ಕನ್ನಡದಲ್ಲಿ ಈಗಾಗಲೇ ಹತ್ತಾರು ಪೋಷಕ ಪಾತ್ರಗಳಲ್ಲಿ ನಟಿಸಿರುವ ಖಡಕ್ ಲುಕ್ ನ ರವಿಶಂಕರ್ ‘ಬೀಗ’ ಎನ್ನುವ ಸಿನಿಮಾದ ಮೂಲಕ ನಾಯಕನಾಗಿ ಎಂಟ್ರಿ ಆಗಲು ರೆಡಿಯಾಗಿದ್ದಾರೆ.
ಹೆಚ್.ಎಂ.ಶ್ರೀನಂದನ್ ಅವರು ನಿರ್ದೇಶನ ಮಾಡಿರುವ ‘ಬೀಗ’ ಸಿನಿಮಾದ ಟೀಸರ್ ರಿಲೀಸ್ ಆಗಿದೆ.
ಟೀಸರ್ ನಲ್ಲಿ ಪ್ರೀತಿ ಮಾಡಿ ಮೋಸ ಮಾಡುವ, ಮೋಹದ ಹಿಂದೆ ಓಡುವ ಜನರನ್ನು ಸದೆ ಬಡಿಯುವ ನಾಯಕನನ್ನು ತೋರಿಸಲಾಗಿದೆ. ರವಿಶಂಕರ್ ಅನ್ಯಾಯದ ವಿರುದ್ಧ ಹೋರಾಡುವ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.


ವಿಎಂಆರ್ ಪ್ರೊಡಕ್ಷನ್ಸ್ ಅಡಿಯಲ್ಲಿ ಸಿನಿಮಾವನ್ನು ರಮೇಶ್ ಮುನಿರತ್ನಪ್ಪ ನಿರ್ಮಾಣ ಮಾಡುತ್ತಿದ್ದಾರೆಮ
ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ರವಿಶಂಕರ್,ಜಡಿ ಆಕಾಶ್ , ಸೈಯದ್ ಇರ್ಫಾನ್,ಶ್ರೀನಂದನ್, ಸಹಾರ್ ಅಫ್ಸಾ,ಸುಮಿತಾ ಬಜಾಜ್, ಸುಚೇಂದ್ರ ಅವರು ಕಾಣಿಸಿಕೊಳ್ಳಲಿದ್ದಾರೆ.
ಎಂಬಿ ಹಳ್ಳಿಕಟ್ಟೆ , ವಿನಾಸ್ ನಾಗರಾಜ್ ಮೂರ್ತಿ ಅವತು ಡಿಒಪಿ ಆಗಿ ಕೆಲಸ ಮಾಡಿದ್ದು, ಶ್ರೀಗುರು ಮ್ಯೂಸಿಕ್,ವೆಂಕಿ ಯುಡಿಯು ಸಂಕಲನ ಚಿತ್ರಕ್ಕೆಯಿರಲಿದೆ.

