶೇಷ ಪುರಸ್ಕಾರಗಳನ್ನ ಈ ಬಾರಿ ನೀಡಲಾಯಿತು. ಅದರ ಜೊತೆಗೇ ಈ ಎಲ್ಲಾ ಪ್ರಶಸ್ತಿಗಳು ತಮ್ಮ ಮೊದಲ ಸಿನಿಮಾದಲ್ಲಿ ಕೆಲಸ ಮಾಡಿದವರಿಗಾಗಿಯೇ ನೀಡಲಾಗಿತ್ತು. ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಅತ್ಯುತ್ತಮ ನಿರ್ಮಾಪಕ(ಡೆಬ್ಯು), ಸಂಚಾರಿ ವಿಜಯ್ ಅವರ ಹೆಸರಿನಲ್ಲಿ ಅತ್ಯುತ್ತಮ ನಟ(ಡೆಬ್ಯು), ತ್ರಿಪುರಾಂಬ ಹೆಸರಿನಲ್ಲಿ ಅತ್ಯುತ್ತಮ ನಟಿ(ಡೆಬ್ಯು), ಚಿ ಉದಯ್ ಶಂಕರ್ ಅವರ ಹೆಸರಿನಲ್ಲಿ ಅತ್ಯುತ್ತಮ ಬರಹಗಾರ(ಡೆಬ್ಯು) ಹಾಗು ಶಂಕರ್ ನಾಗ್ ಅವರ ಹೆಸರಿನಲ್ಲಿ ಅತ್ಯುತ್ತಮ ನಿರ್ದೇಶಕ(ಡೆಬ್ಯು) ಇವುಗಳೇ ಆ ಐದು ವಿಶೇಷ ಪ್ರಶಸ್ತಿಗಳು.


2023ನೇ ಸಾಲಿನ ‘ಚಂದನವನ ಫಿಲಂ ಕ್ರಿಟಿಕ್ ಅವಾರ್ಡ್ಸ್’ನ ಪ್ರಶಸ್ತಿ ವಿಜೇತರ ಪಟ್ಟಿ ಈ ಕೆಳಗಿನಂತಿದೆ.
‘ಕಾಂತಾರ’ ಸಿನಿಮಾಗೆ ನಾಲ್ಕು ಪ್ರಶಸ್ತಿಗಳು ಬಂದವು,
1. ‘ಕಾಂತಾರ’ ಚಿತ್ರಕ್ಕೆ ‘ಅತ್ಯುತ್ತಮ ಸಿನಿಮಾ’ ಎಂಬ ಪ್ರಶಸ್ತಿ
2. ರಿಷಭ್ ಶೆಟ್ಟಿಯವರಿಗೆ ‘ಅತ್ಯುತ್ತಮ ನಾಯಕನಟ’ ಪ್ರಶಸ್ತಿ
3. ಅಜನೀಶ್ ಲೋಕನಾಥ್ ಅವರಿಗೆ ‘ಅತ್ಯುತ್ತಮ ಸಂಗೀತ’ ಪ್ರಶಸ್ತಿ
4. ವಿಕ್ರಮ್ ಮೋರ್ ಅವರಿಗೆ ‘ಅತ್ಯುತ್ತಮ ಸಾಹಸ ನಿರ್ದೇಶನ’ ಪ್ರಶಸ್ತಿ
ಇವು ಚಂದನವನ ಫಿಲಂ ಕ್ರಿಟಿಕ್ ಅವಾರ್ಡ್ ನಲ್ಲಿ ‘ಕಾಂತಾರ’ ಬಾಚಿಕೊಂಡ ಪ್ರಶಸ್ತಿಗಳು.
ಇನ್ನು ಕೆಜಿಎಫ್ ಚಾಪ್ಟರ್ 2 ಸಿನಿಮಾ ಮೂರು ಪ್ರಶಸ್ತಿ ಗಳಿಸಿ ಪುರಸ್ಕೃತವಾಯಿತು.
1. ಭುವನ್ ಗೌಡ ಅವರಿಗೆ ‘ಅತ್ಯುತ್ತಮ ಛಾಯಾಗ್ರಹಣ’ ಪ್ರಶಸ್ತಿ
2. ಪ್ರಜ್ವಲ್ ಕುಲಕರ್ಣಿ ಅವರಿಗೆ ‘ಅತ್ಯುತ್ತಮ ಸಂಕಲನ’ ಪ್ರಶಸ್ತಿ
3. ಉದಯ್ ರವಿ ಹೆಗಡೆ ಅವರಿಗೆ ‘ಅತ್ಯುತ್ತಮ ವಿ ಎಫ್ ಎಕ್ಸ್’ ಪ್ರಶಸ್ತಿ ಲಭಿಸಿತು.
