ಕಳೆದ ವರ್ಷ ಬೆನ್ನು ನೋವಿನ ಕಾರಣದಿಂದ ಕ್ರಿಕೆಟ್ ನಿಂದ ದೂರ ಉಳಿದಿದ್ದ ಬಲಗೈ ವೇಗಿ
ಜಸ್ಪ್ರೀತ್ ಬುಮ್ರಾ ಬಹು ಸಮಯದ ಬಳಿಕ ಕಮ್ ಬ್ಯಾಕ್ ಮಾಡುವ ಸನಿಹದಲ್ಲಿದ್ದರು. ಇನ್ನೇನು ಶ್ರೀಲಂಕಾ ವಿರುದ್ಧದ 3 ಏಕದಿನ ಪಂದ್ಯಗಳ ಸರಣಿಗಾಗಿ ಗುವಾಹಣಿ ಪ್ರಯಾಣಿಸಬೇಕಾದ ಬುಮ್ರಾ ಅಂತಿಮ ಕ್ಷಣದಲ್ಲಿ ತಂಡದಿಂದ ಹೊರಗುಳಿದಿದ್ದಾರೆ.
ಈ ಬಗ್ಗೆ ಬಿಸಿಸಿಐ ಮಾಹಿತಿ ನೀಡಿದ್ದು, ಬುಮ್ರಾ ಇನ್ನು ಉತ್ತಮ ರೀತಿಯಲ್ಲಿ ಬೌಲಿಂಗ್ ಮಾಡುವ ಸಲುವಾಗಿ ಅವರಿಗೆ ಇನ್ನಷ್ಟು ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಈ ನಿರ್ಧಾರವನ್ನು ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಲಾಗಿದೆ ಎಂದು ಹೇಳಿದೆ.
ಸದ್ಯ ಬುಮ್ರಾ ಅವರು ಜಾಗಕ್ಕೆ ಬದಲಿ ಆಟಗಾರರನ್ನು ಬಿಸಿಸಿಐ ಹೆಸರಿಸಿಲ್ಲ.
ಬಿಸಿಸಿಐ ಮೊದಲು ಏಕದಿನ ಸರಣಿಗೆ ಬುಮ್ರಾ ಅವರ ಹೆಸರನ್ನು ಘೋಷಿಸಿರಲಿಲ್ಲ. ಆ ಬಳಿಕ ಹೊಸ ವರ್ಷದ ಸಮಯದಲ್ಲಿ ಅವರ ಹೆಸರನ್ನು ಸೇರಿಸಿತ್ತು.
ಸೆಪ್ಟೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಆಡಿದ ನಂತರ ಬೆನ್ನು ನೋವು ಕಾಣಿಸಿಕೊಂಡ ಕಾರಣ ಅವರು ಮತ್ತೆ ಕ್ರಿಕೆಟ್‌ನಿಂದ ದೂರವುಳಿದರು. 2022ರ ಟಿ20 ವಿಶ್ವಕಪ್‌ನಲ್ಲಿ ಕೂಡ ಅವರು ಆಡಲು ಸಾಧ್ಯವಾಗಲಿಲ್ಲ.

