ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಕನ್ನಡದಲ್ಲಿ ತುಂಬ ಬ್ಯುಸಿ ಆಗಿ ಅನೇಕ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಗೆ ಸದ್ಯ ಕಾಲಿವುಡನಲ್ಲೂ ಇಬ್ಬರು ಸ್ಟಾರ್ ನಟರ ಸಿನಿಮಾದಲ್ಲಿ ಮುಖ್ಯ ಪಾತ್ರವನ್ನು ವಹಿಸಲಿದ್ದಾರೆ
ಸೂಪರ್ ಸ್ಟಾರ್ ರಜನಿಕಾಂತ್ ಅವರ ʼಜೈಲರ್ʼ ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಕೆಲವು ಹಿಂದಿನ ದಿನಗಳ ಹಿಂದೆಜೈಲರ್ ಚಿತ್ರದ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ಅಧಿಕೃತವಾಗಿ ಪೋಸ್ಟರ್ ಹಂಚಿಕೊಂಡು ಹೇಳಿತ್ತು.
ಈಗ ಧನುಷ್ ನಟನೆಯ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಪಾತ್ರ ನಿರ್ವಹಿಸುತ್ತಿತುವ ಬಗ್ಗೆ ಒಂದು ಪೋಸ್ಟರ್ ಮೂಲಕ ಖಚಿತ ಪಡಿಸಿದ್ದಾರೆ.
ಕ್ಯಾಪ್ಟನ್ ಮಿಲ್ಲರ್ ಚಿತ್ರವನ್ನು ನವ ನಿರ್ದೇಶಕ ಅರುಣ್ ಮದೇಶ್ವರನ್ ನಿರ್ದೇಶಸಲಿದ್ದು, ಇದರ ಮುಖ್ಯ ಭೂಮಿಕೆಯಲ್ಲಿ ಧನುಷ್, ಸಂದೀಪ್ ಕೃಷ್ಣ, ಪ್ರಿಯಾಂಕ ಮೋಹನ್ ನಟಿಸಲ್ಲಿದ್ದಾರೆ.
ತಮಿಳಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಸತ್ಯ ಜ್ಯೋತಿ ಬಂಡವಾಳ ಹೂಡಿದ್ದಾರೆ, ಈ ಚಿತ್ರದ ಕತೆ 80-90 ದಶಕದಲ್ಲಿ ನಡೆಯುವ ಆಗಿದ್ದು, ಶಿವಣ್ಣನ ವಿಭಿನ್ನ ಪಾತ್ರವನ್ನು ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
ಶಿವಣ್ಣ ಸದ್ಯ ಕನ್ನಡಲ್ಲಿ ಶ್ರೀನಿ ನಿರ್ದೆಶನದ ʼಘೋಸ್ಟ್ʼ ನಲ್ಲಿ ನಟಿಸುತ್ತಿದ್ದು, ಅವರ ವೇದ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಡಿಸೆಂಬರ್ 23ಕ್ಕೆ ತೆರೆಕಾಣಲಿದೆ.