ಇನ್ನು ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ ಎರಡು ಪ್ರಶಸ್ತಿಗಳನ್ನ ತನ್ನದಾಗಿಸಿಕೊಂಡಿತು.
1. ಕಿರಣ್ ರಾಜ್ ಅವರಿಗೆ ‘ಅತ್ಯುತ್ತಮ ನಿರ್ದೇಶಕ’ ಪುರಸ್ಕಾರ
2. ಶಾರ್ವರಿ ಅವರಿಗೆ ‘ಅತ್ಯುತ್ತಮ ಬಾಲನಟಿ’ ಪುರಸ್ಕಾರ.
ಇನ್ನು ಇವುಗಳು ಒಂದ್ಕಕಿಂತ ಹೆಚ್ಚು ಪ್ರಶಸ್ತಿ ಪಡೆದ ಚಿತ್ರಗಳ ಬಗ್ಗೆಯಾದರೆ, ಇವುಗಳ ಜೊತೆಗೇ ಇನ್ನಷ್ಟು ಪುರಸ್ಕಾರಕ್ಕೆ ಒಳಗಾದ ಪ್ರತಿಭಾನ್ವಿತ ನಟ ನಟಿಯರ, ಕಲಾವಿದರ ಪಟ್ಟಿ ಇಲ್ಲಿದೆ.
1. ಅತ್ಯುತ್ತಮ ನಟಿ – ‘ಗಾಳಿಪಟ 2’ ಸಿನಿಮಾಗಾಗಿ ಶರ್ಮಿಳಾ ಮಾಂಡ್ರೆ
2. ಅತ್ಯುತ್ತಮ ಸಂಭಾಷಣೆ – ‘ಗುರುಶಿಷ್ಯರು’ ಚಿತ್ರಕ್ಕಾಗಿ ಮಾಸ್ತಿ.
3. ಅತ್ಯುತ್ತಮ ಪೋಷಕ ನಟ – ‘ವೀಲ್ ಚೇರ್ ರೋಮಿಯೋ’ ಸಿನಿಮಾಗಾಗಿ ಸುಚೆಂದ್ರ ಪ್ರಸಾದ್.
4. ಅತ್ಯುತ್ತಮ ಪೋಷಕ ನಟಿ – ‘ತುರ್ತು ನಿರ್ಗಮನ’ ಚಿತ್ರಕ್ಕಾಗಿ ಸುಧಾರಾಣಿ.
5. ಅತ್ಯುತ್ತಮ ಚಿತ್ರಕತೆ – ‘ಲವ್ ಮಾಕ್ಟೇಲ್ 2’ ಚಿತ್ರಕ್ಕಾಗಿ ಡಾರ್ಲಿಂಗ್ ಕೃಷ್ಣ.
6. ಅತ್ಯುತ್ತಮ ಹಿನ್ನೆಲೆ ಸಂಗೀತ – ‘ಮಾನ್ಸೂನ್ ರಾಗ’ ಚಿತ್ರಕ್ಕಾಗಿ ಅನೂಪ್ ಸೀಳಿನ್.
7. ಅತ್ಯುತ್ತಮ ಗಾಯಕಿ – ‘ಏಕ್ ಲವ್ ಯಾ’ ಸಿನಿಮಾಗಾಗಿ ಐಶ್ವರ್ಯ ರಂಗರಾಜನ್.
8. ಅತ್ಯುತ್ತಮ ಗಾಯಕ – ‘ವೇದಾ’ ಸಿನಿಮಾದ ‘ಜುಂಜಪ್ಪ’ ಗೀತೆಗಾಗಿ ಮೋಹನ್ ಕುಮಾರ್ ಎನ್.
9. ಅತ್ಯುತ್ತಮ ಚಿತ್ರ ಸಾಹಿತ್ಯ – ‘ಲವ್ 360’ ಚಿತ್ರಕ್ಕಾಗಿ ಶಶಾಂಕ್
10. ಅತ್ಯುತ್ತಮ ಕಲಾ ನಿರ್ದೇಶನ – ‘ವಿಕ್ರಾಂತ್ ರೋಣ’ ಸಿನಿಮಾಗಾಗಿ ಶಿವಕುಮಾರ್.
