ಇತ್ತೀಚಿನ ದಿನಗಳಲ್ಲಿ ಕನ್ನಡದ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಕೆಜಿಎಫ್, ವಿಕ್ರಾಂತ್ ರೋಣ, 777 ಚಾರ್ಲಿ ಚಿತ್ರಗಳು ಪ್ಯಾನ್ ಇಂಡಿಯಾದಲ್ಲಿ ಸಖತ್ ಸದ್ದು ಹಾಗೂ ಕಲೆಕ್ಷನ್ ಮಾಡಿದೆ.
ಸ್ಯಾಂಡಲ್ ವುಡ್ ನಲ್ಲಿ ಹಿಟ್ ಚಿತ್ರವನ್ನು ನೀಡಿರುವ ಜಯತೀರ್ಥ ಅವರ ‘ಬನಾರಸ್’ ಚಿತ್ರ ಅದ್ಧೂರಿ ಬಜೆಟ್ ನಲ್ಲಿ ಸಿದ್ದವಾಗಿದ್ದು, ಚಿತ್ರದ ರಿಲೀಸ್ ಡೇಟ್ ಗಣೇಶ ಹಬ್ಬಕ್ಕೆ ರಿವೀಲ್ ಆಗಿದೆ.
ಸಿನಿಮಾ ಸಟ್ಟೇರಿದ ದಿನದಿಂದ ಇವತ್ತಿನವರೆಗೂ ಚಿತ್ರ ಚರ್ಚೆಯಲ್ಲಿಯೇ ಇದೆ. ಬಹು ತಾರಾಗಣ, ಅನುಭವಿ ತಾಂತ್ರಿಕ ತಂಡವನ್ನೊಳಗೊಂಡಿರುವ ಚಿತ್ರದಲ್ಲಿ ಝೈದ್ ಖಾನ್ ಚೊಚ್ಚಲವಾಗಿ ನಾಯಕ – ನಟನಾಗಿ ಕಾಣಿಸಿಕೊಳ್ಳುತ್ತಿರುವುದು ಕೂಡ ಒಂದು ವಿಶೇಷ.


ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು ಬಂದಿರುವ ಝೈದ್ ಖಾನ್ ಭರವಸೆ ಮೂಡಿಸಿದ್ದಾರೆ. ‘ಮಾಯಗಂಗೆ’, ಹೆಣ್ಣು ‘ಹಡೆಯಳು ಬೇಡ’ ಎನ್ನುವ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿರೋದು ಚಿತ್ರ ತಂಡಕ್ಕೆ ಬೂಸ್ಟರ್ ಆಗಿದೆ.
ಸೋನಲ್ ಮಂಥೆರೋ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರ ಕೆಮಿಸ್ಟ್ರಿ ಚೆನ್ನಾಗಿ ಮೂಡಿ ಬಂದಿದೆ.
ನವೆಂಬರ್ 4 ರಂದು ಚಿತ್ರ ಪ್ಯಾನ್ ಇಂಡಿಯಾದಲ್ಲಿ ರಿಲೀಸ್ ಆಗಲಿದೆ ಎಂದು ಚಿತ್ರ ತಂಡ ಸ್ಪೆಷಲ್ ಪೋಸ್ಟರ್ ಮೂಲಕ ಹೇಳಿದೆ.

