“ದಾರಿ ಯಾವುದಯ್ಯಾ ವೈಕುಂಠಕೆ” ಚಿತ್ರದ ಮೂಲಕ ಗಮನ ಸೆಳೆದಿದ್ದ ಸಿದ್ದು ಪೂರ್ಣಚಂದ್ರ ಮತ್ತೊಂದು ವಿಭಿನ್ನ ಪ್ರಯೋಗದೊಂದಿಗೆ ಬರಲು ಸಿದ್ದರಾಗಿದ್ದಾರೆ.
“ಪೂರ್ಣಚಂದ್ರ ಫಿಲಂಸ್” ನಿರ್ಮಾಣದ ಚೊಚ್ಚಲ ಕಾಣಿಕೆ “ಬ್ರಹ್ಮ ಕಮಲ” ಎನ್ನುವ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಹೊಸ ಪ್ರಯೋಗವನ್ನು ತರಲು ಮುಂದಾಗಿದ್ದಾರೆ.
“ಬ್ರಹ್ಮ ಕಮಲ”ಕ್ಕೆ ಸಿದ್ದು ಪೂರ್ಣಚಂದ್ರರವರು ಕಥೆ,ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿ ಬೆಂಗಳೂರಿನ ಸುತ್ತಮುತ್ತ ನಡೆಯುತ್ತಿದೆ.
ರಾತ್ರಿ ಹುಟ್ಟಿ ರಾತ್ರಿಯೇ ಮುರುಟಿ ಹೋಗುವ ಒಂದು ಮಗುವಿನ ಸುತ್ತ ಘಟಿಸುವ ಕಥೆಯೇ ಬ್ರಹ್ಮ ಕಮಲದ ಒನ್ ಲೈನ್ ಸ್ಟೋರಿ.
ತಾರಾಗಣದಲ್ಲಿ ಅಧ್ವಿತಿ ಶೆಟ್ಟಿ, ಲೋಕೇಂದ್ರ ಸೂರ್ಯ, ಋತು ಚೈತ್ರ, ಮಮತಾ ರಾಹುತ್,ಪ್ರಮಿಳಾ ಸುಬ್ರಹ್ಮಣ್ಯ, ಬಲ ರಾಜ್ವಾಡಿ, ಸಿದ್ದು ಪೂರ್ಣಚಂದ್ರ, ಆಟೋ ನಾಗರಾಜ್, ಗಂಡಸಿ ಸದಾನಂದಸ್ವಾಮಿ, ಇನ್ನೂ ಮುಂತಾದವರು ಅಭಿನಯಿಸುತ್ತಿದ್ದಾರೆ.
ಛಾಯಾಗ್ರಹಣ ಲೋಕೇಂದ್ರ ಸೂರ್ಯ, ಸಂಕಲನ ದೀಪು ಸಿ ಎಸ್, ಸಂಗೀತ ಅನಂತ್ ಆರ್ಯನ್ ಹೊಣೆ ಹೊತ್ತಿದ್ದಾರೆ. ಕಾರ್ಯಕಾರಿ ನಿರ್ಮಾಪಕರು ಎ.ಕೆ. ಪುಟ್ಟರಾಜು. ನಿರ್ಮಾಣ ನಿರ್ವಹಣೆ ಮತ್ತು ವಸ್ತ್ರ ವಿನ್ಯಾಸ ಋತು ಚೈತ್ರ.