11. ಅತ್ಯುತ್ತಮ ನೃತ್ಯ ನಿರ್ದೇಶನ -‘ಏಕ್ ಲವ್ ಯಾ’ ಸಿನಿಮಾದ ‘ಮೀಟ್ ಮಾಡೋಣ’ ಹಾಡಿಗಾಗಿ ಮೋಹನ್.
ಇನ್ನು ಈ ಬಾರಿಯ ವಿಶೇಷ ಪ್ರಶಸ್ತಿಗಳನ್ನ ಐದು ಯುವ ಪ್ರತಿಭಾನ್ವಿತ ಕಲಾವಿದರು ಪಡೆದಿದ್ದಾರೆ.
1. ಪುನೀತ್ ರಾಜಕುಮಾರ್ ‘ಅತ್ಯುತ್ತಮ ನಿರ್ಮಾಪಕ'(ಡೆಬ್ಯು)- ‘ಡೊಳ್ಳು’ ಸಿನಿಮಾಗಾಗಿ ಪವನ್ ಒಡೆಯರ್.
2. ಚಿ ಉದಯ್ ಶಂಕರ್ ‘ಅತ್ಯುತ್ತಮ ಬರಹಗಾರ'(ಡೆಬ್ಯು)- ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾಗಾಗಿ ಶ್ರೀಧರ್ ಶಿಕಾರಿಪುರ.
3. ಸಂಚಾರಿ ವಿಜಯ್ ‘ಅತ್ಯುತ್ತಮ ನಟ(ಡೆಬ್ಯು) – ‘ಪದವಿ ಪೂರ್ವ’ ಸಿನಿಮಾಗಾಗಿ ಪೃಥ್ವಿ ಶಾಮನೂರು.
4. ತ್ರಿಪುರಾಂಬ ‘ಅತ್ಯುತ್ತಮ ನಟಿ(ಡೆಬ್ಯು)’ – ‘ಮಾನ್ಸೂನ್ ರಾಗ’ ಸಿನಿಮಾಗಾಗಿ ಯಶ ಶಿವಕುಮಾರ್.
5. ಶಂಕರನಾಗ್ ‘ಅತ್ಯುತ್ತಮ ನಿರ್ದೇಶಕ(ಡೆಬ್ಯು)’ – ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾಗಾಗಿ ಶ್ರೀಧರ್ ಶಿಕಾರಿಪುರ.
ಇನ್ನು ಚಿತ್ರರಂಗದ ಜೊತೆಜೊತೆಗೆ ಇತರೆ ಮಾಧ್ಯಮಗಳ ಕಲಾವಿದರನ್ನು ಪ್ರಶಸ್ತಿ ನೀಡಿ ಈ ಸಂಧರ್ಭದಲ್ಲಿ ಗೌರವಿಸಲಾಯಿತು.
1. ಅತ್ಯುತ್ತಮ ಯೂಟ್ಯೂಬ್ ಚಾನೆಲ್ – ಪರಮೇಶ್ವರ್ ಕೆ ಎಸ್ ಅವರ ‘ಕಲಾ ಮಾಧ್ಯಮ’.
2. ಅತ್ಯುತ್ತಮ ಮನರಂಜನಾ ಸಾಮಾಜಿಕ ಜಾಲತಾಣ – ‘ವಿಕ್ಕಿ ಪೀಡಿಯಾ’.
ಇಷ್ಟೆಲ್ಲಾ ಪ್ರಶಸ್ತಿಗಳಿಗೆ ಕಾರಣವಾದ 4ನೇ ಸಾಲಿನ ‘ಚಂದನವನ ಫಿಲಂ ಕ್ರಿಟಿಕ್ ಅವಾರ್ಡ್ಸ್’ ಸಮಾರಂಭ ಬೆಂಗಳೂರಿನ ಪ್ರತಿಷ್ಟಿತ ಹೋಟೆಲ್ ಒಂದರಲ್ಲಿ ಜರುಗಿತು. ಈ ಸಮಾರಂಭದಲ್ಲಿ ಮೋಹಕ ತಾರೆ ರಮ್ಯ, ನಟಿ ಕಾರುಣ್ಯ ರಾಮ್, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್, ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಬಿ ಸುರೇಶ, ರಾಜೇಂದ್ರ ಸಿಂಗ್ ಬಾಬು, ಸ್ಮೈಲ್ ಶ್ರೀನು, ಬಿ ಎಸ್ ಲಿಂಗದೇವರು, ಚಲನಚಿತ್ರ ಮಂಡಳಿಯ ಅಧ್ಯಕ್ಷ ಭಾ ಮಾ ಹರೀಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.



