ಝೈದ್ ಖಾನ್ ಅವರ ಪ್ಯಾನ್ ಇಂಡಿಯಾ ಸಿನಿಮಾ ʼಬನಾರಸ್ʼ ಬಿಡುಗಡೆಗೆ ರೆಡಿಯಾಗಿದೆ. ಭರ್ಜರಿ ಪ್ರಮೋಷನ್ ನಲ್ಲಿ ಬ್ಯುಸಿಯಾಗಿರುವ ಚಿತ್ರ ತಂಡ ಟೆಂಪಲ್ ರನ್ ಮಾಡಿ, ಚಿತ್ರ ಯಶಸ್ಸಿಗೆ ಪ್ರಾರ್ಥನೆ ಮಾಡುತ್ತಿದೆ.
ಕರ್ನಾಟಕ, ಕೇರಳ ಮತ್ತು ಉತ್ತರ ಭಾರತದ ಬನಾರಸ್ ವಿತರಣಾ ಹಕ್ಕುಗಳನ್ನು ಸೂಪರ್ ಹಿಟ್ ಚಿತ್ರಗಳನ್ನು ವಿತರಣೆ ಮಾಡಿರುವ ವಿತರಣಾ ಸಂಸ್ಥೆಗಳಿಗೆ ಸೇಲ್ ಆಗಿವೆ.
ನಾನಾ ಭಾಷೆಯಲ್ಲಿ ರಿಲೀಸ್ ಆಗಲಿರುವ ʼಬನಾಸರ್ʼ ಸಿನಿಮಾದ ತಮಿಳುನಾಡಿ ವಿತರಣಾ ಹಕ್ಕನ್ನು ಆ ಭಾಗದ ಖ್ಯಾತ ವಿತರಣಾ ಸಂಸ್ಥೆ ಶಕ್ತಿ ಫಿಲ್ಮ್ ಫ್ಯಾಕ್ಟರಿ ಪಡೆದುಕೊಂಡಿದೆ.


ಟೈಮ್ ಟ್ರಾವೆಲ್ ಕಥೆಯನ್ನು ಭಿನ್ನವಾಗಿ ಹೇಳಲು ಹೊರಟಿರುವ ಜಯತೀರ್ಥ ಅವರ ʼಬನಾರಸ್ʼ ಸಿನಿಮಾದ ಟ್ರೇಲರ್ ಹಾಗೂ ಹಾಡುಗಳಿಗೆ ದೊಡ್ಡಮಟ್ಟದ ರೆಸ್ಪಾನ್ಸ್ ಕೊಟ್ಟಿದ್ದಾರೆ.
ಝೈದ್ ಖಾನ್ – ಸೋನಲ್ ಮೊದಲ ಬಾರಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಸಿನಿಮಾದ ನಿರೀಕ್ಷೆ ಹೆಚ್ಚಾಗಿಸಿದೆ.
ನವೆಂಬರ್ 4 ದೇಶಾದ್ಯಂತ ʼಬನಾರಸ್ʼ ತೆರೆಗೆ ಬರಲಿದೆ.

