HomeNewsದುನಿಯಾ ವಿಜಿ ಹುಟ್ಟು ಹಬ್ಬಕ್ಕೆ 'ಭೀಮ' ಟೀಸರ್ ಔಟ್

ದುನಿಯಾ ವಿಜಿ ಹುಟ್ಟು ಹಬ್ಬಕ್ಕೆ ‘ಭೀಮ’ ಟೀಸರ್ ಔಟ್

ಇತ್ತೀಚೆಗಷ್ಟೇ ಟಾಲಿವುಡ್ ಬಾಲಯ್ಯ ನಟನೆಯ “ವೀರಸಿಂಹ ರೆಡ್ಡಿ’’ ಚಿತ್ರದಲ್ಲಿ ನಟಿಸಿ ಗಮನ ಸೆಳೆದಿರುವ ದುನಿಯಾ ವಿಜಯ್ ಅವರಿಗೆ ಇದೀಗ ಟಾಲಿವುಡ್ ರಂಗದಲ್ಲೂ ಭರ್ಜರಿ ಬೇಡಿಕೆ ವ್ಯಕ್ತವಾಗುತ್ತಿದೆ.

ದಿಗ್ಗಜ ನಟ ಬಾಲಯ್ಯ ಅವರು ಎದುರು ಖಡಕ್‌ ರೋಲ್ ನಲ್ಲಿ ತೊಡೆ ತಟ್ಟಿ ನಿಂತ ದುನಿಯಾ ವಿಜಯ್ ಅನ್ಯಭಾಷಾ ಸಿನಿಮಾ‌ ಪ್ರೇಮಿಗಳ ಅಭಿಮಾನವನ್ನು ಪಡೆದುಕೊಂಡಿದ್ದಾರೆ.

‘ಸಲಗ’ ಬಳಿಕ ವಿಜಯ್ ನಟಿಸಿ, ನಿರ್ದೇಶಿಸುತ್ತಿರುವ ‘ಭೀಮ’ ಅನೌನ್ಸ್ ಆದ ದಿನದಿಂದಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಸಿನಿಮಾದ ಮೇಕಿಂಗ್ ವಿಡಿಯೋ ಗಮನ ಸೆಳೆದಿತ್ತು.

ಇದೀಗ ಈ ಸಿನಿಮಾದ ಬಗ್ಗೆ ಹೊಸ ಅಪ್ಡೇಟ್ ಹೊರ ಬಿದ್ದಿದ್ದು, ದುನಿಯಾ ವಿಜಿ ಜನ್ಮದಿನಕ್ಕೆ ಅಂದರೆ ಇದೇ ಜ.20 ಕ್ಕೆ ‘ಭೀಮ’ ಟೀಸರ್ ರಿಲೀಸ್ ‌ಮಾಡುವ ಯೋಜನೆಯನ್ನು ಚಿತ್ರ ತಮಡ ಹಾಕಿಕೊಂಡಿದೆ.

ಎಂಟು ತಿಂಗಳು ಚಿತ್ರಕ್ಕಾಗಿ ತಯಾರಿ ಮಾಡಿಕೊಂಡು ‘ಭೀಮ’ನಾಗಿ ಕಾಣಿಸಿಕೊಳ್ಳುತ್ತಿರುವ ವಿಜಿಯನ್ನು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.

RELATED ARTICLES

Most Popular

Share via
Copy link
Powered by Social Snap